Sunday, 8th September 2024

ಮತ್ತೆ ಮತ್ತೆ ಬರುವ ಹೊಸ ವರ್ಷ

ಲಿಂಗರಾಜ ಎಂ.

ಹೊಸವರ್ಷ ಕ್ಯಾಲೆಂಡರ್ ಬದಲಾವಣೆಯ ಜತೆಗೆ ನಮ್ಮ ಮನಸ್ಸಿನ ಸ್ಥಿತಿಯನ್ನು ಬದಲಾಯಿಸುವ ಸಮಯ ಕಳೆದ ವರ್ಷ ಸಿಹಿನೆನಪು ಕಹಿ ನೆನಪಿನ
ನಡುವೆಯೇ ಮತ್ತೆ ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೇವೆ.

ನಮ್ಮ ಜೀವನದ ಕನಸುಗಳಿಗೆ ಹೊಸ ವರ್ಷವು ಹೊಸ ಹುಮ್ಮಸ್ಸು ಹೊಸ ಉತ್ಸಾಹ ಹೊಸ ಭರವಸೆ ಹೊಸ ಕನಸುಗಳತ್ತ ಜೀವನ ಸಾಗಿಸಲು ದಾರಿ ಮಾಡಿಕೊಡುತ್ತದೆ. ಕಳೆದ ವರ್ಷದಲ್ಲಿ ನಿಮ್ಮ ಕನಸು ಗುರಿ ಯೋಜನೆಗಳು ವಿಫಲವಾಗಿದ್ದಾರೆ ಅಂತಹ ಯೋಜನೆಗಳಿಗೆ ಮತ್ತೊಮ್ಮೆ ಹೊಸದಾಗಿ ಹೊಸ ಭರವಸೆಯನ್ನು ಇಟ್ಟುಕೊಂಡು ಬದುಕನ್ನು ಕಟ್ಟಿಕೊಳ್ಳುವಂತಹ ಆಲೋಚನೆಗಳ ಮೂಲಕ ಈ ವರ್ಷವನ್ನು ಆರಂಭಿಸೋಣ. ನೆಮ್ಮದಿಯ
ಜೀವನಕ್ಕೆ ಒಳ್ಳೆಯ ದಿನಗಳು ತುಂಬಾ ಅವಶ್ಯಕ.

ಕಳೆದುಹೋಗುತ್ತಿರುವ ಸಮಯದಲ್ಲಿ ಎಲ್ಲರೊಂದಿಗೂ ಸಂತೋಷದಿಂದ ನಡೆಯೋಣ ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೆ ಜೀವನದಲ್ಲಿ ಬರುವವ ರನ್ನು ಸ್ವಾಗತಿಸೋಣ. ಹೋಗುವವರಿಗೆ ಮನಃಪೂರ್ವಕವಾಗಿ ಬೀಳ್ಕೊಡುಗೆ ನೀಡಿ. ಏಕೆಂದರೆ, ನಿಮ್ಮ ಜೀವನಕ್ಕೆ ನೀವೇ ಆಧಾರಸ್ತಂಭ. ನಿಮ್ಮದೇ ಆದ ಒಂದು ಸುಂದರ ಬದುಕು ಕಟ್ಟಿಕೊಳ್ಳಲು ನೀವೇ ನಿಮ್ಮ ಜೀವನದ ಸಾಧಕರಾಗಬೇಕು.

ಜೀವನ ಶೈಲಿಯಲ್ಲಿ ವಿಜ್ಞಾನ ತಂತ್ರಜ್ಞಾನದಿಂದ ಬದಲಾಗುತ್ತಿರುವ ಈ ಜಗತ್ತನಲ್ಲಿ ಮನುಷ್ಯನನ್ನು ಕೂಡ ಒಂದು ಯಂತ್ರಗಳಂತೆ ಬಳಸಿಕೊಳ್ಳುವ ಸಮಯ ಬರಬಹುದೇನೋ ಹಾಗಾಗಿ ಯಾರು ಯಾರಿಂದಲೂ ಆಳಲು ಪಡುವುದು ಬೇಡ ದೇವರು ನಿಮಗೊಂದು ಅದ್ಭುತ ಬುದ್ಧಿಶಕ್ತಿ ನೀಡಿದ್ದಾನೆ. ಮನುಷ್ಯಜೀವಿ ಭಿನ್ನ ವಿಭಿನ್ನವಾಗಿ ಆಲೋಚಿಸುವ ಶಕ್ತಿಯನ್ನು ಪಡೆದುಕೊಂಡಿದ್ದಾನೆ. ಈ ಭೂಮಿ ಮೇಲೆ ಎಲ್ಲವನ್ನು ಸೃಷ್ಟಿಮಾಡುವ ಶಕ್ತಿ ಇರುವುದು ಒಂದು ದೇವರಿಗೆ ಮತ್ತೊಂದು ಮನುಷ್ಯನಿಗೆ. ಸೃಷ್ಟಿಮಾಡುವ ಯೋಜನೆಗಳಿದ್ದರೆ ಮನುಕುಲಕ್ಕೆ, ಪ್ರಕೃತಿಗೆ ಯಾವುದೇ ದುಷ್ಪರಿಣಾಮ ಉಂಟಾಗದೆ ಇರುವ ಆವಿಷ್ಕಾರಗಳನ್ನು ತಯಾರಿಸುವುದು ಉತ್ತಮ.

