Saturday, 9th November 2024

ಮನೀಶ್ ಪಾಂಡೆ ಸ್ಫೋಟಕ್ಕೆ ಸರ್ವೀಸಸ್ ಠುಸ್

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಕರ್ನಾಟಕಕ್ಕೆೆ 80 ರನ್ ಜಯ ಮಿಂಚಿದ ಶ್ರೇಯಸ್ ಗೋಪಾಲ್ ಕನ್ನಡಿಗರಿಗೆ ಅಗ್ರ ಸ್ಥಾನ

ನಾಯಕ ಮನೀಶ್ ಪಾಂಡೆ (ಔಟಾಗದೆ 129 ರನ್) ಹಾಗೂ ಶ್ರೇಯಸ್ ಗೋಪಾಲ್ ಐದು ವಿಕೆಟ್ ಗೊಂಚಲು ನೆರವಿನಿಂದ ಕರ್ನಾಟಕ ತಂಡ ಸೈಯದ್ ಅಲಿ ಟಿ-20 ಕ್ರಿಿಕೆಟ್ ಟೂರ್ನಿಯ ‘ಎ’ ಗುಂಪಿನ ನಾಲ್ಕನೇ ಸುತ್ತಿಿನ ಪಂದ್ಯದಲ್ಲಿ ಸರ್ವೀಸಸ್ ವಿರುದ್ಧ 80 ರನ್ ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಅಂಕಪಟ್ಟಿಿಯಲ್ಲಿ ಅಗ್ರ ಸ್ಥಾಾನ ಪಡೆಯಿತು.

ಇಲ್ಲಿನ ಡಾ. ಪಿವಿಜಿ ರಾಜು ಎಸಿಎ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಾಟಿಂಗ್ ಮಾಡಿದ ಕರ್ನಾಟಕ ತಂಡ, ನಿಗದಿತ 20 ಓವರ್‌ಗಳಿಗೆ ಮೂರು ವಿಕೆಟ್ ನಷ್ಟಕ್ಕೆೆ 250 ರನ್ ದಾಖಲಿಸಿತು. ಬೃಹತ್ ಗುರಿ ಸರ್ವೀಸಸ್ ತಂಡ, ನಿಗದಿತ 20 ಓವರ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು 170 ರನ್‌ಗಳಿಗೆ ಸೀಮಿತವಾಯಿತು. ಸೋಮವಾರ ಆಂದ್ರ ವಿರುದ್ಧ ಗೆಲುವು ಪಡೆದಿದ್ದ ಕರ್ನಾಟಕ ಮಂಗಳವಾರದ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಬಾಂಗ್ಲಾಾದೇಶ ವಿರುದ್ಧ ಟಿ-20 ಸರಣಿ ಮುಗಿಸಿಕೊಂಡು ತವರು ತಂಡಕ್ಕೆೆ ಮರಳಿದ ನಾಯಕ ಮನೀಶ್ ಪಾಂಡೆ, ಆಡಿದ ಮೊದಲನೇ ಪಂದ್ಯದಲ್ಲೇ ಸ್ಫೋೋಟಕ ಬ್ಯಾಾಟಿಂಗ್ ಮಾಡಿದರು. ಟಾಸ್ ಗೆದ್ದು ಮೊದಲು ಫೀಲ್ಡಂಗ್ ಆಯ್ದುಕೊಂಡಿದ್ದ ಸರ್ವೀಸಸ್ ತಂಡದ ನಾಯಕ ರಜತ್ ಪಲಿವಾಲ್ ನಿರ್ಧಾರವನ್ನು ನಾಯಕ ಪಾಂಡೆ ಹಾಗೂ ದೇವದತ್ತ ಪಡಿಕ್ಕಲ್ ಛಿದ್ರ-ಛಿದ್ರ ಮಾಡಿದರು.

ರೋಹನ್ ಕದಮ್(4) ಅವರು ಬೇಗ ವಿಕೆಟ್ ಒಪ್ಪಿಿಸಿದರು. ಇವರಿಬ್ಬರ ಎರಡನೇ ಜತೆಯಾಟಕ್ಕೆೆ ಸರ್ವೀಸಸ್ ತಂಡದ ಬೌಲರ್‌ಗಳು ಸುಸ್ತಾಾದರು. ಈ ಜೋಡಿ ಎರನಡೇ ವಿಕೆಟ್‌ಗೆ 167 ರನ್ ಚಚ್ಚುವ ಮೂಲಕ ಕರ್ನಾಟಕದ ಮೊತ್ತವನ್ನು 150ರ ಗಡಿ ದಾಟಿಸಿತು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಆಂಧ್ರ ವಿರುದ್ಧ ಗೆಲುವಿಗೆ ಕಾರಣರಾಗಿದ್ದ ದೇವದತ್ತ ಪಡಿಕ್ಕಲ್ ಮಂಗಳವಾರದ ಪಂದ್ಯದಲ್ಲೂ ನಿರಾಸೆ ಮೂಡಿಸಲಿಲ್ಲ. 43 ಎಸೆತಗಳಲ್ಲಿ ರನ್ ಚಚ್ಚಿಿ ಔಟ್ ಆದರು. ನಂತರ, ತಮ್ಮ ಸ್ಫೋೋಟಕ ಬ್ಯಾಾಟಿಂಗ್ ಮುಂದುವರಿಸಿದ ಮನೀಶ್ ಪಾಂಡೆ ಸರ್ವೀಸಸ್ ಬೌಲರ್‌ಗಳನ್ನು ದಂಡಿಸಿದರು. ಕೇವಲ 54 ಎಸೆತಗಳಲ್ಲಿ 129 ರನ್ ಗಳಿಸಿ ಪ್ರಸಕ್ತ ಆವೃತ್ತಿಿಯಲ್ಲಿ ಮೊದಲ ಶತಕ ಸಿಡಿಸಿ ಸಂಭ್ರಮಿಸಿದರು. ಭಾರತ ತಂಡದಲ್ಲಿ ಆಡಿರುವ ಅವರಿಗೆ ಸರ್ವೀಸಸ್ ಬೌಲರ್‌ಗಳು ಕಷ್ಟವೆನಿಸಲೇ ಇಲ್ಲ. ಲೀಲಾ-ಜಾಲವಾಗಿ ಬ್ಯಾಾಟ್ ಬೀಸುವ ಮೂಲಕ ನೆರೆದಿದ್ದ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದರು. ಇವರ ಅದ್ಭುತ ಇನಿಂಗ್‌ಸ್‌‌ನಲ್ಲಿ 10 ಸಿಕ್ಸರ್ ಹಾಗೂ ಬೌಂಡರಿಗಳು ಒಳಗೊಂಡಿದ್ದವು. ಕೆ.ಗೌತಮ್ 23 ರನ್ ಗಳಿಸಿ ಔಟ್ ಆಗಿದ್ದರು.

