Saturday, 27th July 2024

ಕಾಲುಂಗುರ ಆಗದಿರಲಿ

* ಕ್ಷಿತಿಜ್ ಬೀದರ್

 ಬೆಳ್ಳಿಯಿಂದ ಮಾಡಿದ ಕಾಲುಂಗುರ ಧರಿಸುವ ಸಂಪ್ರದಾಯದ ಭಾರತದಲ್ಲಿ ಇದೆ. ಈ ಒಂದು ಪದ್ಧತಿಯು ವಿವಾಹಿತ ಸ್ತ್ರೀಯ ಆರೋಗ್ಯಕ್ಕೂ ಅನುಕೂಲಕರ ಎಂಬ ವಿಚಾರ ಕುತೂಹಲಕಾರಿ.

ಕಾಲುಂಗುರವು ವಿವಾಹಿತ ಸ್ತ್ರೀಯ ಭಾಗ್ಯ…! ಮುತ್ತೈದೆತನದ ಸಂಕೇತ. ಭಾರತೀಯ ಸಂಸ್ಕೃತಿಯಲ್ಲಿ ಸುಮಂಗಲಿಯರ ಐದು ಮುತ್ತುಗಳಲ್ಲಿ ಬೆಳ್ಳಿಿ ಕಾಲುಂಗುರವೂ ಒಂದು. 16 ಶೃಂಗಾರದಲ್ಲಿ ( ಸೋಲಾ ಸಿಂಗಾರ) ಸಿಂಧೂರ ಧಾರಣೆಯು ಮೊದಲನೆಯದಾಗಿದ್ದರೆ ಬೆಳ್ಳಿಿ ಕಾಲುಂಗುರವು 5 ಸ್ಥಾಾನದಲ್ಲಿದೆ. ಮಹಿಳೆಯರ ವೈವಾಹಿಕ ಬದುಕಿನಲ್ಲಿ ಮಂಗಲಸೂತ್ರದಂತೆ ಬೆಳ್ಳಿಿ ಕಾಲುಂಗುರವು ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ಕಾಲಿನ ಎರಡನೆಯ ಬೆರಳಿಗೆ ಧರಿಸುತ್ತಾಾರೆ.ಇದಕ್ಕೂ ಗರ್ಭಾಶಯಕ್ಕೂ ನೇರ ಸಂಬಂಧವಿದೆ ಎಂಬ ಅಭಿಪ್ರಾಾಯವಿದೆ.

ಹಿಂದಿಯಲ್ಲಿ ಬಿಚಿಯಾ, ಮಲಯಾಳಂ ನಲ್ಲಿ ‘ಮಿಂಜಿ ’, ಮರಾಠಿಯಲ್ಲಿ ‘ಜೊಡವಿ ’, ತೆಲುಗಿನಲ್ಲಿ ’ಮೆಟ್ಟೆೆಲು’ , ಬಂಗಾಲಿಯಲ್ಲಿ ’ಅಂಗೊಟ್ ’ ಎಂದು ಕರೆಸಿಕೊಳ್ಳುವ ಕಾಲುಂಗುರವು 5000 ವರ್ಷಗಳ ಇತಿಹಾಸ ಹೊಂದಿದೆ. ಪೌರಾಣಿಕವಾಗಿ ಗಮನಿಸಿದರೆ ರಾಮಾಯಣ ಕಾಲದಲ್ಲಿ ರಾವಣನು ಸೀತೆಯನ್ನು ಅಪಹರಿಸಿದಾಗ ಅವಳು ಎಸೆದ ಪ್ರಯುಕ್ತವೇ ರಾಮನಿಗೆ ದಾರಿಯ ಪತ್ತೆೆ ಹಚ್ಚಲು ಸಹಕಾರಿಯಾಯಿತು ಎನ್ನಲಾಗಿದೆ. ರಾಮಾಯಣ ಕಾಲದಿಂದಲೂ ಕಾಲುಂಗುರ ಧರಿಸುವ ಸಂಪ್ರದಾಯವಿತ್ತೆೆನ್ನುವುದು ಇದರಿಂದ ವಿಧಿತ.

