ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs DC: ಕೆ ಎಲ್‌ರಾಹುಲ್‌ಗೆ ವಿರಾಟ್‌ ಕೊಹ್ಲಿ ತಿರುಗೇಟು ನೀಡಬೇಕೆಂದ ವರುಣ್‌ ಆರೋನ್‌!

Virat Kohli vs KL Rahul: ಏಪ್ರಿಲ್‌ 27ರಂದು ದಿಲ್ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಕೆಎಲ್‌ ರಾಹುಲ್‌ಗೆ ವಿರಾಟ್‌ ಕೊಹ್ಲಿ ತಿರುಗೇಟು ನೀಡಬಹುದು ಎಂದು ಮಾಜಿ ವೇಗಿ ವರುಣ್‌ ಆರೋನ್‌ ಭವಿಷ್ಯ ನುಡಿದಿದ್ದಾರೆ.

ರಾಹುಲ್‌ಗೆ ವಿರಾಟ್‌ ಕೊಹ್ಲಿ ತಿರುಗೇಟು ನೀಡಬೇಕೆಂದ ವರುಣ್‌ ಆರೋನ್‌!

ಕೆಎಲ್‌ ರಾಹುಲ್‌ಗೆ ವಿರಾಟ್‌ ಕೊಹ್ಲಿ ತಿರುಗೇಟು ನೀಡಬಹುದು ಎಂದ ವರುಣ್‌.

Profile Ramesh Kote Apr 26, 2025 6:38 PM

ನವದೆಹಲಿ: ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ (ಏಪ್ರಿಲ್‌ 27) ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪಂದ್ಯದಲ್ಲಿ(RCB vs DC) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಡೆಲ್ಲಿ ವಿಕೆಟ್‌ ಕೀಪರ್‌ ಕೆಎಲ್‌ ರಾಹುಲ್‌ಗೆ (KL Rahul) ಆರ್‌ಸಿಬಿ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ (Virat Kohli) ತಿರುಗೇಟು ನೀಡಬೇಕೆಂದು ಭಾರತ ತಂಡದ ಮಾಜಿ ವೇಗಿ ವರುಣ್‌ ಆರೋನ್‌ ಆಗ್ರಹಿಸಿದ್ದಾರೆ. ಬೆಂಗಳೂರಿನ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಕಾಂತಾರ ಶೈಲಿಯಲ್ಲಿ ಸಂಭ್ರಮಿಸಿದ್ದರು. ಇದನ್ನು ವಿರಾಟ್‌ ಕೊಹ್ಲಿ ಕೂಡ ವೀಕ್ಷಿಸಿದ್ದರು.

ಏಪ್ರಿಲ್‌ 10ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲ ಬಾರಿ ಆರ್‌ಸಿಬಿ ಹಾಗೂ ಡಿಸಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಆರ್‌ಸಿಬಿ, ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು 163 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 6 ವಿಕೆಟ್‌ಗಳ ಗೆಲುವು ಪಡೆದಿತ್ತು.

DC vs RCB: ಡೆಲ್ಲಿ ಎದುರು ಆರ್‌ಸಿಬಿಗೆ ಸೇಡಿನ ಪಂದ್ಯ

ಡೆಲ್ಲಿ ಚೇಸಿಂಗ್‌ನಲ್ಲಿ ಕೆಎಲ್‌ ರಾಹುಲ್‌ 53 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 93 ರನ್‌ಗಳನ್ನು ಸಿಡಿಸಿದ್ದರು. ಸಿಕ್ಸರ್‌ ಸಿಡಿಸಿ ಡೆಲ್ಲಿಯನ್ನು ಗೆಲ್ಲಿಸಿದ ಬಳಿಕ ಕೆಎಲ್‌ ರಾಹುಲ್‌, ತಮ್ಮ ಬ್ಯಾಟ್‌ನಿಂದ ಒಂದು ವೃತ್ತವನ್ನು ಎಳೆದು, ಬಳಿಕ ಬ್ಯಾಟ್‌ ಅನ್ನು ನೆಲಕ್ಕೆ ಕುಟ್ಟಿ ವಿಭಿನ್ನ ಶೈಲಿಯಲ್ಲಿ ಸಂಭ್ರಮಿಸಿದ್ದರು. ಇದನ್ನು ವಿರಾಟ್‌ ಕೊಹ್ಲಿ ಗಮನಿಸಿದ್ದರು.