ಕರ್ನಾಟಕ ನೀಡಿದ 251 ರನ್ ಬೃಹತ್ ಸವಾಲು ಹಿಂಬಾಲಿಸಿದ ಸರ್ವೀಸಸ್, ಆರಂಭದಲ್ಲೇ ನಕುಲ್ ಹರ್ಪಾಲ್ ವರ್ಮಾ(6) ಅವರ ವಿಕೆಟ್ ಅನ್ನು ಕಳೆದುಕೊಂಡಿತು. ನಂತರ ಜತೆಯಾದ ರವಿ ಚೌವ್ಹಾಾನ್ ಹಾಗೂ ಅನ್ಷುಲ್ ಗುಪ್ತಾಾ ಜೋಡಿ ಎರಡನೇ ವಿಕೆಟ್‌ಗೆ 64 ರನ್ ಗಳಿಸಿ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿತು. ಅನ್ಷುಲ್ ಗುಪ್ತಾಾ 29 ರನ್ ಗಳಿಸಿ ಕೆ.ಗೌತಮ್‌ಗೆ ವಿಕೆಟ್ ಅದ್ಭುತ ಪ್ರದರ್ಶನ ತೋರಿದ ರವಿ ಚೌವ್ಹಾಾನ್ 35 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಐದು ಬೌಂಡರಿಯೊಂದಿಗೆ 54 ರನ್ ಗಳಿಸಿ ಶ್ರೇಯಸ್ ಗೋಪಾಲ್‌ಗೆ ಔಟ್ ಆದರು. ಕೊನೆಯವರೆಗೂ ಬ್ಯಾಾಟಿಂಗ್ ಮಾಡಿದ ರಜತ್ ಪಲಿವಾಲ್ 30 ಎಸೆತಗಳಲ್ಲಿ 46 ರನ್ ಗಳಿಸಿ ಅಜೇಯರಾಗಿ ಉಳಿದರು. ಇನ್ನುಳಿದಂತೆ ಎಲ್ಲ ಬ್ಯಾಾಟ್‌ಸ್‌‌ಮನ್‌ಗಳು ಕರ್ನಾಟಕ ಬೌಲರ್‌ಗಳನ್ನು ಎದುರಿಸುವಲ್ಲಿ ವಿಫಲರಾದರು.

ಸ್ಪಿಿನ್ ಮ್ಯಾಾಜಿಕ್ ಮಾಡಿದ ಶ್ರೇಯಸ್ ಗೋಪಾಲ್ ಸರ್ವೀಸಸ್ ಬ್ಯಾಾಟ್‌ಸ್‌‌ಮನ್‌ಗಳಿಗೆ ಸಿಂಹಸ್ವಪ್ನರಾದರು. ನಾಲ್ಕು ಓವರ್ ಬೌಲಿಂಗ್ ಶ್ರೇಯಸ್, ಕೇವಲ 19 ರನ್ ನೀಡಿ ಐದು ವಿಕೆಟ್ ಗೊಂಚಲು ಪಡೆದರು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 20 ಓವರ್‌ಗಳಿಗೆ 250/3 (ಮನೀಶ್ ಪಾಂಡೆ ಔಟಾಗದೆ 129, ದೇವದತ್ತ ಪಡಿಕ್ಕಲ್ 75; ದಿವೇಶ್ ಪಠಾಣಿಯಾ 28 ಕ್ಕೆೆ 1)
ಸರ್ವೀಸಸ್: 20 ಓವರ್‌ಗಳಿಗೆ 170/7 (ರವಿ ಚೌವ್ಹಾಾನ್ 54, ರಜತ್ ಪಲಿವಾಲ್ ಔಟಾಗದೆ 46, ಅನ್ಷುಲ್ ಗುಪ್ತಾಾ 29; ಶ್ರೇಯಸ್ ಗೋಪಾಲ್ 19 ಕ್ಕೆೆ 5, ವಿ.ಕೌಶಿಕ್ 6 1, ಕೆ.ಗೌತಮ್ 48 ಕ್ಕೆೆ 1)