Wednesday, 29th May 2024

ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಸಾಯಿ ಸುದರ್ಶನ್ ಪದಾರ್ಪಣೆ

ಜೋಹಾನ್ಸ್’ಬರ್ಗ್‌: ಭಾರತ ತಂಡ ಡಿ.17 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಆಡುತ್ತಿದ್ದು, 22ರ ಹರೆಯದ ಬ್ಯಾಟ್ಸ್‌ಮನ್‌ ಸಾಯಿ ಸುದರ್ಶನ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ.

ಗುಜರಾತ್ ಟೈಟನ್ಸ್‌ನ ಈ ಆಟಗಾರ ಮೊದಲು ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ್ದರು. ಆದರೆ ಅವರ ಅವಕಾಶ ಪಡೆದಿರಲಿಲ್ಲ. ಈ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿದೆ.

ಅವರು IPL 2023 ರಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದ್ದರು. ಮತ್ತು ಮೊದಲ ಋತುವಿನಲ್ಲಿಯೇ ಅವರು 13 ಪಂದ್ಯಗಳನ್ನು ಆಡಿದ ನಂತರ 507 ರನ್ ಗಳಿಸಿದರು. ಇದರಲ್ಲಿ ಶತಕವೂ ಸೇರಿತ್ತು. ಇದಲ್ಲದೆ, ಸುದರ್ಶನ್ ದೇಶೀಯ ಟೂರ್ನಿಯಲ್ಲಿ ಅಬ್ಬರ ನಡೆಸಿದ್ದರು. ಈ ಕಾರಣಕ್ಕಾಗಿ, ಈಗ ಅವರು ಟೀಮ್ ಇಂಡಿಯಾದ ಕದ ತಟ್ಟಿದರು.

ಸಾಯಿ ಸುದರ್ಶನ್ ತಮಿಳುನಾಡಿನ ಎಡಗೈ ಬ್ಯಾಟ್ಸ್‌ಮನ್. ಎಡಗೈ ಲೆಗ್‌ಬ್ರೇಕ್ ಬೌಲರ್‌. ಇವರು 16ನೇ ಋತುವಿನಲ್ಲಿ ಗುಜರಾತ್ ಟೈಟಾನ್ಸ್‌ಗಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಮೊದಲ ಸೀಸನ್‌ನಲ್ಲಿಯೇ 500ರ ಗಡಿ ದಾಟುವ ಮೂಲಕ ಎಲ್ಲರ ಮನಗೆದ್ದಿದ್ದರು.

Leave a Reply

Your email address will not be published. Required fields are marked *

error: Content is protected !!