Cannes 2025: ಹೋಮ್ಬೌಂಡ್ ಚಿತ್ರದ ಪ್ರೀಮಿಯರ್ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ನಟಿ ಜಾನ್ವಿ ಕಪೂರ್;
ಮೇ 13ರಿಂದ ಕಾನ್ಸ್ ಚಿತ್ರೋತ್ಸವ ಅದ್ದೂರಿಯಾಗಿ ಆರಂಭ ಆಗಿದೆ. ಚಿತ್ರರಂಗದ ಹಲವು ನಟ ನಟಿಯರು ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದು ಜಾನ್ವಿ ಕಪೂರ್ ಕೂಡ ಫಿಲ್ಮ್ ಫೆಸ್ಟಿವಲ್ ಗೆ ಗ್ರಾಂಡ್ ಆಗಿ ಎಂಟ್ರಿ ನೀಡಿದ್ದಾರೆ. ಸದ್ಯ ಇವರ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.



2025ರ ಕಾನ್ಸ್ ಚಲನಚಿತ್ರೋತ್ಸವದಲ್ಲಿ ‘ಹೋಮ್ ಬೌಂಡ್ ಚಿತ್ರದ ಪ್ರೀಮಿಯರ್ ನಲ್ಲಿ ಜಾನ್ವಿ ಕಪೂರ್ ಗ್ಲ್ಯಾಮರ್ ಆಗಿ ಕಾಣಿಸಿಕೊಂಡರು. ನೋಡಲು ಪ್ರಿನ್ಸೆನ್ ನಂತೆ ಕಾಣುತ್ತಿದ್ದ ಜಾನ್ವಿಯ ಫೋಟೋ ಗಳನ್ನು ಅವರ ಸಹೋದರಿ ರಿಯಾ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೋಮ್ಬೌಂಡ್ ಸಿನಿಮಾ ತಂಡದೊಂದಿಗೆ ನಟಿ ಜಾನ್ವಿ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದು, ಹೋಮ್ ಬೌಂಡ್ ಚಿತ್ರ ಕೂಡ ಪ್ರದರ್ಶನ ಗೊಂಡಿತ್ತು. ಈ ಪ್ರೀಮಿಯರ್ನಲ್ಲಿ ಜಾನ್ವಿ ಕಪೂರ್ ಬ್ಯಾಕ್ಲೆಸ್ ಹಸಿರು ಬಣ್ಣದ ಉಡುಗೆ ತೊಟ್ಟು ಸ್ಟನಿಂಗ್ ಲುಕ್ ನಿಂದ ಕಂಗೊಳಿಸಿದ್ದಾರೆ.

ಪ್ರೀಮಿಯರ್ನಲ್ಲಿ ಜಾನ್ವಿ ಜೊತೆ ಹೋಮ್ಬೌಂಡ್’ ಚಿತ್ರದ ಸಹ ಕಲಾವಿದರಾದ ಇಶಾನ್ ಖಟ್ಟರ್, ವಿಶಾಲ್ ಜೆತ್ವಾ, ನಿರ್ದೇಶಕ ನೀರಜ್ ಘಯ್ವಾನ್, ನಿರ್ಮಾಪಕ ಕರಣ್ ಜೋಹರ್ ಕೂಡ ಭಾಗಿಯಾಗಿದ್ದರು. ಜಾನ್ವಿ ಕಪೂರ್ ಈ ಸಂದರ್ಭದಲ್ಲಿ ಪ್ರಸಿದ್ಧ ಡಿಸೈನರ್ ಅನಮಿಕಾ ಖನ್ನಾ ಅವು ತಯಾರಿಸಿದ ಹಸಿರು ಗೌನ್ ಧರಿಸಿದ್ದರು.

ಈ ಹಸಿರು ಬಣ್ಣದ ಬ್ಯಾಕ್ಲೆಸ್ ಗೌನ್ನಲ್ಲಿ ಎಂಬ್ರಾಯ್ಡೆರಿ ಡಿಸೈನ್ ನಟಿಗೆ ವಿಭಿನ್ನ ಲುಕ್ ನೀಡಿದೆ. ಇದರ ಜೊತೆ ಗೌನ್ ಗೆ ಹೊಂದುವಂತ ಆಭರಣ ತೊಟ್ಟಿದ್ದು ಈ ಕಾಂಬಿನೇಶನ್ನಿಂದ ಮತ್ತಷ್ಟು ಮೆರುಗು ನೀಡಿದೆ. ನಟಿ ಗ್ರೀನ್ ಬ್ಯಾಕ್ ಲೇಸ್ ಗೌನ್ ನಲ್ಲಿ ಅಪ್ಸರೆಯಂತೆ ಕಂಡುಬಂದಿದ್ದು ಸಾಫ್ಟ್ ನ್ಯೂಡ್ ಮೇಕಪ್ ಮೂಲಕ ಮತ್ತಷ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ಈ ಲುಕ್ ಸೋಷಿ ಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ನಟಿಯ ಅಭಿಮಾನಿಗಳು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.

ಜಾನ್ವಿ ಅವರ ಫಿಲ್ಮ್ ಫೆಸ್ಟಿವಲ್ ನ ಮೊದಲ ಲುಕ್ ಕೂಡ ಗಮನ ಸೆಳೆದಿತ್ತು. ನಟಿ ಜಾನ್ವಿ ಪಿಂಕ್ ಬಣ್ಣದ ಗೌನ್ ಧರಿಸಿದ್ದು ಇದನ್ನು ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ್ದಾರೆ. ಕಸ್ಟಮ್-ಮೇಡ್ ಪಿಂಕ್ ಔಟ್ಫಿಟ್ನಲ್ಲಿ ನಟಿ ಜಾಹ್ನವಿ ತನ್ನ ತಾಯಿ ಯನ್ನೇ ಹೋಲುವಂತಿದ್ದರು.ನಟಿ ಬೇಬಿ ಪಿಂಕ್ ಗೌನ್ ಗೆ ಹೊಂದುವಂತಹ ಮ್ಯಾಚಿಂಗ್ ಮುತ್ತಿನ ಮಣಿಗಳ ಆಭರಣ ತೊಟ್ಟಿದ್ದು ಈ ಕಾಂಬಿನೇಶನ್ನಿಂದ ಮತ್ತಷ್ಟು ಅಂದ ಹೆಚ್ಚಿಸಿದೆ.