ಈ ಪಂದ್ಯದ ಬಳಿಕ ಮಾತನಾಡಿದ್ದ ಕೆಎಲ್‌ ರಾಹುಲ್‌, "ನಾನು ನನ್ನ ನೆಚ್ಚಿನ ಸಿನಿಮಾ ಕಾಂತಾರ ಶೈಲಿಯಲ್ಲಿ ಇಲ್ಲಿ ಸಂಭ್ರಮಿಸಿದ್ದೇನೆ. ಇದು ನನ್ನ ಮೈದಾನ, ಇದು ನನ್ನ ತವರೂರು. ಇಲ್ಲಿ ಹೇಗೆ ಆಡಬೇಕೆಂಬುದು ಬೇರೆಯವರಿಗಿಂತ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ," ಎಂದು ತಮ್ಮ ವಿಶಿಷ್ಟ ಸಂಭ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.

ಕೆಎಲ್‌ ರಾಹುಲ್‌ಗೆ ಕೊಹ್ಲಿ ತಿರುಗೇಟು ನೀಡಬೇಕೆಂದ ಕೊಹ್ಲಿ

ಭಾನುವಾರ ದಿಲ್ಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಡಿಸಿ ಕಾದಾಟ ನಡೆಸಲಿವೆ. ವಿರಾಟ್‌ ಕೊಹ್ಲಿ ತವರೂರು ದಿಲ್ಲಿ ಹಾಗೂ ದೇಶಿ ಕ್ರಿಕೆಟ್‌ ಆಡಿರುವುದು ಕೂಡ ದಿಲ್ಲಿ ತಂಡದ ಪರ. ಅಂದ ಹಾಗೆ ವಿರಾಟ್‌ ಕೊಹ್ಲಿ ಕ್ರಿಕೆಟ್‌ ಆಡಿ ಬೆಳೆದಿದ್ದು ಕೂಡ ದಿಲ್ಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ. ಹಾಗಾಗಿ, ತಮ್ಮ ತವರು ಅಂಗಣದಲ್ಲಿ ವಿರಾಟ್‌ ಕೊಹ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿ ಕೆಎಲ್‌ ರಾಹುಲ್‌ಗೆ ತಿರುಗೇಟು ನೀಡಬಹುದು ಎಂದು ವರುಣ್‌ ಆರೋನ್‌ ಭವಿಷ್ಯ ನುಡಿದಿದ್ದಾರೆ.

IPL 2025: ಕೆಕೆಆರ್‌ ಪಂದ್ಯಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ತಂಡ ಸೇರಿದ ಉಡುಪಿ ಮೂಲದ ತನುಷ್‌ ಕೋಟ್ಯಾನ್‌

"ದಿಲ್ಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆಡುವಾಗ ʻಇದು ನನ್ನ ಕ್ರೀಡಾಂಗಣ ಹಾಗೂ ಈ ಮೈದಾನದ ಬಗ್ಗೆ ಬೇರೆಯವರಿಗಿಂತ ನನಗೆ ತುಂಬಾ ಚೆನ್ನಾಗಿ ಗೊತ್ತಿದೆʼ ಎಂದು ವಿರಾಟ್‌ ಕೊಹ್ಲಿ ಹೇಳಬೇಕೆಂದು ನಾನು ನಿರೀಕ್ಷೆ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ ಕೆಎಲ್‌ ರಾಹುಲ್‌ ಇದನ್ನು ಮಾಡಿದ್ದರು ಹಾಗೂ ಮುಂದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಕೂಡ ಇದೇ ಹೇಳಿಕೆಯನ್ನು ನೀಡಬೇಕು,"ಎಂದು ವರುಣ್‌ ಆರೋನ್‌ ತಿಳಿಸಿದ್ದಾರೆ.