May Monthly Horoscope: ವೃಷಭ ರಾಶಿಯವರಿಗೆ ಶತ್ರುಗಳೆಲ್ಲ ಮಿತ್ರರಾಗುವ ಸಮಯ
ಮೇ ತಿಂಗಳಲ್ಲಿ ಕೆಲವು ಗ್ರಹಗಳು ರಾಶಿ ಸ್ಥಾನವನ್ನು ಬದಲಾಯಿಸುತ್ತವೆ. ಜ್ಯೋತಿಷ್ಯದ ಪ್ರಕಾರ, ಮೂರು ಪ್ರಮುಖ ಗ್ರಹಗಳು - ಗುರು, ಬುಧ ಮತ್ತು ಶುಕ್ರ - ಮೇಯಲ್ಲಿ ತಮ್ಮ ಪಥವನ್ನು ಬದಲಾಯಿಸಲಿವೆ. ಹೀಗಾಗಿ ಮೇ ತಿಂಗಳಲ್ಲಿ ಶುಭ ಸುದ್ದಿ ಕೇಳಲಿರುವ ಅನೇಕ ರಾಶಿಗಳಿವೆ. ಈ ಗ್ರಹ ಸಂಚಾರವು ಕೆಲವೊಂದು ರಾಶಿಗಳ ಜೀವನದಲ್ಲಿ ಖುಷಿ, ನೆಮ್ಮದಿಯನ್ನು ತರಬಹುದು. ಹಾಗಿದ್ದಲ್ಲಿ ಮೇ ತಿಂಗಳು ಗ್ರಹಗಳ ಸ್ಥಾನ ಬದಲಾವಣೆಯಿಂದ ವೃಷಭ ರಾಶಿಗೆ ಭವಿಷ್ಯ ಹೇಗಿರಲಿದೆ? ಎಷ್ಟು ಶುಭ? ಎಷ್ಟು ಅಶುಭ ಎನ್ನುವುದನ್ನು ಖ್ಯಾತ ಜ್ಯೋತಿಷ್ಯ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.

May Monthly Horoscope Vrishabha Rashi

ಬೆಂಗಳೂರು: ಒಂದು ನಿರ್ದಿಷ್ಟ ಸಮಯದಲ್ಲಿ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಅದೇ ರೀತಿ ಮೇ ತಿಂಗಳಲ್ಲಿ ಕೆಲವು ಗ್ರಹಗಳು ರಾಶಿ ಸ್ಥಾನವನ್ನು ಬದಲಾಯಿಸುತ್ತವೆ. ಜ್ಯೋತಿಷ್ಯದ ಪ್ರಕಾರ, ಮೂರು ಪ್ರಮುಖ ಗ್ರಹಗಳು - ಗುರು, ಬುಧ ಮತ್ತು ಶುಕ್ರ - ಮೇ ತಿಂಗಳಲ್ಲಿ ತಮ್ಮ ಪಥವನ್ನು ಬದಲಾಯಿಸಲಿವೆ. ಮೇ ತಿಂಗಳಲ್ಲಿ ಶುಭ ಸುದ್ದಿ ಕೇಳಲಿರುವ ಅನೇಕ ರಾಶಿಗಳಿವೆ. ಈ ಗ್ರಹ ಸಂಚಾರವು ಕೆಲವೊಂದು ರಾಶಿಗಳ ಜೀವನದಲ್ಲಿ ಖುಷಿ, ನೆಮ್ಮದಿಯನ್ನು ತರಬಹುದು. ಹಾಗಿದ್ದಲ್ಲಿ ಮೇ ತಿಂಗಳು ಗ್ರಹಗಳ ಸ್ಥಾನ ಬದಲಾವಣೆಯಿಂದ ವೃಷಭ ರಾಶಿಯವರ (Monthly Horoscope Vrishabha Rashi) ಭವಿಷ್ಯ ಹೇಗಿರಲಿದೆ? ಎಷ್ಟು ಶುಭ? ಎಷ್ಟು ಅಶುಭ ಎನ್ನುವುದನ್ನು ಖ್ಯಾತ ಜ್ಯೋತಿಷ್ಯ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.
