Saturday, 27th July 2024

ಸತ್ಯ ಈಗ ಫುಲ್ ರಿಲ್ಯಾಕ್‌ಸ್‌…!

ಕನ್ನಡ ಚಿತ್ರರಂಗದಲ್ಲಿ ಭಿನ್ನ ವಿಭಿನ್ನ ಕಥೆಯ ಚಿತ್ರಗಳು ತೆರೆಗೆ ಬರುತ್ತಿಿವೆ. ಕೆಲವು ಹಾಸ್ಯಮಯವಾದ ಚಿತ್ರಗಳಾಗಿ ಪ್ರೇಕ್ಷಕರನ್ನು ನಕ್ಕು ನಗಿಸಿದರೆ, ಮತ್ತೆೆ ಕೆಲವು ಥ್ರಿಿಲ್ಲರ್, ಸಸ್ಪೆೆನ್‌ಸ್‌ ಜಾನರ್‌ನಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿಿವೆ. ಇನ್ನೂ ಕೆಲವು ಚಿತ್ರಗಳು ಆಕ್ಷನ್ ಮೂಲಕ ನೋಡಗರನ್ನು ನಿಬ್ಬೆೆರಗಾಗಿಸುತ್ತವೆ. ಜತೆಗೆ ಈ ಎಲ್ಲಾಾ ಅಂಶಗಳನ್ನು ಒಳಗೊಂಡ ಚಿತ್ರಗಳೂ ತೆರೆಗೆ ಬಂದಿವೆ. ಯಶಸ್ವಿಿಯೂ ಆಗಿವೆ. ಅಂತಹ ಸಾಲಿಗೆ ಸೇರುವ ಚಿತ್ರಗಳಲ್ಲಿ ‘ರಿಲ್ಯಾಾಕ್‌ಸ್‌‌ಸತ್ಯ’ ಚಿತ್ರ ಕೂಡ ಒಂದು. ಟೈಟಲ್‌ನಲ್ಲೇ ಒಂದು ಪಂಚಿಂಗ್ ಇದೆ. ರಿಲ್ಯಾಾಕ್‌ಸ್‌ ಇದೆ. ಶೀರ್ಷಿಕೆ ಕೇಳಿದಾಕ್ಷಣ ಚಿತ್ರದಲ್ಲಿ ಏನೋ ಇದೆ ಎಂಬ ಅಂಶ ನಮ್ಮನ್ನು ಸೆಳೆಯುತ್ತದೆ. ಹಾಗೆ ಅಂದುಕೊಂಡರೆ ಅದು ಸತ್ಯವೂ ಹೌದು. ‘ರಿಲ್ಯಾಾಕ್‌ಸ್‌ ಸತ್ಯ’, ಆಕ್ಷನ್, ಕ್ರೈಂ, ಥ್ರಿಿಲ್ಲರ್, ಸಸ್ಪೆೆನ್‌ಸ್‌ ಹೀಗೆ ಎಲ್ಲಾಾ ಅಂಶಗಳನ್ನು ಒಳಗೊಂಡಿರುವ ಚಿತ್ರ. ಅಲ್ಲ, ಯುವ ಸಮೂಹವನ್ನು ಸೆಳೆಯುವ ನವಿರಾದ ಪ್ರೇಮಕಥೆಯೂ ಇದೆ. ಡಾರ್ಕ್ ಕಾಮಿಡಿಯೂ ಚಿತ್ರದ ಕಥೆಯಲ್ಲಿದೆ. ಸಾಮಾನ್ಯವಾಗಿ ಹಾಲಿವುಡ್ ಚಿತ್ರಗಳಲ್ಲಿ ಕಂಡು ಬರುವ ಅಂಶಗಳೂ ಈ ಚಿತ್ರದಲ್ಲಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್ ಇದನ್ನು ಪುಷ್ಠೀಕರಿಸುತ್ತದೆ.

