Friday, 13th December 2024

ಶಿಖರ್‌, ಶ್ರೇಯಸ್‌ ಅರ್ಧಶತಕ: ರಾಜಸ್ಥಾನ್ ಗೆಲುವಿಗೆ 162 ರನ್ ಸವಾಲು

ದುಬೈ : ಶ್ರೇಯಸ್ ಪಡೆ ನಿಗದಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿದ್ದು, 162 ರ ಸವಾಲನ್ನು ರಾಜಸ್ಥಾನ್ ತಂಡಕ್ಕೆ ನೀಡಿದೆ.

ಡೆಲ್ಲಿ ಆರಂಭಿಕ ಪೃಥ್ವಿ ಶಾ ಪ್ರಾರಂಭಿಕ ಎಸೆತದಲ್ಲೇ ಆರ್ಚರ್ ಅವರಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲದೆ 2 ರನ್ ಗಳಿಸಿ ಅರ್ಚರ್ ಎಸೆತಕ್ಕೆ ರಾಬಿನ್ ಉತ್ತಪ್ಪ ಕೈಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ತಂಡವನ್ನು ನಾಯಕ ಶ್ರೇಯಸ್ ಹಾಗೂ ಧವನ್ ಜೊತೆಯಾಟದಿಂದ ಸ್ಕೋರ್ ಮುನ್ನಡೆಗೆ ನೆರವಾದರು.

ಶಿಖರ್ 6 ಬೌಂಡರಿಯೊಂದಿಗೆ 2 ಸಿಕ್ಸರ್ ದಾಖಲಿಸಿ 57 ರನ್ ಗಳಿಸಿ ಕಾರ್ತಿಕ್ ತ್ಯಾಗಿ ಎಸೆತಕ್ಕೆ ಗೋಪಾಲ್ ಕೈಗೆ ಕ್ಯಾಚ್ ಕೊಟ್ಟು ಔಟ್ ಆದರು, ಬಳಿಕ ಶ್ರೇಯಸ್ ಬಿರುಸಿನಿಂದ ಬ್ಯಾಟ್ ಬೀಸು ತ್ತಲೇ 3 ಬೌಂಡರಿ 2 ಸಿಕ್ಸರ್ ದಾಖಲಿಸಿ 53 ರನ್ ಮಾಡಿ ತ್ಯಾಗಿ ಎಸೆತಕ್ಕೆ ಅರ್ಚರ್ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಸಾಗಿದರು.

ಮಾರ್ಕಸ್ ಸ್ಟೋನಿಸ್ ಹಾಗೂ ಅಲೆಕ್ಸ್ ಕ್ಯಾರಿ ಅಂತಿಮ ಓವರ್ ನಲ್ಲಿ ಬಿರುಸಿನಿಂದ ಬ್ಯಾಟ್ ಬೀಸಿದರು. ಡೆಲ್ಲಿ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 161 ಮೊತ್ತ ಪೇರಿಸಿದೆ. ರಾಜಸ್ಥಾನ್ ಪರ ಉತ್ತಮವಾಗಿ ಬೌಲ್ ಮಾಡಿ ದ ಅರ್ಚರ್ 4 ಓವರ್ ನಲ್ಲಿ 19 ರನ್ ಕೊಟ್ಟು 3 ಪ್ರಮುಖ ವಿಕೆಟ್ ಗಳನ್ನು ಪಡೆದು ಮಿಂಚಿದರು ಜಯದೇವ್ ಉನಾದ್ಕಟ್ 2 ವಿಕೆಟ್ ಗಳನ್ನು ಪಡೆದು ಮಿಂಚಿದರು. ಕಾರ್ತಿಕ್ ತ್ಯಾಗಿ, ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.