ವೃಷಭ ರಾಶಿಗೆ ಅಧಿಪತಿ ಶುಕ್ರ ಗ್ರಹವಾಗಿದ್ದು ಅರ್ಧ ತಿಂಗಳ ನಂತರವಾಗಿ ಅಂದರೆ ಮೇ 14, 15ನೇ ದಿನಾಂಕದ ನಂತರ ಉತ್ತಮ ದಿನಗಳು ಕೂಡಿ ಬರಲಿವೆ. ಮೇ ತಿಂಗಳು ವೃಷಭ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿರುತ್ತದೆ. ಅದೇ ರೀತಿ ಕಳೆದು ಹೋದ ಬಾಂಧವ್ಯ ದಿನಗಳು ಮತ್ತೆ ಬರಲಿವೆ. ಕೋಪ ಉಂಟಾದ ಸ್ನೇಹಿತರ ಜತೆ ಉತ್ತಮ ಭಾಂದವ್ಯ ಹೊಂದುತ್ತೀರಿ. ಶತ್ರುಗಳೆಲ್ಲ ಮಿತ್ರರಾಗುವ ಸಮಯವು ವೃಷಭ ರಾಶಿಗೆ ಒದಗಿ ಬರಲಿದೆ. ಹಾಗಾಗಿ ಮೇ ತಿಂಗಳು ಗುರು ನಷ್ಟದಿಂದ ಲಾಭಕ್ಕೆ ಬರುವ ಪುಣ್ಯ ಪ್ರಾಪ್ತಿಯಾಗಲಿದೆ.
ವೃತ್ತಿ ವ್ಯವಹಾರ ಯಶಸ್ಸು
ಈ ಸಮಯದಲ್ಲಿ, ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಯಾಣಗಳು ಯಶಸ್ವಿಯಾಗುತ್ತವೆ. ಹಣದ ಉಳಿತಾಯಕ್ಕೂ ಉತ್ತಮ ಮಾರ್ಗ ಒದಗಿ ಬರಲಿದೆ.ಕಳೆದು ಹೋಗಿರುವ ವಸ್ತು ಮತ್ತೆ ಸಿಗುವಂತೆ ಮಾಡಲಿದೆ. ಶತ್ರುಗಳು ದೂರವಾಗಿ ನಿಮಗೆ ಧನಲಾಭ, ಕಾರ್ಯ ಸಿದ್ಧಿ, ಒಳ್ಳೆಯ ಹಿತೈಷಿಗಳ ಸಹವಾಸ ಮೊದಲಾದ ಶುಭಸಂಗತಿಗಳು ನಿಮ್ಮದಾಗಲಿದೆ.
ಮೇ ತಿಂಗಳಿನಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಲು ಯೋಜನೆ ಮಾಡುತ್ತೀರಿ.ಈ ಸಂದರ್ಭದಲ್ಲಿ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು.ವೃಷಭ ರಾಶಿಯ ಜನರು ಮೇ ತಿಂಗಳಲ್ಲಿ ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಪ್ರಮುಖ ಪ್ರಗತಿಯನ್ನು ಕಾಣುತ್ತಾರೆ.ಆದರೆ ಆರೋಗ್ಯದ ಬಗ್ಗೆ ಮಾನಸಿಕ ಸಂಕಟ ನಿಮ್ಮನ್ನು ಕಾಡಲಿದೆ. ತಾಯಿಯ ಆರೋಗ್ಯದ ಸಮಸ್ಯೆ ಬಗ್ಗೆಯು ಮಾನಸಿಕ ಚಿಂತೆ ನಿಮ್ಮನ್ನು ಕಾಡಬಹುದು.ಮೇ ತಿಂಗಳು ವೃಷಭ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿರುತ್ತದೆ.
ಇದನ್ನು ಓದಿ: Ugadi Horoscope: ಕುಂಭ ರಾಶಿಗೆ ರಾಹುದೆಸೆ ಬೇವಾಗಲಿದೆಯೆ ಅಥವಾ ಬೆಲ್ಲವಾಗಲಿದೆಯೆ?
ಹನುಮಾನ್ ಚಾಲೀಸಾ ಪಠಣ ಮಾಡಿ
ವೃಷಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು ಮತ್ತು ವಾಹನ ಚಲಾವಣೆ ಮಾಡುವಾಗಲೂ ಬಹಳಷ್ಟು ಜಾಗರೂಕರಾಗಿ ಪ್ರಯಾಣ ಮಾಡಬೇಕು. ಹಾಗಾಗಿ ಹನುಮಾನ್ ಚಾಲೀಸಾ ಪ್ರತಿದಿನ ಪಠಣ ಮಾಡಿದರೆ ಬಹಳಷ್ಟು ಒಳಿತಲಾಗಲಿದೆ. ಅದರಲ್ಲೂ ಸಂಜೆ 7 ಗಂಟೆಗೆ ಸರಿಯಾಗಿ ಸೂರ್ಯ ಮುಳುಗಿದ ನಂತರ ಹನುಮಾನ್ ಚಾಲೀಸಾ ಓದಿದರೆ ನಿಮ್ಮ ಸಮಸ್ಯೆ ದೂರವಾಗಿ ಅಂದು ಕೊಂಡದ್ದು ಸಿದ್ದಿಯಾಗಲಿದೆ. ಓದಲು ಕಷ್ಟ ಅನಿಸಿದರೂ ಹನಾನ್ ಚಾಲೀಸಾ ಕೇಳುವುದರಿಂದಲೂ ಬರುವಂತಹ ಕಷ್ಟ ದೂರವಾಗಲಿದೆ.