Monthly Horoscope: ಮೇ ತಿಂಗಳಿನಲ್ಲಿ ಮಿಥುನ ರಾಶಿಯವರು ಅಮೂಲ್ಯ ವಸ್ತು ಕಳೆದುಕೊಳ್ತೀರಿ! ಈ ಬಗ್ಗೆ ಜಾಗೃತರಾಗಿರಿ..
ಜ್ಯೋತಿಷ್ಯದ ಪ್ರಕಾರ, ಮೂರು ಪ್ರಮುಖ ಗ್ರಹಗಳು - ಗುರು, ಬುಧ ಮತ್ತು ಶುಕ್ರ - ಮೇ ತಿಂಗಳಲ್ಲಿ ತಮ್ಮ ಪಥವನ್ನು ಬದಲಾಯಿ ಸಲಿವೆ. ಹಾಗಾಗಿ ಗ್ರಹಗಳ ಸಂಚಾರದಿಂದ ಕೆಲವು ರಾಶಿಯವರು ಈ ತಿಂಗಳು ಶುಭ ಫಲ ಪಡೆದರೆ, ಕೆಲವು ರಾಶಿಯವರಿಗೆ ಅಶುಭ ಫಲ ಸಿಗುತ್ತದೆ. ಹಾಗಿದ್ದಲ್ಲಿ ಮೇ ತಿಂಗಳು ಗ್ರಹಗಳ ಸ್ಥಾನ ಬದಲಾವಣೆಯಿಂದ ಮಿಥುನ ರಾಶಿಗೆ ಭವಿಷ್ಯ ಹೇಗಿರಲಿದೆ? ಎಷ್ಟು ಶುಭ? ಎಷ್ಟು ಅಶುಭ ಎನ್ನುವುದನ್ನು ಖ್ಯಾತ ಜ್ಯೋತಿಷ್ಯ ವೇ|ಬ್ರ| ಶ್ರೀ ವಿಜಯಾ ನಂದ ಜೋಯ್ಸ್ ತಿಳಿಸಿದ್ದಾರೆ.


ಬೆಂಗಳೂರು: 2025ರ ಮೇ ತಿಂಗಳಲ್ಲಿ ಹಲವು ಗ್ರಹಗಳ ಬದಲಾವಣೆ ಆಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದೊಂದು ಗ್ರಹಗಳು ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತವೆ.ಜ್ಯೋತಿಷ್ಯದ ಪ್ರಕಾರ, ಮೂರು ಪ್ರಮುಖ ಗ್ರಹಗಳು - ಗುರು, ಬುಧ ಮತ್ತು ಶುಕ್ರ - ಮೇ ತಿಂಗಳಲ್ಲಿ ತಮ್ಮ ಪಥವನ್ನು ಬದಲಾಯಿಸಲಿವೆ. ಹಾಗಾಗಿ ಗ್ರಹಗಳ ಸಂಚಾರ ದಿಂದ ಕೆಲವು ರಾಶಿಯವರು ಈ ತಿಂಗಳು ಶುಭ ಫಲ ಪಡೆದರೆ, ಕೆಲವು ರಾಶಿಯವರಿಗೆ ಅಶುಭ ಫಲ ಸಿಗುತ್ತದೆ. ಹಾಗಿದ್ದಲ್ಲಿ ಮೇ ತಿಂಗಳು ಗ್ರಹಗಳ ಸ್ಥಾನ ಬದಲಾವಣೆಯಿಂದ ಮಿಥುನ ರಾಶಿಗೆ (Mithuna Rashi) ಭವಿಷ್ಯ ಹೇಗಿರಲಿದೆ? ಎಷ್ಟು ಶುಭ? ಎಷ್ಟು ಅಶುಭ ಎನ್ನುವುದನ್ನು ಖ್ಯಾತ ಜ್ಯೋತಿಷ್ಯ ವೇ|ಬ್ರ| ಶ್ರೀ ವಿಜಯಾ ನಂದ ಜೋಯ್ಸ್ ತಿಳಿಸಿದ್ದಾರೆ.
ಮೃಗಶಿರಾ ನಕ್ಷತ್ರ (3, 4 ಪಾದ), ಅರುದ್ರ ನಕ್ಷತ್ರ (4 ಪಾದ), ಪುನರ್ವಸು ನಕ್ಷತ್ರ (1, 2, 3 ಪಾದ) ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಸೇರಲಿದೆ. ಮಿಥುನ ರಾಶಿಯ ಅಧಿಪತಿ ಬುಧ ಗ್ರಹವಾಗಿದೆ. ಯಾವುದಾದರೂ ಒಂದು ವಸ್ತುವನ್ನು ಕಳೆದು ಕೊಳ್ಳುವ ಸನ್ನಿವೇಶ ಈ ತಿಂಗಳು ಬರಲಿದೆ. ಮಿಥುನ ರಾಶಿಯವರಿಗೆ ಮನೆ ಕಟ್ಟುವ ಯೋಗವು ಕೂಡಿ ಬರಲಿದೆ.ಗುರು ಈ ತಿಂಗಳ 14 ಕ್ಕೆ ನಿಮ್ಮ ರಾಶಿಗೆ ಬರುತ್ತಾನೆ. ಸ್ವಲ್ಪ ಪ್ರಮಾಣದ ಒತ್ತಡಗಳನ್ನು ನಿಮಗೆ ನೀಡಿದರೂ ಕೇತು ಮೂರನೇ ಮನೆಗೆ ಪ್ರವೇಶವಾಗಿ ನಿಮಗೆ ಹೆಚ್ಚಿನ ಧನಲಾಭ ಒದಗಿ ಬರಲಿದೆ.
