Sunday, 8th September 2024

ಮಂಗಳಿ ಎಂಬ ಮದುಮಗಳೂ, ಶೇರು ಎಂಬ ನಾಯಿಯೂ

* ಅದಿತಿ ಅಂಚೆಪಾಳ್ಯ

ಇದು ಐದು ವರ್ಷಗಳ ಹಿಂದೆ ನಡೆದ ಒಂದು ವಿಚಿತ್ರ ಮದುವೆಯ ವಿಚಾರ. 18 ವರ್ಷದ ಹುಡುಗಿ ಮಂಗಳಿ ಮುಂಡಾ ಎಂಬಾಕೆಯು, ತನ್ನ ಊರಿನ ಒಂದು ನಾಯಿಯ ಜತೆ ಮದುವೆಯಾಗಬೇಕಾಯಿತು!

ಕಾರಣ? ಮಂಗಳಿಗೆ ಅಂಟಿಕೊಂಡಿತ್ತು ಎನ್ನಲಾದ ಅಪಶಕುನವನ್ನು ಕಳೆಯಲೆಂದು ಈ ಮದುವೆ ನಡೆಯಿತು. ಈ ಮದುವೆಯಿಂದಾಗ, ಅವಳಿಗೆ ಅಂಟಿದ್ದ ಕಂಟಕವು ನಾಯಿಗೆ ವರ್ಗಾವಣೆ ಆಗುತ್ತದೆ ಎಂಬ ನಂಬಿಕೆ ಆ ಊರಿನಲ್ಲಿ. ಇದನ್ನು ನಂಬಿಕೆ ಎಂದಾದರೂ ಕರೆಯಿರಿ, ಅಥವಾ ಮೂಢನಂಬಿಕೆ ಎಂದೂ ಕರೆಯಬಹುದು. ಜಾರ್ಖಂಡ್ ಪ್ರದೇಶದ ಹಳ್ಳಿಿಗಾಡಿನ ಆ ಊರಿನಲ್ಲಿ, ಹುಡುಗಿಗೆ ಅಂಟಿದ ಅಪಶಕುನಗಳನ್ನು ಕಳೆಯಲು ನಾಯಿಯೊಂದಿಗೆ ಮದುವೆ ಮಾಡುವ ಸಂಪ್ರದಾಯ ಬಹು ಹಿಂದಿನಿಂದಲೂ ಇದೆ. ಆದರೆ, ಇದು ಎಲ್ಲಾಾ ಹುಡುಗಿಯರಿಗೂ ನಡೆಯುತ್ತದೆ ಎಂದಲ್ಲ, ಊರಿನ ಪೂಜಾರಿಯು ಯಾವ ಹುಡುಗಿಗೆ ಅಪಶಕುನ ರೂಪದ ಶಾಪ ಇದೆ ಎನ್ನುತ್ತಾಾನೋ, ಆ ಹುಡುಗಿಗೆ ನಾಯಿಯೊಡನೆ ಮದುವೆ ಮಾಡಿ, ಅಪಶಕುನವನ್ನು ಕಳೆಯಲಾಗುತ್ತದೆ. ನಂತರ, ಆ ಹುಡುಗಿ ಬೇರೊಬ್ಬ ಸೂಕ್ತ ವರನ ಜತೆ ಮದುವೆ ಆಗುವುದಕ್ಕೆೆ ಯಾವುದೇ ಅಭ್ಯಂತರ ಇಲ್ಲ.

ಶೇರು ಎಂಬ ವರ
ಮಂಗಳಿಗೆ ಅಪಶಕುನ ಅಂಟಿದೆ ಎಂಬ ವಿಚಾರವು ತಿಳಿದ ನಂತರ, ಮಂಗಳಿಯ ತಂದೆಯು ಸೂಕ್ತ ವರನನ್ನು ಹುಡುಕಲು ಆರಂಭಿಸಿದ. ಅದೇ ಹಳ್ಳಿಿಯಲ್ಲಿ ಅಡ್ಡಾಾಡುತ್ತಿಿದ್ದ, ಶೇರು ಎಂಬ ಸುಂದರ, ವಿಧೇಯ, ಆರೋಗ್ಯಕರ ಬೀದಿನಾಯಿಯನ್ನು ಹುಡುಕಿ ಆಯ್ಕೆೆ ಮಾಡಲಾಯಿತು.

ಶೇರುವನ್ನು ಹಿಡಿದು, ಅದಕ್ಕೆೆ ತಿಂಡಿ ತಿನಿಸು ನೀಡಿ, ಸ್ನಾಾನವನ್ನು ಮಾಡಿಸಲಾಯಿತು. ಸ್ನಾಾನದ ನಂತರ, ವರನ ಹಣೆಗೆ ಕುಂಕುವವನ್ನೂ ಹಚ್ಚಿಿ, ಸಿಂಗರಿಸಲಾಯಿತು. ಕುತ್ತಿಿಗೆಗೆ ಹೂವಿನ ಹಾರ. ಶೇರು ಎಂಬ ನಾಯಿಯು ಎಷ್ಟು ವಿಧೇಯ ಎಂದರೆ, ಮದುಮಗಳಾದ ಮಂಗಳಿಯ ಪಕ್ಕದಲ್ಲಿ ವಿಧೇಯತೆಯಿಂದ, ನಗುನಗುತ್ತಾಾ, ತಾಳ್ಮೆೆಯಿಂದ ಗಂಟೆಗಟ್ಟಲೆ ಕುಳಿತು, ಮದುವೆಯ ಎಲ್ಲಾಾ ಶಾಸ್ತ್ರಗಳಿಗೆ ತನ್ನನ್ನು ಒಪ್ಪಿಿಸಿಕೊಂಡಿತು.

