ಹಾಂಕಾಂಗ್:
ಸಾತ್ವಿಿಕ್‌ಸಾಯಿರಾಜ್ ರಂಕಿರೆಡ್ಡಿಿ ಹಾಗೂ ಚಿರಾಗ್ ಶೆಟ್ಟಿಿ ಜೋಡಿಯು ಇಂದಿನಿಂದ ಆರಂಭವಾಗುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸುವ ತುಡಿತ ಹೊಂದಿದೆ. ಆದರೆ, ಕಳೆದ ಟೂರ್ನಿಯಲ್ಲಿ ಬಹುಬೇಗ ನಿರ್ಗಮಿಸಿ ಆಘಾತಕ್ಕೆೆ ಒಳಗಾಗಿದ್ದ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಾಲ್ ಅವರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಛಲದೊಂದಿಗೆ ಕಣಕ್ಕೆೆ ಇಳಿಯಲಿದ್ದಾಾರೆ.
ಭಾರತದ ಪುರುಷರ ಡಬಲ್‌ಸ್ ಜೋಡಿ ಪ್ರಸ್ತುತ ಲಯದಲ್ಲಿದೆ. ಮೊದಲನೇ ಪಂದ್ಯದಲ್ಲಿ ಭಾರತ ಡಬಲ್‌ಸ್ ಜೋಡಿಗೆ ಜಪಾನ್‌ನ ಟಕುರೊ ಹೊಕಿ ಮತ್ತು ಯುಗೊ ಕೊಬಯಾಶಿ ಜೋಡಿಯ ಸವಾಲು ಎದುರಾಗಲಿದೆ. ವಿಶ್ವ ಚಾಂಪಿಯನ್‌ಶಿಪ್ ಬಳಿಕ ಭಾರತದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಾಲ್ ಅವರ ಪಾಲಿಗೆ ಕಳೆದ ಕೆಲವು ವಾರಗಳು ಕಠಿಣವಾಗಿದ್ದವು. ಆಡಿದ ಟೂರ್ನಿಗಳಲ್ಲಿ ಆರಂಭದಲ್ಲೇ ಸೋತು ಹೊರ ನಡೆದಿದ್ದರು. ಸೈನಾ ನೆಹ್ವಾಾಲ್ ಮೊದಲನೇ ಸುತ್ತಿಿನಲ್ಲಿ ಚೀನಾದ ಚೈ ಯಾನ್ ಯಾನ್ ವಿರುದ್ಧ ನೇರ ಸೆಟ್‌ಗಳಲ್ಲಿ ಆಘಾತ ಅನುಭವಿಸಿದ್ದರು. ಓಪನ್ ಟೂರ್ನಿಯ ಮೊದಲನೇ ಪಂದ್ಯದಲ್ಲಿ ಸೈನಾ ನೆಹ್ವಾಾಲ್ ಅದೇ ಆಟಗಾರ್ತಿ ವಿರುದ್ಧ ಸೆಣಸಲಿದ್ದಾಾರೆ. ಪಿ.ವಿ ಸಿಂಧು ವಿಶ್ವದ 19ನೇ ಶ್ರೇಯಾಂಕಿತೆ ಕಿಮ್ ಗಾ ಎನ್ ವಿರುದ್ಧ ಆರಂಭಿಕ ಸುತ್ತಿಿನಲ್ಲಿ ಕಾದಾಟ ನಡೆಸಲಿದ್ದಾಾರೆ.
ವಿಶ್ವದ 10ನೇ ಶ್ರೇಯಾಂಕಿತ ಭಾರತದ ಕಿಡಂಬಿ ಶ್ರೀಕಾಂತ್ ಅವರಿಗೆ ಪುರುಷರ ಸಿಂಗಲ್‌ಸ್ ವಿಭಾಗದ ಮೊದಲನೇ ಸುತ್ತಿಿನಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಕೆಂಟೊ ಮೊಮೊಟಾ ವಿರುದ್ಧ ಕಠಿಣ ಸವಾಲು ಎದುರಾಗಲಿದೆ. ವಿಶ್ವದ ಚಾಂಪಿಯನ್‌ಶಿಪ ಕಂಚಿನ ಪದಕ ವಿಜೇತ ಸಾಯಿ ಪ್ರಣೀತ್ ಅವರು ಆರಂಭಿಕ ಸುತ್ತಿಿನಲ್ಲಿ ಚೀನಾದ ಶಿ ಯು ಕಿ ವಿರುದ್ಧ ಸೆಣಸಲಿದ್ದಾಾರೆ. ಸಮೀರ್ ವರ್ಮಾಗೆ ತೈವಾನ್‌ನ ವಾಂಗ್ ಟಿಜು ವೇ ಮೊದಲ ಎದುರಾಳಿಯಾದರೆ, ಪರುಪಳ್ಳಿಿ ಕಶ್ಯಪ್‌ಗೆ ಮೊದಲ ಪಂದ್ಯದಲ್ಲಿ ಜಪಾನ್‌ನ ಕೆಂಟಾ ನಿಶಿಮೋಟಾ ಎದುರಾಗಲಿದ್ದಾಾರೆ.
=