ಮನುಷ್ಯನಿಗೆ ಆಸೆಗಳು ಜಾಸ್ತಿ, ಹಾಗಾಗಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇತರರನ್ನು ಬಲಿಕೊಟ್ಟು ತಾನು ಬಲಿಷ್ಠನಾಗುವ ಪ್ರವೃತ್ತಿಯನ್ನು ರೂಢಿಸಿ ಕೊಂಡಿದ್ದಾನೆ. ಏನೇ ಇರಲಿ ಮನುಷ್ಯ ಮನುಷ್ಯನಿಗೆ ಸಹಾಯವಾಗಿ ಇರಬೇಕೇ ವಿನಹ ಮತ್ತೊಬ್ಬರಿಗೆ ತೊಂದರೆಯಾಗಿ ಇರಬಾರದು. ಸದಾ ಜಾಗೃತಿ ಯಿಂದ ಇರಿ ಸದಾ ನಿಮ್ಮ ಗುರಿ ಕಡೆ ಗಮನ ಹರಿಸಿ ನೀವು ಅಂದುಕೊಂಡಿದ್ದನ್ನು ಸಾಧಿಸುವವರೆಗೂ ನಿಮ್ಮ ಛಲವನ್ನು ಬಿಡದೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರಿ. ಸತತ ಪ್ರಯತ್ನಂ ಸರ್ವಸಿದ್ದಿ ಸಾಧನಂ ಎನ್ನುವ ಉಕ್ತಿಯಂತೆ ದೇಹದ ನರನಾಡಿಗಳಲ್ಲಿ ನೀವು ಕಂಡ ಕನಸಿಗಾಗಿ ಹಂಬಲಿಸುವಂತೆ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿ ಅನಿರ್ದಿಷ್ಟ ಘಟನೆಗಳಿಗೆ ಮನಸೋಲದೆ ಸಾಧನೆ ಒಂದೇ ಜೀವನದ ಅಂತಿಮ ಗುರಿ ಎಂದು ಈ ವರ್ಷವನ್ನು
ಆರಂಭಿಸಿ.

ವ್ಯಕ್ತಿತ್ವ ಬದಲಾವಣೆಗೆ ಹೊಸವರ್ಷ ಒಂದು ಸುವರ್ಣ ಅವಕಾಶ ವಿದ್ದಂತೆ ಇಲ್ಲಿವರೆಗೂ ನಾವು ಯಾವ ತಪ್ಪುಗಳನ್ನು ಮಾಡಿದ್ದೆವು ಎಲ್ಲಾ ತಪ್ಪುಗಳಿಗೆ
ಪಶ್ಚಾತ್ತಾಪ ಪಟ್ಟುಕೊಂಡು ಈ ವರ್ಷದ ಕೊನೆಯಲ್ಲಿ ಆ ಎಲ್ಲಾ ತಪ್ಪುಗಳಿಗೆ ಎಳ್ಳು ನೀರು ಬಿಟ್ಟು ಹೊಸ ವ್ಯಕ್ತಿಗಳಾಗಿ ಹೊಸಜೀವನವನ್ನು ಪ್ರಾರಂಭಿಸಿ ಹೊಸ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಿ ಮತ್ತೊಬ್ಬರಿಗೆ ಒಳಿತನ್ನು ಬಯಸಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಈ ಸಮಾಜದಲ್ಲಿ ನಿಮ್ಮದೇ ಆದ ಒಂದು ಸುಂದರ ಬದುಕಿನ ನಿರ್ವಹಣೆಯನ್ನು ನೀವೇ ನಿರ್ಮಿಸಿಕೊಂಡ ನಿಮ್ಮ ಜೀವನದ ಪಯಣ ಸಾರ್ಥಕತೆಗೆ ಆದರ್ಶವಾಗುತ್ತದೆ. ಮತ್ತೊಬ್ಬರಿಗೆ
ದಾರಿದೀಪವಾಗುತ್ತದೆ.

error: Content is protected !!