Monthly Horoscope: ಕರ್ಕಾಟಕ ರಾಶಿಗೆ ಮೇ ತಿಂಗಳು ಮಹತ್ವದ ಕಾರ್ಯಗಳು ನಡೆಯುವ ಸಮಯ!
2025 ಮೇ ತಿಂಗಳಿನಲ್ಲಿ ಅನೇಕ ರಾಶಿಗಳು ತಮ್ಮ ಸ್ಥಾನಗಳನ್ನು ಬದಲಾಯಿಸಲಿವೆ.ಈ ತಿಂಗಳು, ಕೆಲವು ರಾಶಿಚಕ್ರಗಳ ಮೇಲೆ ಹಲವು ರೀತಿಯ ಬದಲಾವಣೆಗಳು ಬೀರಲಿದ್ದು ಗ್ರಹ ಸಂಚಾರ ದಿಂದಾಗಿ ಕೆಲ ಉತ್ತಮ ಯೋಗಗಳು ಸಿದ್ದಿಯಾಗಲಿದೆ. ಹಾಗಾಗಿ ಕರ್ಕಾಟಕ ರಾಶಿಯವರಿಗೆ ಮೇ ತಿಂಗಳ ರಾಶಿಫಲ ಭವಿಷ್ಯ ಹೇಗಿದೆ? ಏನೆಲ್ಲಾ ಬದಲಾವಣೆ ಇದೆ ಎಂಬುದನ್ನು ಎಂದು ಖ್ಯಾತ ಜ್ಯೋತಿ ವೇ|ಬ್ರ| ಶ್ರೀ ವಿಜಯಾ ನಂದ ಜೋಯ್ಸ್ ತಿಳಿಸಿದ್ದಾರೆ.


ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಚಾರದಿಂದ ಕೆಲವು ರಾಶಿಯವರು ಶುಭ ಫಲ ಪಡೆದರೆ, ಕೆಲವು ರಾಶಿಯವರಿಗೆ ಅಶುಭ ಫಲ ಸಿಗುತ್ತದೆ. 2025 ಮೇ ತಿಂಗಳಿನಲ್ಲಿ ಅನೇಕ ರಾಶಿಗಳು ತಮ್ಮ ಸ್ಥಾನಗಳನ್ನು ಬದಲಾಯಿಸಲಿವೆ. ಈ ತಿಂಗಳು, ಕೆಲವು ರಾಶಿಚಕ್ರಗಳ ಮೇಲೆ ಹಲವು ರೀತಿಯ ಬದಲಾವಣೆಗಳು ಬೀರಲಿದ್ದು, ಗ್ರಹ ಸಂಚಾರದಿಂದಾಗಿ ಕೆಲ ಉತ್ತಮ ಯೋಗಗಳು ಸಿದ್ದಿಯಾಗಲಿದೆ. ಹಾಗಾಗಿ ಕರ್ಕಾಟಕ ರಾಶಿಯವರಿಗೆ ಮೇ ತಿಂಗಳ (Monthly Horoscope) ರಾಶಿಫಲ ಭವಿಷ್ಯ ಹೇಗಿದೆ? ಏನೆಲ್ಲಾ ಬದಲಾವಣೆ ಇದೆ ಎಂಬುದನ್ನು ಎಂದು ಖ್ಯಾತ ಜ್ಯೋತಿ ವೇ|ಬ್ರ| ಶ್ರೀ ವಿಜಯಾ ನಂದ ಜೋಯ್ಸ್ ತಿಳಿಸಿದ್ದಾರೆ.
ಪುನರ್ವಸು ನಕ್ಷತ್ರದ 4ನೇ ಪಾದ, ಪುಷ್ಯ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಆಶ್ಲೇಷ ನಕ್ಷತ್ರದ 1, 2, 3 ಮತ್ತು 4ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಕರ್ಕಾಟಕ ರಾಶಿ ಆಗುತ್ತದೆ. ಚಂದ್ರ ನಿಮಗೆ ಅಧಿಪತಿ ಯಾಗಿದ್ದಾನೆ.ಮೇ ತಿಂಗಳಿನಲ್ಲಿ ಅನೇಕ ಕಾರ್ಯ ಸಿದ್ದಿಗಳು ಆಗಲಿದ್ದು ಶುಭ ಫಲವನ್ನು ಕಾಣಲಿದ್ದೀರಿ. ಗಜಕೇಸರಿ ಯೋಗ ಮುಕ್ತಾಯವಾಗುವಂತಹ ತಿಂಗಳು ಮೇ ಆಗಿದೆ. ಹಾಗಾಗಿ ಮೇ 1 ರಿಂದ 15ನೇ ತಾರೀಖಿನ ವರೆಗೆ ಅನೇಕ ಅಂದುಕೊಂಡಂತಹ ಕೆಲಸ ಕಾರ್ಯಗಳು ನಡೆಯಲಿವೆ.