                        ಮಂಟಪದಲ್ಲೇ ವರನಿಗೆ ನಿದ್ದೆೆ!

ಸರಳ ವಿವಾಹ ಎನಿಸಿದರೂ, ಮದುವೆಯೊಂದರಲ್ಲಿ ನಡೆಯಬೇಕಾದ ಎಲ್ಲಾಾ ಶಾಸ್ತ್ರಗಳನ್ನೂ ಈ ಮದುವೆಯಲ್ಲಿ ಮಾಡಲೇಬೇಕು. ‘ನಾವು ಎಲ್ಲಾಾ ಶಾಸ್ತ್ರಗಳನ್ನು ಮಾಡಲೇಬೇಕು. ಜತೆಗೆ, ಮದುವೆಯ ಸಮಯದಲ್ಲಿ ನಡೆಯುವ ಔತಣವನ್ನು ಸಹ ಏರ್ಪಡಿಸಬೇಕು. ನಾವು ಬಡವರಾದ್ದರಿಂದ, ಇದು ನಮಗೆ ಹೆಚ್ಚಿಿನ ಖರ್ಚು ಎನಿಸುತ್ತದೆ. ಆದರೇನು ಮಾಡುವುದು, ಮಗಳು ಮಂಗಳಿಯ ಅಪಶಕುನ ಮತ್ತು ಶಾಪವನ್ನು ಕಳೆಯಲು ಈ ಮದುವೆ ಮಾಡುವ ಅನಿವಾರ್ಯತೆ. ಇದಾದ ನಂತರ ಅವಳಿಗೆ ಇನ್ನೊೊಂದು ಮದುವೆ ಮಾಡುತ್ತೇವೆ’ ಎನ್ನುತ್ತಿಿದ್ದರು ಮದುಮಗಳ ತಂದೆ.

ಎಲ್ಲಾಾ ಶಾಸ್ತ್ರಗಳನ್ನು ತಾಳ್ಮೆೆಯಿಂದ ಕುಳಿತು ನೋಡುತ್ತಿಿದ್ದ ಶೇರುವಿಗೆ, ಕೊನೆ ಕೊನೆಗೆ ಆಯಾಸ ಎನಿಸುತ. ಮದುಮಗಳ ಪಕ್ಕದಲ್ಲೇ, ವಿವಾಹದ ಸ್ಥಳದಲ್ಲೇ ಮಲಗಿ, ಆರಾಮಾಗಿ ನಿದ್ದೆೆ ಮಾಡಿದೆ ಶೇರು ಎಂಬ ನಾಯಿ!

ನಾಯಿಯೊಂದಿಗೆ ಮದುವೆ ಮಾಡಿದ ನಂತರ, ಮಂಗಳಿಗೆ ನಡೆಯುವ ಇನ್ನೊೊಂದು ಮದುವೆಯಲ್ಲಿ ಮನುಷ್ಯ ರೂಪದ ವರನನ್ನು ಹುಡುಕುತ್ತಾಾರೆ. ಈ ವರನ ಅದೃಷ್ಟ ಏನೆಂದರೆ, ಮಂಗಳಿಗೆ ಯಾವುದೇ ಅಪಶಕುನ ಇಲ್ಲದೇ ಇರುವುದರಿಂದಾಗಿ, ಸಂಸಾರ ಬಂಧನವು ಹೆಚ್ಚು ಅರ್ಥಪೂರ್ಣ ಮತ್ತು ಯಾವುದೇ ಕಂಟಕಗಳಿಲ್ಲದೇ ಅವರ ಜೀವನ ನಡೆಯುತ್ತದೆ ಎಂಬ ಭರವಸೆ.
ಮದುವೆಗೆ ಬಂದ ಬಂಧುಗಳು, ಸ್ನೇಹಿತರು, ಸಿಹಿ ಊಟ ಮಾಡಿ, ವಧುವರರನ್ನು ಹರಸಿದರು. ಮದುವೆಯ ಶಾಸ್ತ್ರ ಪೂರೈಸಿ, ಬೇಕು ಬೇಕಾದ ತಿನಿಸುಗಳನ್ನು ತಿಂದ ನಂತರ, ಶೇರು ಎಂಬ ನಾಯಿ ತನ್ನ ಪಾಡಿಗೆ ತಾನು ಬೀದಿಗಳಲ್ಲಿ ಸಂಚರಿಸಲು ನಡೆಯಿತು.
ಇದಾಗಿ ಕೆಲವು ತಿಂಗಳುಗಳ ನಂತರ, ಮಂಗಳಿಗೆ ಇನ್ನೊೊಂದು ಮದುವೆ – ಈ ಬಾರಿ ಮನುಷ್ಯ ರೂಪದ ವರನೊಂದಿಗೆ. ನಂತರ ಆ ದಂಪತಿಗಳು ಸುಖವಾಗಿ ಸಂಸಾರ ಹೂಡಿದರು, ನೆಮ್ಮದಿಯ ಜೀವನ ನಡೆಸಿದರು.

Leave a Reply

Your email address will not be published. Required fields are marked *

error: Content is protected !!