ಬೆಳ್ಳಿಿಯೇ ವಿಹಿತ
ಕಾಲುಂಗುರವನ್ನು ಬೆಳ್ಳಿಿಯಿಂದಲೇ ಮಾಡುವುದೇಕೆ? ಬಂಗಾರವೇಕೆ ಬಳಸುವುದಿಲ್ಲ ಎಂಬ ಪ್ರಶ್ನೆೆ ಸಹಜವೇ…! ಇದಕ್ಕೆೆ ನಮ್ಮ ಪೂರ್ವಜರು ಬಂಗಾರವು ಮಹಾಲಕ್ಷ್ಮಿಿಯ ಸ್ವರೂಪವಾಗಿರುವುದರಿಂದ ಮಹಿಳೆ ಸೊಂಟದ ಕೆಳಗೆ ಧರಿಸಬಾರದು ಎಂದಿದ್ದಾರೆ. ಮುಖ್ಯವಾಗಿ ಬೆಳ್ಳಿಿ ಉತ್ತಮ ಲೋಹ ಶಕ್ತಿಿ ವಾಹಕ. ಇದು ಭೂಮಿಯಲ್ಲಿನ ಸಕಾರಾತ್ಮಕ ಶಕ್ತಿಿ ತರಂಗಗಳನ್ನು ಹೀರಿ ಸ್ತ್ರೀಯ ವರ್ಗಾಯಿಸುವ ಕಾರ್ಯ ಗೈಯುತ್ತದೆ. ಕಾಲಿನ ಎರಡನೇ ಬೆರಳನ್ನೇ ಆರಿಸಿಕೊಳ್ಳುವುದರಲ್ಲಿಯೂ ವೈಜ್ಞಾನಿಕ ಕಾರಣವಿದೆ. ವಿಶೇಷವಾಗಿ ಕಾಲುಗಳಲ್ಲಿಯ ನರವ್ಯೂೆಹದ ಬಿಂದುಗಳು ದೇಹದ ರಚನೆಯಲ್ಲಿ ಗಮನಾರ್ಹ ಪಾತ್ರವಹಿಸುತ್ತವೆ.ಅಕ್ಯುಪಂರ್ಕ್ಚರ್ ವಿದ್ಯೆೆ ಬಲ್ಲವರಿಗೆ ಇದರ ಜ್ಞಾನವಿದ್ದಿರುತ್ತದೆ.

ಭಾರತೀಯ ವೇದಶಾಸ್ತ್ರಗಳಲ್ಲಿಯೂ ಬೆಳ್ಳಿಿ ಪ್ರಭಾವದ ಪ್ರಸ್ತಾಾವನೆ ಕಾಣಬಹುದು.ವಿಜ್ಞಾನ ಕೂಡಾ ಬೆರಳಿನ ನರಗಳು ಗರ್ಭಾಶಯಕ್ಕೆೆ ನೇರವಾದ ಸಂಬಂಧ ಹೊಂದಿರುವುದನ್ನು ಗುರುತಿಸಿವೆ ಮತ್ತು ಅಲ್ಲಿಂದ ಹೃದಯಕ್ಕೆೆ ಸಂಪರ್ಕಹೊಂದಿರುವುದರಿಂದ ವಿವಾಹಿತ ಸ್ತ್ರೀ ಯ ಗರ್ಭಾಶಯದ ಆರೋಗ್ಯವು ಸಮಸ್ಥಿಿತಿಯಲ್ಲಿಡುವ ಬಗ್ಗೆೆ ಉಲ್ಲೇಖಿಸುತ್ತವೆ. ಹಾಗೆಯೇ ಇದು ಪ್ರಮುಖ ಪಾತ್ರವಹಿಸುತ್ತದೆ.

