ಗೋವಿಂದ ಯಾವುದೋ ಮಹಿಳೆಗಾಗಿ ಕುಟುಂಬವನ್ನು ಬಿಟ್ಟು ಹೋಗುವಷ್ಟು ಮುರ್ಖನಲ್ಲ; ಪತ್ನಿ ಸುನೀತಾ
ಕಳೆದ ಕೆಲವು ತಿಂಗಳುಗಳಿಂದ ಗೋವಿಂದ ಮತ್ತು ಸುನೀತಾ ಅಹುಜಾ ಅವರ ವಿಚ್ಛೇದನದ ವದಂತಿ ಹರಡಿದೆ. ಸುನೀತಾ ಸಂದರ್ಶನವೊಂದರಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಈ ಹಿಂದೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದರು. ಸುನೀತಾ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆಂದು ಒಪ್ಪಿಕೊಂಡಿದ್ದರೂ, ಇತ್ತೀಚಿನ ಸಂದರ್ಶನದಲ್ಲಿ ಅವರು ವಿಚ್ಛೇದನದ ವದಂತಿಯನ್ನು ನಿರಾಕರಿಸಿದ್ದಾರೆ.

Sunita Ahuja says Govinda will never leave his family


ಬಾಲಿವುಡ್ ನಟ ಗೋವಿಂದ ಹಾಗೂ ಪತ್ನಿ ಸುನೀತಾ ಅಹುಜಾ ಸಂಬಂಧದಲ್ಲಿ ಬಿರುಕು ಉಂಟಾಗಿದ್ದು, ಇಬ್ಬರೂ ವಿಚ್ಛೇದ ನಕ್ಕೆ ಮುಂದಾಗಿದ್ದಾರೆ ಎನ್ನುವ ಗಾಸಿಪ್ ಎಲ್ಲೆಡೆ ಹಬ್ಬಿದೆ. ಇದೀಗ ವಿಚ್ಚೇದನ ಊಹಾಪೋಹಗಳಿಗೆ ಸುನೀತಾ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ, ಸುನೀತಾ ವಿಚ್ಛೇದನ ವದಂತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನೀವು ವಿಚ್ಛೇದನ ವಿಚಾರವನ್ನು ಗೋವಿಂದ ಅವರಿಗೆ ನೇರವಾಗಿ ಕೇಳಿದರೆ, ಅದು ಬೇರೆಯದೇ ಕಥೆಯಾಗಿರುತ್ತದೆ. ಅದನ್ನು ಬಿಟ್ಟು ಸುಮ್ಮನೆ ಗಾಸಿಪ್ ಸುದ್ದಿ ಹಬ್ಬಿಸಬೇಡಿ. ಗೋವಿಂದ ಅವರಿಗೆ ನಾನಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ನಾನು ಗೋವಿಂದನಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಡಿವೊರ್ಸ್ ವದಂತಿ ಬಗ್ಗೆ ತೆರೆ ಎಳೆದಿದ್ದಾರೆ.

"ವದಂತಿ ಹಬ್ಬಿಸುವ ಮೊದಲು ಅದು ನಿಜವೇ ಎಂದು ಕೇಳಿ. ಗೋವಿಂದ ಯಾವುದೇ ಮೂರ್ಖ ವ್ಯಕ್ತಿಗಾಗಿ ಅಥವಾ ಮೂರ್ಖ ಮಹಿಳೆಗಾಗಿ ತನ್ನ ಕುಟುಂಬವನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲʼʼ ಎಂದು ಸುನೀತಾ ದೃಢವಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸುನೀತಾ ಅಹುಜಾ ಕಳೆದ ಕೆಲ ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ʼʼನಾನು ಹಾಗೂ ಗೋವಿಂದ ಪ್ರತ್ಯೇಕವಾಗಿ ಇದ್ದೇವೆ. ಗೋವಿಂದ ತಮ್ಮ ಅಪಾರ್ಟ್ಮೆಂಟ್ನ ಎದುರಿನ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ನಾನು ನನ್ನ ಮಕ್ಕಳು ಬೇರೆ ಫ್ಲಾಟ್ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಕಳೆದ 12 ವರ್ಷಗಳಿಂದ ಹುಟ್ಟುಹಬ್ಬವನ್ನು ಒಂಟಿಯಾಗಿ ಆಚರಿಸಿಕೊಳ್ಳುತ್ತಿ ದ್ದೇನೆʼʼ ಎಂದು ತಿಳಿಸಿದ್ದರು. ಹೀಗಾಗಿ ನಟ ಗೋವಿಂದ ಅವರ 37 ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ ಎಂಬ ಗಾಸಿಪ್ ಹರಿದಾಡಿತ್ತು.

ನಟ ಗೋವಿಂದ ಬಾಲಿವುಡ್ನ ಸೂಪರ್ ಸ್ಟಾರ್. ಗೋವಿಂದ-ಸುನೀತಾ ಮಾರ್ಚ್ 1987ರಲ್ಲಿ ವಿವಾಹವಾಗಿದ್ದು ಬಹಳ ಸಮಯದವರೆಗೆ ತಮ್ಮ ಮದುವೆಯ ವಿಚಾರವನ್ನು ಮುಚ್ಚಿಟ್ಟಿದ್ದರು. ಈ ದಂಪತಿಗೆ ಟಿನಾ ಅಹುಜಾ ಮತ್ತು ಯಶವರ್ಧನ್ ಅಹುಜಾ ಎಂಬ ಮಕ್ಕಳಿದ್ದಾರೆ.