Saturday, 27th July 2024

ವಿಶ್ವಕಪ್ 2023ರ ಫೈನಲ್ ನಾಳೆ: ಆಸೀಸ್‌ಗೆ ಟೀಂ ಇಂಡಿಯಾ ಸವಾಲು

ಅಹಮದಾಬಾದ್: ಆಸ್ಟ್ರೇಲಿಯದ ವಿರುದ್ಧ ಭಾನುವಾರ ನಡೆಯಲಿರುವ ವಿಶ್ವಕಪ್ 2023ರ ಫೈನಲ್​ ಪಂದ್ಯದಲ್ಲಿ ಭಾರತ ತಂಡವು ಕಣಕ್ಕಿಳಿಯಲಿದೆ.

ಭಾರತ ತಂಡವು ಪಂದ್ಯಾವಳಿಯಲ್ಲಿ ಬಲಿಷ್ಠವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಜಯ ಗಳಿಸುವ ಮೂಲಕ ಉತ್ತಮ ಫಾರ್ಮ್​ನಲ್ಲಿದೆ ಎನ್ನುವುದು ಟೀಂ ಇಂಡಿಯಾ ಸಾಬೀತು ಮಾಡಿತ್ತು.

ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡುತ್ತಿದ್ದು, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ 50 ಓವರ್‌ಗಳ ಕ್ರಿಕೆಟ್‌ನ ಪಂದ್ಯದಲ್ಲಿ ಹೆಚ್ಚು ರನ್​ಗಳನ್ನು ಕಲೆ ಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳನ್ನು ಹೊಂದಿದ್ದಲ್ಲದೆ, ವಿರಾಟ್ ಕೊಹ್ಲಿ (711) ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ‘ಮುಂಬೈಕರ್’ ಶ್ರೇಯಸ್ ಅಯ್ಯರ್ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಈ ಪಂದ್ಯಾವಳಿಯಲ್ಲಿ ವೇಗದ ಬೌಲಿಂಗ್ ತಂಡಕ್ಕೆ ಆಶ್ಚರ್ಯಕರ ಪ್ಯಾಕೇಜ್ ಆಗಿ ಹೊರಹೊಮ್ಮಿದೆ. ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹ ಮ್ಮದ್ ಶಮಿ ಅವರು ಆಡಿದ ಪ್ರತಿ ಎದುರಾಳಿಗಳ ವಿರುದ್ಧ ಮಾರಕ ಬೌಲಿಂಗ್​ ಮೂಲಕ ಕಟ್ಟಿ ಹಾಕಿದ್ದಾರೆ. ಶಮಿ 23 ವಿಕೆಟ್‌ಗಳೊಂದಿಗೆ ಟೂರ್ನಿಯಲ್ಲಿ ಅಗ್ರ ವಿಕೆಟ್‌ ಪಡೆದ ಬೌಲರ್ ಆಗಿದ್ದರೆ, ಬುಮ್ರಾ ಈ ವಿಶ್ವಕಪ್​ನಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ.

ಆಸ್ಟ್ರೇಲಿಯಾ ಪಂದ್ಯಾವಳಿಯಲ್ಲಿ ಎರಡು ಸೋಲುಗಳೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿತು. ಆದರೆ, ಎಂಟು ಪಂದ್ಯಗಳನ್ನು ಗೆದ್ದ ನಂತರ ಗೆಲುವಿನ ವೇಗವನ್ನು ಪಡೆದುಕೊಂಡಿದೆ. ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಆಲ್-ರೌಂಡರ್ ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮೂವರು ಐಸಿಸಿ ಪಂದ್ಯಗಳಲ್ಲಿ ಇದುವರೆಗೆ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಟೂರ್ನಿಯಲ್ಲಿ ವಾರ್ನರ್ 528 ರನ್ ಗಳಿಸಿದ್ದರೆ, ಮಾರ್ಷ್ 426 ರನ್ ಗಳಿಸಿದ್ದಾರೆ. ವಾಂಖೆಡೆಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಅಜೇಯ 201 ರನ್ ಗಳಿಸುವ ಮೂಲಕ ತಮ್ಮ ಆಟವನ್ನು ಬದಲಾಯಿಸುವ ಸಾಮರ್ಥ್ಯ ವನ್ನು ಪ್ರದರ್ಶಿಸಿದ್ದರು.

ಪಂದ್ಯಾವಳಿಯಲ್ಲಿ ಆಡಮ್ ಝಂಪಾ ಇಲ್ಲಿಯವರೆಗೆ 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ವೇಗಿ ಜೋಶ್ ಹ್ಯಾಜಲ್‌ವುಡ್ 10 ಇನ್ನಿಂಗ್ಸ್‌ಗಳಿಂದ 14 ವಿಕೆಟ್​ಗಳನ್ನು ಪಡೆದಿದ್ದಾರೆ. ಇಬ್ಬರೂ ಬೌಲಿಂಗ್ ಸರಾಸರಿ 30ಕ್ಕಿಂತ ಕಡಿಮೆ ಇದೆ. ಮೊಟೆರಾದಲ್ಲಿ ನಡೆಯಲಿರುವ ಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವು ತಮ್ಮ ಲೆಗ್ ಸ್ಪಿನ್ನರ್​ಗೆ ಅವಕಾಶ ನೀಡುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!