ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿಧಿಸಿದ ಬೃಹತ್ ಮೊತ್ತವನ್ನು ಬೆನ್ನಟ್ಟಲು ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 59 ರನ್ ಗಳಿಂದ ಸೋತಿದ್ದು, ಟೂರ್ನಿಯಲ್ಲಿ ಎರಡನೇ ಸೋಲು ಕಂಡಿದೆ.
ನಾಲ್ಕನೇ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನಕ್ಕೆ ಏರಿದೆ. ಗೆಲುವಿಗೆ 197 ರನ್ ಗುರಿ ಪಡೆದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕಟ್ ನಷ್ಟಕ್ಕೆ ಕೇವಲ 139 ರನ್ ಗಳಿಸಿ ಸೋಲೊಪ್ಪಿಕೊಂಡಿತು. ವಿರಾಟ್ ಕೊಹ್ಲಿ 43 ಮಾತ್ರ ಏಕಾಂಗಿ ಹೋರಾಟ ಪ್ರದರ್ಶಿಸಿ ದರು. ಅವರು 43 ರನ್ ಗಳಿಸಿ ಔಟಾದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಕಾಗಿಸೋ ರಬಾಡ 4 ವಿಕೆಟ್ ಪಡೆದರು. ಸ್ಪಿನ್ನರ್ ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 4 ವಿಕಟ್ ನಷ್ಟಕ್ಕೆ 196 ರನ್ ಗಳಿಸಿತು. ಆರಂಭಿಕ ಪೃಥ್ವಿ ಶಾ 23 ಎಸೆತಗಳಲ್ಲಿ 42, ಶಿಖರ್ ಧವನ್ 32, ರಿಷಬ್ ಪಂತ್ 37, ಮಾರ್ಕಸ್ ಸ್ಟೋನಿಸ್ 26 ಎಸೆತಗಳಲ್ಲಿ 53 ರನ್ ಬಾರಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮುಹಮ್ಮದ್ ಸಿರಾಜ್ 2, ಮೊಯೀನ್ ಅಲಿ ಹಾಗೂ ಇಸುರು ಉದಾನ ತಲಾ 1 ವಿಕೆಟ್ ಪಡೆದರು.