ರಕ್ತ ಪರಿಚಲನೆ ಕಾರ್ಯವು ಸುಗಮಗೊಳ್ಳುತ್ತದೆ. ಋತುಚಕ್ರವು ನಿಯಮಿತಗೊಳ್ಳುತ್ತದೆ, ಸಮರ್ಪಕವಾದ ಅಂತರದಲ್ಲಿಯೇ ಉಂಟಾಗುತ್ತದೆ ಎಂಬ ನಂಬಿಕೆಗಳಿವೆ. ಎಡ ಮತ್ತು ಬಲ ಕಾಲಿನ ಎರಡನೆಯ ಬೆರಳಿಗೆ ಧರಿಸುವ ಬೆಳ್ಳಿಿ ಉಂಗುರವು ಬಿಗಿಯಾದ ಒತ್ತಡವನ್ನುಂಟು ಮಾಡುವುದರಿಂದ ನರಗಳಿಗೆ ಪ್ರಚೋದನೆ ಸಿಗುತ್ತದೆ. ಮೆದುಳಿನ ಕೇಂದ್ರದಲ್ಲಿಯ ಪ್ರಕ್ರಿಿಯೆಯಿಂದ ಮಹಿಳೆಯರಲ್ಲಿ ಜವಾಬ್ದಾಾರಿ ಮತ್ತು ನೆಮ್ಮದಿಯ ಭಾವ ಮೂಡುತ್ತದೆ . ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಸಂತಾನಕ್ಕೆೆ ಸಂಬಂಧಪಟ್ಟ ಸಮಸ್ಯೆೆಗಳು ನಿಯಂತ್ರಿಿಸಲ್ಪಡುತ್ತವೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ವಿವಾಹದ ಈ ಸಮಸ್ಯೆೆಗಳು ತಲೆದೋರುವುದರಿಂದ ಮದುವೆಯಾದ ಹೆಣ್ಣು ಮಕ್ಕಳು ಮಾತ್ರವೇ ಕಾಲುಂಗುರ ಧರಿಸುವುದು ರೂಡಿಯಲ್ಲಿರುತ್ತದೆ. ಹಿಂದುಗಳಷ್ಟೇ ಅಲ್ಲದೆ ನಮ್ಮ ದೇಶದಲ್ಲಿ ಮುಸ್ಲಿಿಮರು , ಕ್ರೈಸ್ತರು ಕೂಡಾ ಬೆಳ್ಳಿಿ ಕಾಲುಂಗುರವನ್ನು ಧರಿಸುತ್ತಿಿರುವುದನ್ನು ಕಾಣಬಹುದಾಗಿದೆ.

ಬೆಳ್ಳಿಿ ಧಾತು ನರಗಳನ್ನು ಉದ್ದೀಪನೆಗೊಳಿಸುವುದರಿಂದ ಗರ್ಭಾಶಯದ ಆರೋಗ್ಯದಲ್ಲಿ ಸಮತೋಲನೆ ಕಾಯ್ದುಕೊಳ್ಳುವುದಲ್ಲದೆ ರಕ್ತದೊತ್ತಡವನ್ನು ನಿಯಂತ್ರಿಿಸುತ್ತದೆ. ಪ್ರಾಾಣ ಶಕ್ತಿಿಯನ್ನು ಇಡೀ ದೇಹದಲ್ಲಿ ಸಂಚರಿಸುವಂತೆ ಮಾಡುತ್ತದೆ. ಋಣಾತ್ಮಕ ವಿಚಾರಗಳು ಉದ್ಭವವಾಗದಂತೆ ಸದಾ ಕಾರ್ಯ ಚಟುವಟಿಕೆಯಲ್ಲಿ ಕ್ರಿಿಯಾಶೀಲಳಾಗಿರುವಂತೆ ಮಾಡುತ್ತದೆ. ಶರೀರದ ಋಣಾತ್ಮಕ ಶಕ್ತಿಿಯನ್ನು ಕಾರ್ಯದಲ್ಲಿ ಅಯಸ್ಕಾಾಂತದಂತೆ ಭೂಮಿಗೆ ಸೇರಿಸಿ ಅಲ್ಲಿಯ ಧನಾತ್ಮಕ ಶಕ್ತಿಿಯನ್ನು ಶರೀರಕ್ಕೆೆ ಸೇರಿಸುವ ಕಾರ್ಯ ಬೆಳ್ಳಿಿ ಕಾಲುಂಗುರ ಮಾಡುತ್ತದೆ. ಹೆಣ್ಣನ್ನು’ ಪ್ರಕೃತಿ ’ ಎಂದು ಕರೆದಿರುವುದರ ನಿಜವಾದ ಅರ್ಥದಲ್ಲಿ ಭೂಮಿಗೆ ಬೆಳ್ಳಿಿ ಕಾಲುಂಗುರ ಸಂಪರ್ಕ ಕಲ್ಪಿಿಸಿದ ‘ಪ್ರಕೃತಿ ಮಡಿಲ ಮಾತೆ ’ ಎಂದು ಅನ್ವರ್ಥಕನಾಮವಾಗಿರಿಸಬಹುದು.