ಪ್ರೇಕ್ಷಕರಿಗೆ ಬೇಕಾದ ಎಲ್ಲಾಾ ಅಂಶಗಳನ್ನು ಪರಭಾಷಾ ಚಿತ್ರಗಳು ಮಾತ್ರವಲ್ಲ, ಕನ್ನಡ ಚಿತ್ರದಲ್ಲೂ ಇದೆ. ಅದನ್ನು ತೆರೆಯ ಮೇಲೆ ನೋಡಬಹುದು. ಕನ್ನಡ ಚಿತ್ರರಂಗ ಅಷ್ಟರಮಟ್ಟಿಿಗೆ ಬೆಳೆದಿದೆ ಎಂಬುದನ್ನು ‘ರಿಲ್ಯಾಾಕ್‌ಸ್‌ ಸತ್ಯ’ದಲ್ಲಿ ತೋರಿಸಿಕೊಟ್ಟಿಿದ್ದಾಾರೆ ನಿರ್ದೇಶಕ ನವೀನ್ ಸಾಮಾನ್ಯವಾಗಿ ಎಲ್ಲಾಾ ಚಿತ್ರಗಳಲ್ಲೂ ಅದೇ ಪ್ರೇಮದ ಕಥೆ, ಹೊಡೆದಾಟ ಇದ್ದೇ ಇರುತ್ತದೆ. ಆದರೆ ಇದಕ್ಕೂ ಮಿಗಿಲಾದ, ಪ್ರೇಕ್ಷಕರಿಗೆ ಹಿಡಿಸುವ, ವಿಭಿನ್ನ ಕಥೆಯನ್ನು ನೀಡಬೇಕೆಂಬುದು ನಿರ್ದೇಶಕರ ಕನಸಾಗಿತ್ತು. ಅಂತೆಯೇ ‘ರಿಲ್ಯಾಾಕ್‌ಸ್‌ ಸತ್ಯ’ ಚಿತ್ರದ ಕಥೆಯನ್ನು ಬರೆದು ನಿರ್ದೇಶಿಸಿ ತೆರೆಗೆ ತರುವಲ್ಲಿಯೂ ನವೀನ್ ಯಶಸ್ವಿಿಯಾಗಿದ್ದಾಾರೆ.

ಬದುಕುಕಟ್ಟಿಿಕೊಳ್ಳುವ ತವಕ !
ಈ ಜಗತ್ತಿಿನಲ್ಲಿ ಮಾನವನಾಗಿ ಜನಿಸಿದ ಮೇಲೆ ಸುಂದರ ಬದುಕನ್ನು ಕಟ್ಟಿಿಕೊಳ್ಳುವ ತವಕ ಎಲ್ಲರಿಗೂ ಇದ್ದೇ ಇರುತ್ತದೆ. ಅದಕ್ಕೆೆ ಪಡಬೇಕಾದ ಶ್ರಮ ಅಷ್ಟಿಿಷ್ಟಲ್ಲ. ಆಸೆಗಳಿಗೋ ಮಿತಿಯಿಲ್ಲ, ಆಸೆ ಹೆಚ್ಚಿಿದಂತೆಲ್ಲ ಬಗೆ ಬಗೆಯ ಕನಸುಗಳು ನಮ್ಮನ್ನು ಆವರಿಸುತ್ತವೆ. ಆ ಕನಸಿನ ದಾರಿ ಹಿಡಿದು ಹೊರಟರೆ ದಾರಿಯೆಲ್ಲಾಾ ಮುಳ್ಳಿಿನ ಹಾದಿಯೇ, ಅದನ್ನು ದಾಟಿ, ಬಂದ ಕಷ್ಟವೆಲ್ಲವನ್ನು ಎದುರಿಸಿ ನಿಂತಾಗ ಮಾತ್ರ ನಾವಂದುಕೊಂಡಂತೆ ಬದುಕಟ್ಟಿಿಕೊಳ್ಳಲು ಸಾಧ್ಯ. ಅಂತೆಯೇ ಈ ಚಿತ್ರದಲ್ಲಿ ನಾಯಕ ಸತ್ಯ ಹೆಸರಿಗೆ ತಕ್ಕಂತೆ ಸತ್ಯವಂತ, ನಿಷ್ಠಾಾವಂತ. ಜತೆಗೆ ಬದುಕುಕಟ್ಟಿಿಕೊಳ್ಳುವ ತವಕ, ಧಾವಂತವೂ ಕೂಡ. ತಾನಂದುಕೊಂಡಂತೆ ಬದುಕು ಕಟ್ಟಿಿಕೊಳ್ಳಲು ಬಯಸುತ್ತಾಾನೆ. ಈ ಹಾದಿಯಲ್ಲಿ ಆತನಿಗೆ ಯಾವೆಲ್ಲಾಾ ಕಾಡುತ್ತವೆ. ಆತ ಅದನ್ನು ಹೇಗೆ ಎದುರಿಸುತ್ತಾಾನೆ ಎಂಬುದೇ ಚಿತ್ರದ ಇಂಟ್ರೆೆಸ್ಟಿಿಂಗ್ ಅಂಶ. ಟೈಟಲ್ ಹೇಳುವಂತೆ ‘ಸತ್ಯ ರಿಲ್ಯಾಾಕ್‌ಸ್‌’ ಆಗುತ್ತಾಾನಾ? ‘ರಿಲ್ಯಾಾಕ್‌ಸ್‌’ ಆಗುವಂತೆ ಆತನನ್ನು ಕಾಡುವ ಘಟನೆ ಯಾವುದು? ಯಾವೆಲ್ಲಾಾ ಘಟನೆಗಳು ನಡೆಯುತ್ತವೆ ಇವೆಲ್ಲವನ್ನೂ ಚಿತ್ರದಲ್ಲಿಯೇ ನೋಡಬೇಕು ಎನ್ನುತ್ತಾಾರೆ ಚಿತ್ರದ ನಿರ್ದೇಶಕ ನವೀನ್.

ನವಿರಾದ ಪ್ರೇಮ ಕಥೆ
‘ರಿಲ್ಯಾಾಕ್‌ಸ್‌ ಸತ್ಯ’ ಚಿತ್ರದ ಕಥೆಯಲ್ಲಿ ನವಿರಾದ ಪ್ರೇಮಕಥೆಯೂ ಅಡಕವಾಗಿದೆ. ಸಹಜವಾಗಿಯೇ ನಾಯಕನಿಗೆ ನಾಯಕಿಯ ಮೇಲೇ ಪ್ರೇಮಾಂಕುರವಾಗುತ್ತದೆ. ಮಾಯಾ ಎಂಬ ನಾಯಕಿಯ ಮೇಲೆ ಉಕ್ಕುತ್ತದೆ. ಆದರೆ ಆಕೆಯನ್ನು ಪಡೆಯುವ ಅಂತಸ್ತು ಈತನಿಗಿರುವುದಿಲ್ಲ. ಆ ಅಂತಸ್ತನ್ನು ಪಡೆಯಲು ನಾಯಕ ಏನೆಲ್ಲಾಾ ಕೆಲಸ ಮಾಡುತ್ತಾಾನೆ? ಎಂಬುದನ್ನು ತೆರೆಯ ಮೇಲೆಯೇ ನೋಡಬೇಕು. ಟ್ರೇಲರ್‌ನಲ್ಲಿ ತೋರಿಸಿರುವಂತೆ ಚಿತ್ರದಲ್ಲಿ ಕಿಡ್ನಾಾಪ್ ಕಥೆಯೂ ಇಲ್ಲಿದೆ. ನಾಯಕ ಯಾರನ್ನು ಅಪಹರಿಸುತ್ತಾಾನೆ. ಅಪಹರಿಸಿದವರಿಗೂ ನಾಯಕಿಗೂ ಏನು ಸಂಬಂಧ, ನಾಯಕ ಪ್ರೇಮಿಸಿದ ಹುಡಗಿ ಯಾರು? ಈ ಎಲ್ಲಾಾ ಅಂಶಗಳು ಪ್ರೇಕ್ಷಕರಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಾಾ ಸಾಗುತ್ತದೆ. ‘ರಿಲ್ಯಾಾಕ್‌ಸ್‌ ಸತ್ಯ’ ಕಾಲ್ಪಿಿನಿಕ ಕಥೆಯಾದರೂ ಪ್ರಸ್ತುತತೆಯ ಆಯಾಮಗಳಿಗೆ ಕಥೆ ಹೆಣೆಯಲಾಗಿದೆ.

