Friday, 2nd June 2023

ಅಂಬಿ ಪುಣ್ಯತಿಥಿ

ರೆಬಲ್ ಸ್ಟಾಾರ್ ಅಂಬರೀಶ್ ನಮ್ಮನ್ನು ಅಗಲಿ ಒಂದು ವರ್ಷವೇ ಕಳೆದಿದೆ. ಅಂಬರೀಶ್ ಮೊದಲನೇ ವರ್ಷದ ಪುಣ್ಯ ತಿಥಿ ಕಾರ್ಯ ನಡೆಯಿತು. ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್, ಅಂಬಿ ಸಮಾಧಿ ಬಳಿ ಭೇಟಿ ನೀಡಿ ವರ್ಷದ ಪುಣ್ಯ ತಿಥಿ ಕಾರ್ಯವನ್ನ ಅಂಬಿ ಸಮಾಧಿಗೆ ನಮನ ಸಲ್ಲಿಸಿದ ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಜತೆ ಚಾಲೆಂಜಿಂಗ್ ಸ್ಟಾಾರ್ ದರ್ಶನ್, ನಿರ್ಮಾಪಕ್ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಅಂಬಿ ಸಮಾಧಿ ಬಳಿ ಭೇಟಿ ನೀಡಿ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಅಂಬಿ ಅವರ ಮೊದಲನೇ ವರ್ಷದ ಪುಣ್ಯ ತಿಥಿಯ ಅಂಗವಾಗಿ ಡೆಂಟಲ್’ಕ್ಯಾಾಂಪ್’ಗೆ ಚಾಲೆಂಜಿಂಗ್ ಸ್ಟಾಾರ್ ದರ್ಶನ್ ಹಾಗೂ ಮಂಡ್ಯ ಸಂಸದೆ ಸುಮಲತಾ ಚಾಲನೆ ನೀಡಿದರು. ಅಂಬರೀಶ್ ಸ್ಮಾಾರಕ ವಿಚಾರವಾಗಿ ಮಾತನಾಡಿದ ಸುಮಲತಾ ಅಂಬರೀಶ್ ರಾಜ್ಯ ಸರ್ಕಾರ ಬದಲಾದ ಕಾರಣ ಸ್ಮಾಾರಕ ಕೆಲಸ ವಿಳಂಬ ಆಗುತ್ತಿಿದೆ. ಫಿಲಂ ಚೇಂಬರ್ ಮೂಲಕ ಈಗಿನ ರಾಜ್ಯ ಸರ್ಕಾರಕ್ಕೆೆ ಈ ಕುರಿತು ಮನವಿ ಮಾಡಲು ತೀರ್ಮಾನಿಸಲಾಗಿದೆ. ಆದಷ್ಟೂ ಬೇಗ ಕೆಲಸ ಆರಂಭವಾಗುತ್ತೆೆ ಎಂದು ತಿಳಿಸಿದರು. ಅಂಬಿ ಸಮಾಧಿಯ ಬಳಿ ಅಪಾರ ಸಂಖ್ಯೆೆಯಲ್ಲಿ ಅಭಿಮಾನಿಗಳು ಧಾವಿಸಿದ್ದರು.

error: Content is protected !!