ನಾಗನ ಆರಾಧನೆ ಮಾಡಿ:
ಈ ತಿಂಗಳು ನೀವು ಅಂದುಕೊಂಡಂತಹ ಕೆಲಸಗಳು ಸುಲಭ ವಾಗಿ ನಡೆದು ಹೋಗುತ್ತದೆ. ಆದರೆ ನಾಗ ದೋಷ ಕಾಡುವ ಸಾಧ್ಯತೆ ಇರುತ್ತದೆ.ನಾಲ್ಕನೇ ಮನೆಯಲ್ಲಿ ಮೂರನೇ ಮನೆಯಲ್ಲಿ ಕೇತು ಇದ್ದಾಗ ಕರ್ಕಾಟಕ ರಾಶಿ ಯವರಿಗೆ ನಾಗ ದೋಷ ಗಳು ಕಾಡುವ ಸಾಧ್ಯತೆ ಇದೆ. ರಾತ್ರಿ ನಿದ್ದೆಯಲ್ಲಿ ಹಾವಿನ ಕನಸು, ಅಥವಾ ರಸ್ತೆಯಲ್ಲಿ ಹೋಗುವಾಗ ಹಾವು ಕಾಣಿಸಿ ಕೊಳ್ಳುವುದು ಇತ್ಯಾದಿ ಆಗಲಿದೆ. ಈ ಸಂದರ್ಭದಲ್ಲಿ ನಾಗನಿಗೆ ಏನಾದರೂ ಪೂಜೆ ಪುನಸ್ಕಾರಗಳನ್ನು ಕೈಗೊಳ್ಳಲೇ ಬೇಕು. ಸುಬ್ರಮಣ್ಯ ದರ್ಶನ, ಅಥವಾ ನಾಗನಿಗೆ ತನು ಎರೆಯುವುದು, ಪೂಜೆ ಇತ್ಯಾದಿಯನ್ನು ಸಲ್ಲಿಸಲು ಮರೆಯಬೇಡಿ.
ಇದನ್ನು ಓದಿ: Monthly Horoscope: ಮೇಷ ರಾಶಿಯವರಿಗೆ ಸಾಡೇಸಾತ್ ಇದ್ದರೂ ಗುರುವಿನಿಂದ ಆದಾಯ
ಮನೆಯಲ್ಲಿ ವಾಜ್ಯ,ಆಸ್ತಿ ಗೊಂದಲ ನಡೆಯುತ್ತಿದ್ದರೆ ನಾಗ ದೇವರ ಆರಾಧನೆ ಮಾಡಿದರೆ ಸಮಸ್ಯೆ ನಿವಾರಣೆ ಯಾಗಲಿದೆ. ಲಾಭಸ್ಥಾನದಲ್ಲಿ ಇರುವ ಗುರು ನೀವು ಮಾಡುವ ಕೆಲಸಕ್ಕೆ ಬರುವ ಅಡೆತಡೆಗಳನ್ನು ನಿವಾರಣೆ ಮಾಡಿ ನಿಮ್ಮ ಯೋಜನೆ ಗಳು ಉತ್ತಮ ವಾಗುವಂತೆ ಮಾಡುತ್ತಾನೆ. ಗುರುದರ್ಶನದಿಂದ ಮಾನಸಿಕ ನೆಮ್ಮದಿ ಜೊತೆಗೆ ಹೊಸ ಅವಕಾಶಗಳು ಸಿಗುವ ಸೂಚನೆಯು ಇದೆ.ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯದೆ ಇದ್ದರು ನಷ್ಟ ಉಂಟಾಗದು. ಮನೆತನದಿಂದ ಬಂದ ವ್ಯಾಪಾರ ವ್ಯವಹಾರಗಳಲ್ಲಿ ವಿಶೇಷ ಲಾಭಗಳು ನಿಮಗೆ ಸಿಗಲಿದೆ.