PBKS vs RR: ಐಪಿಎಲ್ 18ನೇ ಪಂದ್ಯಕ್ಕೆ ಪಂಜಾಬ್-ರಾಜಸ್ಥಾನ್ ಸಂಭಾವ್ಯ ಪ್ಲೇಯಿಂಗ್ XI ವಿವರ!
PBKS vs RR Match Preview: ಟೇಬಲ್ ಟಾಪರ್ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಶನಿವಾರ ಚಂಡೀಗಢದ ಮಹಾರಾಜ್ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 18ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ಸೇರಿದಂತೆ ಪ್ರಮುಖ ಸಂಗತಿಗಳನ್ನು ಇಲ್ಲಿ ವಿವರಿಸಲಾಗಿದೆ.

ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ ಕದನ!

ಚಂಡೀಗಢ: ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಏಪ್ರಿಲ್ 5 ರಂದು ನಡೆಯುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ( IPL 2025) ಟೂರ್ನಿಯ 18ನೇ ಪಂದ್ಯದಲ್ಲಿ (PBKS vs RR) ಕಾದಾಟ ನಡೆಸಲು ಸಜ್ಜಾಗುತ್ತಿವೆ. ಈ ಪಂದ್ಯಕ್ಕೆ ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಆಡಿದ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದರೆ, ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದಿರುವ ರಾಜಸ್ಥಾನ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಪಂಜಾಬ್ ಕಿಂಗ್ಸ್ ತಂಡಕ್ಕೆ ಇದು ಮೊದಲ ತವರು ಪಂದ್ಯವಾಗಿದೆ. ಅಂದ ಹಾಗೆ ಕಳೆದ ಎರಡೂ ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ಇದೀಗ ತವರು ಅಂಗಣದಲ್ಲಿಯೂ ಮುಂದುವರಿಸಿ ಗೆಲುವಿನ ಲಯವನ್ನು ಮುಂದುವರಿಸಲು ಶ್ರೇಯಸ್ ಅಯ್ಯರ್ ಪಡೆ ಎದುರು ನೋಡುತ್ತಿದೆ. ಈ ಅಂಗಣದಲ್ಲಿ ಕೇವಲ 5 ಐಪಿಎಲ್ ಪಂದ್ಯಗಳು ಮಾತ್ರ ನಡೆದಿದ್ದು, ಇದೀಗ ನಡೆಯುವ ಆರನೇ ಪಂದ್ಯದಲ್ಲಿ ತವರು ಅಭಿಮಾನಿಗಳನ್ನು ಪಂಜಾಬ್ ಕಿಂಗ್ಸ್ ರಂಜಿಸಲಿದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.
IPL 2025: ಎರಡೂ ಕೈಗಳಲ್ಲಿ ಬೌಲಿಂಗ್ ನಡೆಸಿ ವಿಕೆಟ್ ಕಿತ್ತ ಕಮಿಂಡು
ಮತ್ತೊಂದು ಕಡೆ ರಾಜಸ್ಥಾನ್ ರಾಯಲ್ಸ್ ತಂಡ ಆರಂಭಿಕ ಮೂರು ಪಂದ್ಯಗಳಲ್ಲಿ ರಿಯಾನ್ ಪರಾಗ್ ನಾಯಕತ್ವದಲ್ಲಿ ಆಡಿತ್ತು. ಈ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋಲು ಅನುಭವಿಸಿದ್ದು, ಒಂದೇ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ತನ್ನದಾಗಿಸಿಕೊಂಡಿದೆ. ಆದರೆ, ತನ್ನ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗೆಲುವು ಪಡೆದಿದ್ದು, ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸಬಹುದು. ಆದರೆ, ಆರ್‌ಆರ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬೇಕಾಗಿದೆ.
ಪಿಚ್ ರಿಪೋರ್ಟ್
ಪಂಜಾಬ್ ಹಾಗೂ ರಾಜಸ್ಥಾನ್ ನಡುವಣ ಪಂದ್ಯ ನಡೆಯುವ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಹಾಗಾಗಿ ಈ ಪಂದ್ಯದಲ್ಲಿ ರನ್ ಹೊಳೆ ಹರಿಸುವ ಸಾಧ್ಯತೆ ಇದೆ. ಈ ಅಂಗಣದಲ್ಲಿ ಸ್ಪಿನ್ನರ್‌ಗಳು ಕೂಡ ಪ್ರಾಬಲ್ಯ ಸಾಧಿಸಬಹುದು. ಆದರೆ, ಬ್ಯಾಟ್‌ಗೆ ಚೆಂಡು ಸುಲಭವಾಗಿ ಬರುವ ಕಾರಣ ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ಇಲ್ಲಿ ಬ್ಯಾಟ್ ಬೀಸಬಹುದು. ಒಟ್ಟಾರೆಯಾಗಿ ಇಲ್ಲಿನ ಪಿಚ್ ಹೇಗೆ ನೆರವು ನೀಡಲಿದೆ ಎಂಬುದು ತೀವ್ರ ಕುತೂಹಲವನ್ನು ಕೆರಳಿಸಿದೆ.
IPL 2025 Points Table: ಕೊನೆಯ ಸ್ಥಾನದಿಂದ ಭಾರೀ ಜಿಗಿತ ಕಂಡ ಕೆಕೆಆರ್
ಇತ್ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಸುರ್ಯಾಂಶ್ ಶೆಡ್ಜ್, ಮಾರ್ಕೊ ಯೆನ್ಸನ್, ಲಾಕಿ ಫರ್ಗ್ಯೂಸನ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್.
ಇಂಪ್ಯಾಕ್ಟ್ ಪ್ಲೇಯರ್: ಹರಪ್ರೀತ್ ಬ್ರಾರ್/ನೆಹಾಲ್ ವಧೇರಾ
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್(ವಿ.ಕೀ), ಶಿಮ್ರಾನ್ ಹೆಟ್ಮಾಯರ್, ವಾನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ
ಇಂಪ್ಯಾಕ್ಟ್ ಸಬ್‌ಸ್ಟಿಟ್ಯೂಟ್: ಶುಭಮನ್ ದುಬೆ/ಫಝಲಕ್ ಫಾರೂಕಿ
It's a Friday morning. The weekend is almost here. We play tomorrow. You're watching Sanju bat now. Life is good. 😁💗 pic.twitter.com/8BbNAhHK5t
— Rajasthan Royals (@rajasthanroyals) April 4, 2025
ಪಂಜಾಬ್ vs ರಾಜಸ್ಥಾನ್ ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 28
ರಾಜಸ್ಥಾನ್ ಗೆಲುವು: 16
ಪಂಜಾಬ್ ಗೆಲುವು: 12
ಪಂದ್ಯದ ವಿವರ
ಐಪಿಎಲ್ 2025
18ನೇ ಪಂದ್ಯ
ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್
ದಿನಾಂಕ: ಏಪ್ರಿಲ್ 5, 2025
ಸಮಯ: ಸಂಜೆ 07:30ಕ್ಕೆ
ಸ್ಥಳ: ಮಹಾರಾಜ್ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣ, ಚಂಡೀಗಢ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಡಿಸ್ನಿ ಹಾಟ್‌ಸ್ಟಾರ್