ಈ ಭಯ ಕಾಡಲಿದೆ:
ಮಿಥುನ ರಾಶಿಯವರಿಗೆ ಈ ತಿಂಗಳು ಹೆಚ್ಚು ಚೋರ ಭಯ ಕಾಡಲಿದೆ. ಅಂದರೆ ತನ್ನ ವಸ್ತು, ವಾಹನ, ಚಿನ್ನ ಇಂತಹ ಬೆಲೆ ಬಾಳುವ ವಸ್ತುವನ್ನು ಕಳೆದುಕೊಳ್ಳುವ ತಿಂಗಳು ಆಗಿದೆ. ಹಾಗಾಗಿ ಮಿಥುನ ರಾಶಿಯವರು ಜ್ಞಾಪಕ ಶಕ್ತಿಯನ್ನು ವೃದ್ದಿಸಿಕೊಳ್ಳಿ. ಹಾಗೆಯೇ ಮಿಥುನ ರಾಶಿಯವರು ಮನೆ ಕಟ್ಟುವ ಯೋಚನೆ ಇದ್ದರೆ ಇದು ಅತ್ಯಂತ ಸೂಕ್ತ ಸಮಯ, ಬ್ಯಾಂಕ್ ಸಾಲ, ಹಣಕಾಸು ವ್ಯವಸ್ಥೆಯು ಮಿಥುನ ರಾಶಿಗೆ ಒದಗಿ ಬರಲಿದೆ.
ಇದನ್ನು ಓದಿ: May Monthly Horoscope: ವೃಷಭ ರಾಶಿಯವರಿಗೆ ಶತ್ರುಗಳೆಲ್ಲ ಮಿತ್ರರಾಗುವ ಸಮಯ
ಮೇ ತಿಂಗಳಲ್ಲಿ ನಿಮಗೆ ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗಬಹುದು. ಹಾಗೆಯೇ ಹಿಂದೆ ಮಾಡಿದ ಹೂಡಿಕೆ ಯಿಂದ ನೀವು ಬಯಸಿದ ಲಾಭವನ್ನು ಗಳಿಸಲು ಸಾಧ್ಯ ವಾಗಬಹುದು. ಪಡೆದ ಹಣ ಮರಳಿ ನೀಡಲು ನೀವು ಮುಂದಾಗಬಹುದುದು. ಮಿಥುನ ರಾಶಿಯವರಿಗೆ ಮೇ ತಿಂಗಳಲ್ಲಿ ಮಿಶ್ರಫಲ. ಅಂದರೆ ಸ್ವಲ್ಪ ಸಮಯ ಕಷ್ಟ ಇದ್ದರೆ ಅರ್ಧದಷ್ಟು ಸಮಯ ಒಳಿತನ್ನು ಕಾಣುತ್ತೀರಿ. ಉದ್ಯೋಗ, ವ್ಯವಹಾರ ಅಥವಾ ಹೂಡಿಕೆಯ ಮೂಲಕ ಹಠಾತ್ ಲಾಭದ ಸಾಧ್ಯತೆ ಇದೆ.
ಬಿಳಿ ಕಮಲದಿಂದ ನಾರಾಯಣನ ಪೂಜೆ ಮಾಡಿ
ಮಿಥುನ ರಾಶಿಯವರು ಪ್ರತಿ ಶುಕ್ರವಾರ ಬಿಳಿ ಕಮಲದ ಹೂವಿನಿಂದ ನಾರಾಯಣನ ಪೂಜೆ ಸಲ್ಲಿಸಿ. ಬಿಳಿ ಕಮಲದ ಒಂದೊಂದೆ 108 ಹೂವಿನ ದಳದಿಂದ ನಾರಾಯಣನ ಪೂಜೆ ಮಾಡಿದರೆ ಆರ್ಥಿಕ ಸಮಸ್ಯೆ ನಿವಾರಣೆ ಕಾಣಲಿದೆ. ಹಾಗೆಯೇ ಸಾಧ್ಯವಿದ್ದಾಗ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿ. ಇದರಿಂದ ಆರ್ಥಿಕ ಕಷ್ಟಗಳು ದೂರವಾಗಿ ಪರಿಹಾರ ಸಿಗಲಿದೆ.