Thursday, 19th September 2024

ಈ ಬಾರಿ ಅವಹೇಳನಕ್ಕೆ ಒಳಗಾಗಿಲ್ಲ: ವಾರ್ನರ್

ಲಂಡನ್: ನಾನು ಇದೇ ಮೊದಲ ಬಾರಿ ಇಂಗ್ಲೆಂಡ್ ಪ್ರೇಕ್ಷಕರೆದುರು ಅವಹೇಳನಕ್ಕೆ ಒಳಗಾಗಿಲ್ಲ ಎಂದು ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಸಂತಸದಿಂದ ಹೇಳಿದ್ದಾರೆ.

2013ರಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್‌ಗೆ ಬಾರ್ ಒಂದರಲ್ಲಿ ಹಲ್ಲೆ ಮಾಡಿದ್ದರು. ಬಳಿಕ, ವಾರ್ನರ್‌ಗೆ ಇಂಗ್ಲೆಂಡ್ ಪ್ರವಾಸ ಮಾಡುವ ಸಂದರ್ಭ, ಮುಜುಗರಕ್ಕೆ ಒಳಗಾಗುತ್ತಿದ್ದರು. ಇಂಗ್ಲೆಂಡಿನ ಕ್ರಿಕೆಟ್ ಪ್ರಿಯರ ಮನಸ್ಥಿತಿ ಬದಲಾಗಿದೆ ಎಂದು ಪಂದ್ಯದ ಬಳಿಕ ನುಡಿದ ವಾರ್ನರ್, ಬಾಲ್ ಟ್ಯಾಾಂಪರಿಂಗ್ ಹಗರಣದಲ್ಲಿ ಒಂದು ವರ್ಷ ಶಿಕ್ಷೆಗೆ ಒಳಗಾಗಿ ದ್ದ ವಾರ್ನರ್, ಬಳಿಕ ಪ್ರವಾಸ ಮಾಡಿದಲ್ಲೆಲ್ಲ ಟೀಕೆಗೆ ಗುರಿಯಾಗುತ್ತಿದ್ದರು.

ಐಪಿಎಲ್‌ನಲ್ಲಿ ಸನ್‌ರೈಸರ್‌ಸ್‌ ಹೈದರಾಬಾದ್ ತಂಡದ ಸದಸ್ಯರಾಗಿರುವ ವಾರ್ನರ್, ಭಾರತಕ್ಕೆ ಪ್ರವಾಸ ಮಾಡಲಿದ್ದು, ತಮ್ಮ ತಂಡವನ್ನು ಯುಎಇನಲ್ಲಿ ಕೂಡಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *