Thursday, 22nd February 2024

ಕುಂಚದಲ್ಲಿ ನಿಸರ್ಗ ಸೊಬಗು

ಬಳಕೂರು ವಿ ಎಸ್ ನಾಯಕ

ಕಲಾವಿದನಾದವನಿಗೆ ನಿಸರ್ಗವು ಒಂದಲ್ಲ ಒಂದು ರೀತಿಯಲ್ಲಿ ಪ್ರೇರಣೆಯಾಗುತ್ತದೆ. ನಿಸರ್ಗದಲ್ಲಿ ಬದಲಾವಣೆಯಾದ ಹಲ ವಾರು ವಿಚಾರಗಳು ಕಲಾವಿದನ ಕುಂಚದಲ್ಲಿ ಅರಳಿ ಅದ್ಭುತ ಕಲಾಕೃತಿಗಳಾಗಿ ಹೊರಹೊಮ್ಮುತ್ತವೆ.

ಕಲಾವಿದನ ಕಲ್ಪನೆಗೆ ಗಡಿಯಿಲ್ಲ. ಅವನ ಮನಸ್ಸಿನ ಪರದೆಯ ಮೇಲೆ ಮೂಡಿದ ಹಲವಾರು ವಿಚಾರಗಳು ಕಲಾರೂಪವನ್ನು ಪಡೆದಾಗ ಒಂದು ಉತ್ತಮವಾದ ಲೋಕಕ್ಕೆ ಅಡಿಯಿಟ್ಟ ಅನುಭವ ನಮಗಾಗುತ್ತದೆ. ಹೀಗೆ ಕಲಾವಿದ ತಾನು ಕಂಡ ಅನುಭವಿಸಿದ ಹಲವಾರು ವಿಚಾರಗಳನ್ನು ಕಲಾತ್ಮಕವಾಗಿ ಬಿಂಬಿಸುತ್ತಾನೆ.

ಹಾಗೆಯೇ ಇಲ್ಲಿ ತಾನು ಚಿಕ್ಕಂದಿನಿಂದಲೇ ಕಂಡ ಹಲವಾರು ಘಟನೆ ವಿಚಾರ ನಿಸರ್ಗದ ಬದಲಾವಣೆಯ ಸನ್ನಿವೇಶಗಳನ್ನು ತಮ್ಮ ಕುಂಚದ ಮೂಲಕ ಅರಳಿಸಿದ್ದಾರೆ ಕಲಾವಿದ ಶಿಕ್ಷಕ ಸುಧೀರ್ ಕುಮಾರ್. ಜಿ. ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮಂಗಳೂ ರಿನಲ್ಲಿ ಕಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಮಂಗಳೂರಿನ ಮಹಾ ಲಸಾ ಚಿತ್ರಕಲಾ ಮಹಾವಿದ್ಯಾಲಯದಿಂದ ಎಂ.ಎ-.ಎ ಪದವಿಯನ್ನು ಪಡೆದುಕೊಂಡಿ ದ್ದಾರೆ.

ಕಲಾವಿದರಾದ ಇವರು, ತಾವು ಅನುಭವಿಸಿದ ಎ ವಿಚಾರ ವಿಷಯಗಳನ್ನು ತಮ್ಮ ಚಿತ್ರ ಗಳಲ್ಲಿ ಬಿಂಬಿಸಿದ್ದಾರೆ. ಮಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾದ್ದರಿಂದ ಅಲ್ಲಿಯ ಸುತ್ತಮುತ್ತಲಿನ ಹಳೆಯ ಕಟ್ಟಡಗಳೆಲ್ಲ ದೂರವಾಗಿ ನವನವೀನವಾದ ಮಂಗಳೂರು ನಗರ ಕಾಣುತ್ತಿದೆ. ಆದರೆ ಅಂದಿನ ಅದ್ಭುತ ವಿಚಾರಗಳು ಕಲಾ ಸ್ಪರ್ಶವನ್ನು ಪಡೆದಾಗ ನಮಗೆ ಅರಿವಿಲ್ಲದಂತೆ ಹಲವಾರು ಚಿತ್ರಗಳು ಹೊರಹೊಮ್ಮುತ್ತವೆ.

ಅವರ ಕಲಾಕೃತಿಗಳು ವಿಭಿನ್ನವಾಗಿದ್ದು ವಿನೂತನವಾದ ವಿಚಾರಧಾರೆ ಕೊಡುವಂತಿದೆ. ಸಾಮಾನ್ಯವಾಗಿ ಮಂಗಳೂರು ಹಳ್ಳಿಯ ಸುತ್ತಮುತ್ತಲಿನ ಎಲ್ಲಾ ವಿಚಾರಗಳನ್ನು ಚಿತ್ರಗಳಲ್ಲಿ ಬಿಂಬಿಸಿದ್ದಾರೆ.

ಮಂಗಳೂರಿನ ಕಾಳಿಕಾಂಬಾ ರಸ್ತೆ. ಹಳೆಯ ಬಂದರು. ವೆಂಕಟ ರಮಣ ದೇವಾಲಯದ ಬೀದಿ. ಕ್ಲಾಕ್ ಟವರ್. ಭೈರವೇಶ್ವರ ದೇವಾಲಯ. ಸರ್ಕಾರಿ ಮಹಿಳಾ ಕಾಲೇಜು ಬಲ್ಮಟ್ಟ. ಮಾಲಿಂಗೇಶ್ವರ ದೇವಸ್ಥಾನ ಗಾಂಧಿನಗರ. ಮಂಗಳೂರಿನ ಮಣ್ಣಗುಡ್ಡ. ತುಂಬೆ ನದಿಯ ತೀರ ಹೀಗೆ ಎಲ್ಲ ವಿಚಾರಗಳನ್ನು ತಮ್ಮ ಜಲವರ್ಣ ಚಿತ್ರಗಳಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ.

ಇವರ ಕಲಾತ್ಮಕತೆಯನ್ನು ಎಲ್ಲರೂ ಒಂದು ಕ್ಷಣ ಮೆಚ್ಚಲೇಬೇಕು. ಇವರು ಸಾಮಾನ್ಯವಾಗಿ ಏಕವ್ಯಕ್ತಿ ಕಲಾ ಪ್ರದರ್ಶನ ಸಮೂಹ ಕಲಾಪ್ರದರ್ಶನವನ್ನು ರಾಜ್ಯಮಟ್ಟದಲ್ಲಿ ಮಂಡಿಸಿದ್ದಾರೆ. ಹಲವಾರು ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಶಾಲಾ ಮಟ್ಟದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಮೂಲಕವಾಗಿ ಅತ್ಯುತ್ತಮ ಕೆಲಸವನ್ನು ಮಾಡು ತ್ತಿದ್ದಾರೆ. ಕಲಾತ್ಮಕ ಸೇವೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

error: Content is protected !!