Friday, 2nd June 2023

ಕಿಚ್ಚನಿಗೆ ಬಂದ ಉಡುಗೊರೆ

ನಮ್ಮ ಕಿಚ್ಚನ ಖದರ್ ಅಂತಹದ್ದು ಅಭಿನಯ, ಮಾತಿನ ವೈಖರಿ, ನಟನಾ ಚಾತುರ್ಯಾ ವಾವ್ ಎಲ್ಲವೂ ಚೆಂದ. ಅದಕ್ಕೆೆ ಅವರಿಗೆ ಸ್ಯಾಾಂಡಲ್‌ವುಡ್ ಮಾಣಿಕ್ಯ, ಅಭಿನಯ ಚಕ್ರವರ್ತಿ ಎಂಬ ಬಿರುದು ಸಂದಿರುವುದು. ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲ ಟಾಲಿವುಡ್, ಬಾಲಿವುಡ್, ಕಾಲಿವುಡ್‌ನಲ್ಲೂ ನಟಿಸಿ ಪ್ರಸಿದ್ಧಿಿ ಪಡೆದವರು. ಅಂತೆಯೇ ನಟಿಸಿದ ಎಲ್ಲಾಾ ಭಾಷೆಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾಾರೆ. ಪ್ರಪಂಚದಾದ್ಯಂತ ಅಭಿಮಾನಿಗಳಿಗೆದ್ದಾರೆ. ಕನ್ನಡ ಮಾತ್ರವಲ್ಲದೆ ಗಡಿಗೂ ಮೀರಿ ಅಭಿಮಾನಿಗಳನ್ನು ಸಂಪಾದಿರುವ ಮಾಣಿಕ್ಯ, ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿಿದ್ದಾರೆ. ’ಕೋಟಿಗೊಬ್ಬ-3’ ಚಿತ್ರದ ಜೊತೆಗೆ ಕಿರುತೆರೆಯಲ್ಲಿಯೂ ಕಿಚ್ಚ ಬ್ಯುಸಿಯಾಗಿದ್ದಾರೆ. ಸುದೀಪ್ ಸಿನಿಮಾಗಳಲ್ಲಿ ಮಾತ್ರವಲ್ಲ ಕಿರುತೆಯಲ್ಲಿನ ರಿಯಾಲಿಟಿ ಶೋಗಳನ್ನು ಅಷ್ಟೇ ಅಚ್ಚುಕಟ್ಟಾಾಗಿ ನಡೆಸಿದಕೊಡುತ್ತಾಾರೆ. ಕಿಚ್ಚನ ಕಾರ್ಯಕ್ರಮ ಇಲ್ಲವೇ ಸಿನಿಮಾ ಅಂದರೆ ಸಾಕು ಪ್ರೇಕ್ಷಕರು ತುದಿಗಾಲಲ್ಲಿ ನಿಂತು ನೋಡುತ್ತಾಾರೆ. ಂತೆಯೇ ಕಿಚ್ಚನ ಸಿನಿಮಾ ಹಾಗೂ ‘ಬಿಗ್ ಬಾಸ್’ ನಡೆಸಿಕೊಡುವ ರೀತಿ ನೋಡಿ ದೂರದ ರಷ್ಯಾಾ ಯುವತಿಯೊಬ್ಬರು ಸುದೀಪ್‌ನ ದೊಡ್ಡ ಫ್ಯಾಾನ್ ಆಗಿದ್ದಾಾರೆ. ಕಿಚ್ಚನಿಗೆ ವಿಶೇಷ ಸಂದೇಶವೊಂದನ್ನು ಕಳುಹಿಸಿದ್ದಾರೆ. ರಷ್ಯಾಾದ ಮರೀನಾ ಕಾರ್ಟಿಂಕಾ ಎನ್ನುವ ಸುದೀಪ್ ದೊಡ್ಡ ಅಭಿಮಾನಿಯಿಂತೆ. ಮರೀನಾ ತನ್ನ ಅಭಿಮಾನವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ’ಮಾಣಿಕ್ಯ’ ಬಳಿಕ ಮತ್ತೆೆ ನಿರ್ದೇಶನಕ್ಕೆೆ ಮರಳಿದ ಕಿಚ್ಚ ಸುದೀಪ್ ವಿಡಿಯೋ ಮೂಲಕ ಕಿಚ್ಚನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ನಮಸ್ಕಾಾರ ಸುದೀಪ್ ಅವರೆ. ನಾನು ಮರೀನಾ ಕಾರ್ಟಿಂಕಾ. ನಿಮ್ಮ ಅಭಿನಯ ನನಗೆ ತುಂಬ ಇಷ್ಟ. ನಾನು ಇಲ್ಲಿ, ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಲು ಪ್ರಯತ್ನ ಪಡುತ್ತೇನೆ. ನೀವು ಅದ್ಭುತವಾದ ನಟ. ನಿಮ್ಮ ಸಿನಿಮಾ ನಿಮ್ಮ ಸಿನಿಮಾಗಳನ್ನು ನೋಡಿ ತುಂಬ ಇಷ್ಟಪಟ್ಟಿಿದ್ದೇನೆ. ಕೋಟಿಗೊಬ್ಬ, ಪುಲಿ, ಪೈಲ್ವಾಾನ್, ಹೆಬ್ಬುಲಿ ಸೇರಿದಂತೆ ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ನಾನು ಒಂದು ದಿನ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭಾವಿಸಿದ್ದೇನೆ. ನೀವು ಆರೋಗ್ಯವಾಗಿ ಮತ್ತು ಸಂತೋಷವಾಗಿರಿ ಎಂದು ಹಾರೈಸುತ್ತೇನೆ. ನಮಗೆ ಮನೋರಂಜನೆ ನೀಡುತ್ತಿಿರುವುದಕ್ಕೆೆ ಧನ್ಯವಾದಗಳು ಎಂದು ಹೇಳಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವಕು ರಾಜು ಫ್ಯಾಾನ್ ಗರ್ಲ್ ಪೇಜ್ ನಲ್ಲಿದ್ದ ಈ ವಿಡಿಯೋವನ್ನು ನೋಡಿ ಕಿಚ್ಚ ಸಹ ಪ್ರತಿಕ್ರಿಿಯೆ ನೀಡಿದ್ದಾರೆ. ದೂರದ ರಷ್ಯಾಾದ ಅಭಿಮಾನಿಯ ಅಭಿಮಾನ ಕಂಡು ಸುದೀಪ್ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷ ಅಂದರೆ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ಮರೀನಾ ರಷ್ಯಾಾದಿಂದನೆ ವೀಕ್ಷಿಸುತ್ತಾಾರಂತೆ. ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ-3 ಚಿತ್ರೀಕರಣದ ಕೊನೆಯ ಹಂತದಲ್ಲಿದ್ದಾರೆ. ಇದಾದ ಬಳಿಕ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

error: Content is protected !!