ಕಣ್ಣಿಿನ ದೃಷ್ಟಿಿಗೂ ಇದು ಸಂಬಂಧಿಸಿರುವುದರಿಂದ ಮಹಿಳೆಯರಲ್ಲಿ ತೀಕ್ಷ್ಣ ದೃಷ್ಟಿಿ ಕಾಣುವುದು ಇದರ ಇನ್ನೊೊಂದು ವಿಶೇಷತೆ. ಆಯುರ್ವೇದ ಪ್ರಕಾರ ಕಾಲಿನ ಎರಡನೆಯ ಬೆರಳನ್ನು ಮಸಾಜ್ ಮಾಡಿ ದೋಷ ಸರಿಪಡಿಸುವುದೇ ಕಾಲುಂಗುರಕ್ಕೆೆ ಪುರಾವೆ ಒದಗಿಸಿದಂತಲ್ಲವೇ…? ಬೆರಳುಗಳ ನೀವುವಿಕೆಯು ನೋವು ನಿವಾರಣೆಯಲ್ಲಿ ಪರಿಣಾಮಕಾರಿಯಾಗಿರುವಾಗ ಕಾಲು ಬೆರಳಿಗೆ ಬೆಳ್ಳಿಿ ಕಾಲುಂಗುರ ಧರಿಸುವುದು ಇಡೀ ಶರೀರದ ಚೈತನ್ಯಪೂರ್ಣ ಉಲ್ಲಾಸಮಯ ಕಾರ್ಯ ಚಟುವಟಿಕೆಗೆ ಸಹಕಾರಿಯಾಗಿಲ್ಲವೇ…? ರೆಫ್ಲೆೆಕ್ಸೊೊಲೊಜಿಯಲ್ಲಿ ಸ್ತ್ರೀ ಸಂಬಂಧಿ ರೋಗಗಳಿಗೆ ಎರಡನೆಯ ಬೆರಳನ್ನು ಮಸಾಜ್ ಮಾಡುವ ಶುಶ್ರೂಷೆಯನ್ನು ಸೂಚಿಸಲಾಗಿದೆ. ಅಂದರೆ ಆ ಬೆರಳಿನ ಮಹತ್ವವು ಸಂಪ್ರದಾಯದ ಹೆಸರಿನಲ್ಲಿ ಪರೋಕ್ಷವಾಗಿ ಆರೋಗ್ಯ ಕಾಪಾಡಲು ಕಾಲುಂಗುರ ಧರಿಸುವುದು ವೈಜ್ಞಾನಿಕವಾಗಿಯೂ ಅಂಗೀಕೃತವಾದಂತಾಗಲಿಲ್ಲವೇ…? ಸೂಕ್ಷ್ಮ ಕ್ರಿಿಮಿಗಳನ್ನು ನಾಶಪಡಿಸುವ ಗುಣಧರ್ಮ ಲೋಹ ಹೊಂದಿರುವ ಬಗ್ಗೆೆ ಲೋಹಶಾಸ್ತ್ರದಲ್ಲಿಯೂ ಉಲ್ಲೇಖವಿದೆ. ಬೆಳ್ಳಿಿ ತಟ್ಟೆೆಯಲ್ಲಿ ಊಟ ಮಾಡಲು ಸೂಚಿಸಿದ ಹಿರಿಯರ ಉದ್ದೇಶವು ಸ್ಪಷ್ಟವೇ…! ತಿಳಿದುಕೊಂಡು ಆಚರಿಸಿದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಲಾಭವು ಲಭಿಸುತ್ತದೆ. ಹೀಗಾಗಿ ಕಾಲುಂಗುರವು ಕಾಲುಕಸವಾಗದಿರಲಿ.

Leave a Reply

Your email address will not be published. Required fields are marked *

error: Content is protected !!