Thursday, 19th September 2024

ಸಸೆಕ್ಸ್ ವೇಗಿ ಒಲಿ ರಾಬಿನ್ಸನ್ ವೃತ್ತಿ ಜೀವನಕ್ಕೆ ಮುಳುವಾದ ಟ್ವೀಟ್‌ ?

ಲಂಡನ್: ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಪರಿಣಾಮಕಾರಿ ಯಾಗಿದ್ದ ಸಸೆಕ್ಸ್ ವೇಗಿ ಒಲಿ ರಾಬಿನ್ಸನ್ ಖುಷಿ ಈಗ ಮರೆಯಾಗಿದೆ. ಸುಮಾರು ಒಂಬತ್ತು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ರಾಬಿನ್ಸನ್ ವೃತ್ತಿ ಜೀವನಕ್ಕೆ ಮುಳುವಾಗಿದೆ.

27 ವರ್ಷದ ಒಲಿ ರಾಬಿನ್ಸನ್ 2012 ಮತ್ತು 2013ರಲ್ಲಿ ರೇಸಿಸ್ಟ್ ಮತ್ತು ಸೆಕ್ಸಿಸ್ಟ್ ಟ್ವಿಟ್ ಗಳನ್ನು ಮಾಡಿದ್ದರು. ಅದು ಕೆಲ ದಿನಗಳ ಹಿಂದೆ ಚರ್ಚೆಗೆ ಕಾರಣ ವಾಗಿತ್ತು. ಬಳಿಕ ಇಸಿಬಿ ಇದರ ಬಗ್ಗೆ ತನಿಖೆ ನಡೆಸಿತ್ತು.

2013 ಮತ್ತು 2013ರಲ್ಲಿ ರಾಬಿನ್ಸನ್ ಮಾಡಿದ್ದ ಜನಾಂಗೀಯ ನಿಂದನಾತ್ಮಕ ಟ್ವೀಟ್ ಕಾರಣದಿಂದ ಅವರ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದು, ರಾಬಿನ್ಸನ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು ಮಾಡಲಾಗಿದೆ ಎಂದು ಇಸಿಬಿ ಪ್ರಕಟಣೆ ತಿಳಿಸಿದೆ.

ಜೂ.10ರಂದು ಆರಂಭವಾಗುವ ಕಿವೀಸ್ ವಿರುದ್ದದ ಎರಡನೇ ಪಂದ್ಯಕ್ಕೂ ರಾಬಿನ್ಸನ್ ರನ್ನು ಆಯ್ಕೆ ಮಾಡುವಂತಿಲ್ಲ. ತಕ್ಷಣ ದಿಂದ ಜಾರಿಗೆ ಬರುವಂತೆ ರಾಬಿನ್ಸನ್ ತಂಡವನ್ನು ತೊರೆಯಬೇಕು ಎಂದು ಇಸಿಬಿ ತಿಳಿಸಿದೆ.

ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ರಾಬಿನ್ಸನ್ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ ಮಿಂಚಿದ್ದ ರಾಬಿನ್ಸನ್ ಏಳು ವಿಕೆಟ್ ಪಡೆದಿದ್ದರು.

 

Leave a Reply

Your email address will not be published. Required fields are marked *