Saturday, 14th December 2024

ಲಿಟ್ಲ್ ಮಾಸ್ಟರ್‌ ದಾಖಲೆ ಸರಿಗಟ್ಟಿದ ಚೇಸ್ ಮಾಸ್ಟರ್‌

ಕೋಲ್ಕತ್ತಾ: ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​ಗೆ ಇಳಿದ ಟೀಮ್​ ಇಂಡಿಯಾ ಪರ ಚೇಸ್ ಮಾಸ್ಟರ್‌ ವಿರಾಟ್ ಕೊಹ್ಲಿ, ತಮ್ಮದೇ ನಾಡಿನ ಸಚಿನ್ ತೆಂಡುಲ್ಕರ್‌ ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿರು. ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಶತಕವನ್ನು ತಪ್ಪಿಸಿಕೊಂಡಿದ್ದರು.

ಇದಕ್ಕೂ ಮುನ್ನ ನಾಯಕ ರೋಹಿತ್​ ಶರ್ಮಾ ಬಿರುಸಿನ ಆರಂಭ ನೀಡಿದರು. ಆದರೆ 6ನೇ ಓವರ್​ನಲ್ಲಿ ರೋಹಿತ್​ ಶರ್ಮಾ ದೊಡ್ಡ ಹಿಟ್​ಗೆ ಪ್ರಯತ್ನಿಸಿ ವಿಕೆಟ್​ ಒಪ್ಪಿಸಿದರು. ಇನ್ನಿಂಗ್ಸ್​ನಲ್ಲಿ 40 ರನ್​ ಕಲೆಹಾಕಿದ್ದರು.

ಉತ್ತಮ ಆರಂಭ ಪಡೆದುಕೊಂಡಿದ್ದ ಶುಭಮನ್​ ಗಿಲ್​ ಪವರ್​ ಪ್ಲೇ ಮುಕ್ತಾಯವಾಗಿ ಕೇಶವ್​ ಮಹಾರಾಜ್​ ಕೈಗೆ ಬಾಲ್​ ಸಿಕ್ಕುತ್ತಿದ್ದಂತೆ ಔಟ್​ ಆದರು. ಗಿಲ್​ 24 ಬಾಲ್​ನಲ್ಲಿ 23 ರನ್​ ಮಾಡಿ ವಿಕೆಟ್​ ಒಪ್ಪಿಸಿದ್ದರು.

ಬಳಿಕ ಉಪನಾಯಕ ಕೆ.ಎಲ್.ರಾಹುಲ್ 8 ರನ್ನಿಗೆ ವಿಕೆಟ್ ಒಪ್ಪಿಸಿ ನಿರಾಶರಾದರು. ಕೊನೆಯಲ್ಲಿ ಆಲ್ರೌಂಟರ್‌ ರವೀಂದ್ರ ಜಡೇಜಾ 29 ಗಳಿಸಿ, ತಂಡದ ಮೊತ್ತ 326 ತಲುವುವಂತೆ ಮಾಡಿದರು.

ದಕ್ಷಿಣ ಆಫ್ರಿಕಾ ತಂಡದ ಐವರು ಬೌಲರುಗಳು ತಲಾ ಒಂದು ವಿಕೆಟ್ ಕಿತ್ತರು. ಈ ಪೈಕಿ ಕೇಶವ್ ಮಹಾರಾಜ್ ಅವರು ಉತ್ತಮ ದಾಳಿ ಸಂಘಟಿಸಿದರು. ಹತ್ತು ಓವರಿನಲ್ಲಿ 30 ನೀಡಿದರು.