ಮೂವರ ಸುತ್ತ ಸುತ್ತುವ ಕಥೆ
‘ರಿಲ್ಯಾಾಕ್‌ಸ್‌ ಸತ್ಯ’ ಬಿಡುಗಡೆಗೂ ಮುನ್ನವೇ ಕುತೂಹಲ ಕೆರಳಿಸಿರುವ ಸಿನಿಮಾ. ಈ ಚಿತ್ರದ ಕಥೆ ಮುಖ್ಯವಾಗಿ ಮೂರು ಪಾತ್ರಗಳ ಸುತ್ತಲೇ ಸುತ್ತುತ್ತದೆ. ಸತ್ಯ, ದಾಸಣ್ಣ, ಹಾಗೂ ಮಾಯಾ ಎಂಬ ಯುವತಿಯ ಸುತ್ತಲೂ ಕಥೆ ಸುತ್ತುತ್ತದೆ. ಈ ಪಾತ್ರದ ನಡುವೆಯೂ ನಿರ್ದೇಶಕರು ಕುತೂಹಲ ಕೆರಳಿಸುವ ಸನ್ನಿಿವೇಶಗಳನ್ನು ಸೃಷ್ಟಿಿಸಿದ್ದಾಾರೆ. ಈ ಮೂವರು ಯಾರು ಅವರಿಗೂ ಈ ಅಪಹರಣ ಪ್ರಕರಣಕ್ಕೂ ಏನು ಸಂಬಂಧ, ಅಷ್ಟಕ್ಕೂ ಕಿಡ್ನಾಾಪ್ ಯಾಕೆ? ಈ ಎಲ್ಲವೂ ಪ್ರೇಕ್ಷರನ್ನು ಚಿತ್ರದ ಕೊನೆಯವರೆಗೂ ಕಾಡುತ್ತದೆ. ಕ್ಲೈಮ್ಯಾಾಕ್‌ಸ್‌‌ನಲ್ಲಿ ಪ್ರೇಕ್ಷಕರ ಪ್ರಶ್ನೆೆಗಳಿಗೆ ಉತ್ತರ ಸಿಗುತ್ತದೆ. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ನಡೆಯುವ ಕಥೆ ಇದಾಗಿದೆ. ಅದಕ್ಕಾಾಗಿ ಬೆಂಗಳೂರಿನ ಸುತ್ತಮುತ್ತಲೇ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಗಮನಸೆಳೆವ ತಾರಾಗಣ
ಸತ್ಯನಾಗಿ ಪ್ರಭುಮುಂಡೇಕರ್, ಶ್ರೀಮಂತ ಉದ್ಯಮಿಯ ಮಗಳಾಗಿ ಮಾನ್ವಿಿತಾಹರೀಶ್ ನಾಯಕಿಯಾಗಿ ನಟಿಸಿದ್ದಾಾರೆ. ಉಗ್ರಂಮಂಜು ದಾಸಣ್ಣ ಪಾತ್ರಧಾರಿಯಾಗಿ ತೆರೆಯ ಮೇಲೆ ಕಂಗೊಳಿಸಲಿದ್ದಾಾರೆ. ಹಾಗೆಯೇ ಸ್ವಯಂವರಚಂದ್ರು ಭ್ರಷ್ಟ ಇನ್‌ಸ್‌‌ಪೆಕ್ಟರ್ ಪಾತ್ರದಲ್ಲಿ, ಮೈಕಲ್ ಜಾಕ್ಸನ್‌ರಂತೆ ಕುಣಿಯುತ್ತಾಾ ಹಿಡಿಯುತ್ತಾಾರೆ. ನಾಲ್ಕು ಹಾಡುಗಳಿಗೆ ಆನಂದ್‌ರಾಜ್‌ವಿಕ್ರಂ ಸಂಗೀತ, ಯೋಗಿ ಛಾಯಾಗ್ರಹಣ, ಕೆಜಿಎಫ್ ಖ್ಯಾಾತಿಯ ಶ್ರೀಕಾಂತ್ ಸಂಕಲನ, ರಾಷ್ಟ್ರ ಪ್ರಶಸ್ತಿಿ ವಿಜೇತ ವಿಕ್ರಂಮೋರ್ ಸಾಹಸ, ಸಂಭಾಷಣೆ ಶಂಕರ್‌ರಮನ್, ಕಲರಿಸ್‌ಟ್‌ ಗೌತಂನಾಯಕ್ ನಿರ್ವಹಿಸಿದ್ದಾಾರೆ. ‘ರಿಲ್ಯಾಾಕ್‌ಸ್‌ ಸತ್ಯ’ ರಾಜ್ಯಾಾದ್ಯಂತ ಸುಮಾರು 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಸತ್ಯನ ಜತೆಯಲ್ಲಿ
ಟಗರು ಪುಟ್ಟಿಿ ಮಾನ್ವಿಿತಾ !

