Saturday, 14th December 2024

ಸೆಪ್ಟೆಂಬರ್ 19ರಿಂದ ಐಪಿಎಲ್ 2021 ಪುನರಾರಂಭ

ಮುಂಬೈ: ಕರೋನಾ ಕಾರಣದಿಂದ ಅರ್ಧಕ್ಕೆ ಮುಂದೂಡಲ್ಪಟ್ಟ ಐಪಿಎಲ್ 2021  ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ.

ಭಾರತದಲ್ಲಿ ಕರೋನಾ ಪಿಡುಗು ಕಡಿಮೆಯಾಗದ ಕಾರಣ ಯುಎಇಯಲ್ಲಿ ಐಪಿಎಲ್ ನ ಉಳಿದ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಆವೃತ್ತಿಯ ಉಳಿದ 31 ಪಂದ್ಯಗಳನ್ನು ಸೆಪ್ಟೆಂಬರ್ 19 ರಿಂದ ದುಬೈ, ಅಬುಧಾಬಿ ಹಾಗೂ ಶಾರ್ಜಾದಲ್ಲಿ ಆಯೋಜಿಸಲಾಗುವುದು ಎಂದು ಪ್ರಕಟಿಸಿದೆ.

ಐಪಿಎಲ್ ಫೈನಲ್ ಅಕ್ಟೋಬರ್ 15ರಂದು ನಡೆಯಲಿದೆ. 25 ದಿನಗಳ ಒಳಗೆ ಟೂರ್ನಿ ಮುಗಿಸಲು ಕ್ರಿಕೆಟ್ ಮಂಡಳಿ ಉತ್ಸುಕ ವಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು 2020ರ ಐಪಿಎಲ್ ಸಹ ರದ್ದಾಗಿದ್ದು ಈ ವೇಳೆ ಟೂರ್ನಿಯನ್ನು ಬಯೋ-ಬಬಲ್ ನಲ್ಲಿ ಯುಎಇಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.