Wednesday, 11th December 2024

ಮುಗಿಲ್‌ಪೇಟೆಯಲ್ಲಿ ಮನೋರಂಜನ್

ರವಿಚಂದ್ರನ್ ಪುತ್ರ ಮನೋರಂಜನ್‌ರವಿಚಂದ್ರನ್ ತನ್ನ ಪ್ರೇಯಸಿಯನ್ನು ನೋಡಲು ಹೋಗುತ್ತಿಿದ್ದಾಾರೆ. ಅಯ್ಯೋ ಇದೇನಪ್ಪಾಾ… ಅಂತ ಅ್ಚರಿಗೊಳ್ಳಬೇಡಿ. ಮನೋರಂಜನ್ ‘ಮುಗಿಲ್ ಪೇಟೆ’ ಎನ್ನುವ ಹೊಸ ಸಿನಿಮಾದಲ್ಲಿ ಮಧ್ಯಮ ವರ್ಗದ ಕುಟುಂಬದ ಹುಡುಗನಾಗಿ ನಾಯಕಿಯನ್ನು ಅರಸಿಕೊಂಡು ಹೋಗುವ ಪ್ರೇಮಿಯಾಗಿ ನಟಿಸುತ್ತಿಿದ್ದಾಾರೆ. ಈ ಚಿತ್ರಕ್ಕಾಾಗಿ ಕ್ರೇಜಿಸ್ಟಾಾರ್ ಪುತ್ರ, ವಿಶಿಷ್ಟವಾದ ಹೇರ್‌ಸ್ಟೈಲ್ ಹಾಗೂ ಬಾಡಿ ಲ್ಯಾಾಂಗ್ವೇಜ್ ಸಲುವಾಗಿ ತಯಾರಿ ನಡೆಸುತ್ತಿಿದ್ದಾಾರೆ.

ಬ್ರೇಕಪ್ ಆಗಿ ಎರಡು ವರ್ಷಗಳ ತರುವಾಯ ಪ್ರೇಯಸಿಯ ಹುಡುಕಾಟಕ್ಕಗಿ, ಆಕೆ ನೆಲೆಸಿರುವ ಮುಗಿಲಪೇಟೆಗೆ ಹೊರಡುತ್ತಾಾನೆ. ಈ ಪ್ರಯಾಣದ ಮಧ್ಯೆೆ ಪ್ರೀತಿ ಹೇಗೆ ಹುಟ್ಟಿಿತು? ಯಾಕೆ ತಪ್ಪಿಿಹೋಯಿತು ಎಂಬುದು ಫ್ಲ್ಯಾಾಷ್‌ಬ್ಯಾಾಕ್‌ನಲ್ಲಿ ಬಿಚ್ಚಿಿಕೊಳ್ಳುತ್ತಾಾ ಹೋಗುತ್ತದೆ. ಅಲ್ಲಿಗೆ ಹೋದಾಗ ಅವಳು ಸಿಗುತ್ತಾಾಳಾ? ಈತನಿಗಾಗಿ ಕಾದಿರುತ್ತಾಾಳಾ ಎನ್ನುವ ಸನ್ನಿಿವೇಶಗಳೇ ಸಿನಿಮಾದ ಸಾರಾಂಶವಾಗಿದೆ. ಹಾಗಂತ ಇದು ಪ್ರೀತಿಯ ಕತೆಯಾಗಿರುವುದಿಲ್ಲ. ಬ್ರೇಕ್‌ಅಪ್ ಆಗಿರುವುದಿಲ್ಲ. ಪ್ರೇಮಿಗಳು ತಮಗೆ ಗೊತ್ತಿಿಲ್ಲದಂತೆ ಅಂತರಾಳದಲ್ಲಿ ಬೇರೆ ಬೇರೆಯಾಗಿರುತ್ತಾಾರೆ. ಅಂತಹ ಭಾವನೆಗಳನ್ನು ಸಂವೇದನೆಯಿಂದ ಹೇಳುವ ಪ್ರಯತ್ನ ಮಾಡಲಾಗುತ್ತಿಿದೆ. ಶೀರ್ಷಿಕೆಯನ್ನು ಮಡಿಕೇರಿಯಲ್ಲಿ ಹೇಳದೆ ಕುಂದಾಪುರದಲ್ಲಿ ನಡೆಯುವಂತೆ ತೋರಿಸಲಾಗುವುದು ಎನ್ನುತ್ತಾಾರೆ ನಿರ್ದೇಕರು.

ಮನೋರಂಜನ್‌ಗೆ ಜತೆಯಾಗಿ ಅಸ್ಸಾಾಂ ಮೂಲದ ನಟಿ ಖಯಾದುಲೋಹಾರ್ ನಟಿಸಲಿದ್ದಾಾರೆ. ಈಕೆ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದು, ಕನ್ನಡ ಕಲಿಯುವಲ್ಲಿ ಬ್ಯುಸಿ ಇದ್ದಾಾರೆ. ತಾರಾಗಣದಲ್ಲಿ ಹಿರಿಯ ನಟಿ ತಾರಾ, ರಂಗಾಯಣರಘು, ಅವಿನಾಶ್, ಸಾಧುಕೋಕಿಲ, ಶೋಭರಾಜ್ ಆಯ್ಕೆೆಯಾಗಿದ್ದಾಾರೆ. ಚಿತ್ರಕ್ಕಾಾಗಿ ಕುಂದಾಪುರದ ಬಳಿ ವಿಶೇಷವಾಗಿ ಸೆಟ್ ಹಾಕಲಾಗುತ್ತಿಿದ್ದು, 28ರಿಂದ ಸಕಲೇಶಪುರ, ಕಳಸ, ಸಾಗರ, ಕುದರೆಮುಖ, ತೀರ್ಥಹಳ್ಳಿಿ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ಈ ಹಿಂದೆ ‘ಅಡಚಣೆಗಾಗಿ ಕ್ಷಮಿಸಿ’ ಚಿತ್ರ ನಿರ್ದೇಶನ ಮಾಡಿರುವ ಭರತ್.ಎಸ್.ನಾವುಂದ ಅವರಿಗೆ ಇದು ಎರಡನೆ ಅವಕಾಶವಾಗಿದೆ. ಜಯಂತ್‌ಕಾಯ್ಕಣಿ, ಡಾ.ನಾಗೇಂದ್ರಪ್ರಸಾದ್ ಮತ್ತು ಭರ್ಜರಿ ಚೇತನ್‌ಕುಮಾರ್ ಸಾಹಿತ್ಯದ ಐದು ಹಾಡುಗಳಿಗೆ ಶ್ರೀಧರ್‌ಸಂಭ್ರಮ್ ಸಂಗೀತ ಸಂಯೋಜಿಸಲಿದ್ದಾಾರೆ. ಛಾಯಾಗ್ರಹಣ ರವಿವರ್ಮ, ಸಂಕಲನ ಅರ್ಜುನ್‌ಕಿಟ್ಟು ನಿರ್ವಹಿಸುತ್ತಿಿದ್ದಾಾರೆ. ನಾಯಕನ ಸೋದರಿ ಗೆಳತಿ ರಕ್ಷಾವಿಜಯಕುಮಾರ್ ನಿರ್ಮಾಪಕಿ, ಹಾಗೂ ಖಾಸಾ ಗೆಳಯ ಮೋತಿಮಹೇಶ್ ಸಹ ನಿರ್ಮಾಪಕರು. ಈ ಚಿತ್ರದ ಮೂಲಕ ಮನೋರಂಜನ್ ರವಿಚಂದ್ರನ್ ಹೆಸರು ಮನುರಂಜನ್‌ರವಿಚಂದ್ರನ್ ಎಂಬುದಾಗಿ ನಾಮಕರಣ ಮಾಡಲಾಗಿದೆ. ಮನುರಂಜನ್ ಹುಟ್ಟುಹಬ್ಬದಂದೇ ಮಾಸ್ ಲುಕ್ ಇರುವ ಪೋಸ್ಟರ್‌ನ್ನು ಬಿಡುಗಡೆ ಮಾಡಲು ನಿರ್ದೇಶಕರು ಚಿಂತನೆ ನಡೆಸಿದ್ದಾಾರೆ.