ಸದ್ಯ ಸ್ಯಾಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟಿಯರಲ್ಲಿ ‘ಕೆಂಡಸಂಪಿಗೆ’ಯ ಚೆಲುವೆ ಮಾನ್ವಿಿತಾ ಒಬ್ಬರು. ಮುಗ್ಧ ನಟನೆಯ ಈ ನಟಿಗೆ ಕನ್ನಡ ಮಾತ್ರವಲ್ಲದೇ ಅವಕಾಶಗಳು ಅರಸಿಬರುತ್ತಿಿವೆ. ಆದರೂ ಮಾನ್ವಿಿತಾ ಕನ್ನಡ ಚಿತ್ರಗಳಲ್ಲಿಯೇ ಹೆಚ್ಚಾಾಗಿ ನಟಸಬೇಕೆಂಬ ಅಭಿಲಾಷೆ ಹೊಂದಿದ್ದಾಾರೆ. ‘ರಿಲ್ಯಾಾಕ್‌ಸ್‌ ಸತ್ಯ’ ಚಿತ್ರದಲ್ಲಿ ಮಾನ್ವಿಿತಾ ಅಭಿನಯಿಸಿರುವುದು ಚಿತ್ರಕ್ಕೆೆ ಪ್ಲಸ್ ಪಾಯಿಂಟ್. ಈ ಚಿತ್ರದಲ್ಲಿ ಮಾನ್ವಿಿತಾ ಶ್ರೀಮಂತ ಉದ್ಯಮಮಿಯ ಮಗಳಾಗಿ ಮಾಯಾಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಾರೆ. ಸತ್ಯ ಹಾಗೂ ಮಾಯಾಳ ಪಾತ್ರ ಚಿತ್ರದಲ್ಲಿ ಗಮನಸೆಳೆಯಲಿದೆಯಂತೆ. ಚಿತ್ರದ ಕಥೆ ಉತ್ತಮವಾಗಿದೆ. ಅದೇ ದಾಟಿಯಲ್ಲಿ ಪಾತ್ರಗಳು ಮೂಡಿಬಂದಿವೆ. ಚಿತ್ರ ಖುಷಿ ನೀಡಿದೆ ಎನ್ನುತ್ತಾಾರೆ ಮಾನ್ವಿಿತಾ. ‘ಟಗರು’ ಚಿತ್ರದ ಬಳಿಕ ‘ರಿಲ್ಯಾಾಕ್‌ಸ್‌ ಉತ್ತಮ ಪಾತ್ರ ಸಿಕ್ಕಿಿದೆ, ಪ್ರೇಕ್ಷಕರು ಈ ಚಿತ್ರವನ್ನೂ ಗೆಲ್ಲಿಸಲಿದ್ದಾಾರೆ ಎಂಬ ನಿರೀಕ್ಷೆೆಯೂ ಮಾನ್ವಿಿತಾರಲ್ಲಿದೆ.
ರಿಲ್ಯಾಾಕ್‌ಸ್‌ ಸತ್ಯ ಕಥೆಗಿಂತ , ಆತ ಕಥೆಯನ್ನು ಕ್ರೀಯಾಶೀಲವಾಗಿ ತೆರೆಗೆ ತಂದಿದ್ದಾಾರೆ. ಪ್ರತಿ ಪಾತ್ರಗಳೂ ಚಿತ್ರದ ಕಥೆಗೆ ಜೀವ ತುಂಬುತ್ತಾಾರೆ. ಖಂಡಿತ ಚಿತ್ರ ಪ್ರೇಕ್ಷಕರಿಗೆ ಮೆಚ್ಚುಗೆಯಾಗಲಿದೆ.

Leave a Reply

Your email address will not be published. Required fields are marked *

error: Content is protected !!