Wednesday, 11th December 2024

ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ

ವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಕ್ರಿಕೆಟ್ ತಂಡವು ಡಿಸೆಂಬರ್ 26ರಿಂದ ನಡೆಯುವ ಟೆಸ್ಟ್ ಸರಣಿಯಲ್ಲಿ ಆಡಲಿದೆ.

ಅದಕ್ಕೂ ಮುನ್ನ ಭಾರತ ‘ಎ’ ತಂಡವು ಮೂರು ಪಂದ್ಯಗಳನ್ನು ಆಡಲಿದೆ. ಅದರಲ್ಲಿ ಸೀನಿಯರ್ ತಂಡದ ಕೆಲವು ಅನುಭವಿ ಟೆಸ್ಟ್ ಪರಿಣತ ಆಟಗಾರ ರನ್ನೂ ಸೇರ್ಪಡೆ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಯೋಜಿ ಸಿದೆ.

ಭಾರತ ಎ ತಂಡವು ದಕ್ಷಿಣ ಆಫ್ರಿಕಾ ಎ ವಿರುದ್ಧ ಮೂರು ‘ಟೆಸ್ಟ್’ಗಳನ್ನು ಆಡಲಿದೆ. ಜನವರಿಯಲ್ಲಿ ಭಾರತ ಎ ತಂಡವು ಇಂಗ್ಲೆಂಡ್ ಸೀನಿಯರ್ ಬಳಗದ ವಿರುದ್ಧವೂ ಸರಣಿ ಆಡಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಅನುಭವಿ ಆಟಗಾರರಾದ ಅಜಿಂಕ್ಯ ರಹಾನೆ, ಆರ್.ಅಶ್ವಿನ್ ಮತ್ತು ಜಯದೇವ್ ಉನದ್ಕತ್ ಅವರು ಎ ತಂಡದೊಂದಿಗೆ ತೆರಳುವ ಅವಕಾಶ ಪಡೆಯುವ ಸಾಧ್ಯತೆ ಇದೆ. ಉಳಿದಂತೆ, ಯುವ ಆಟಗಾರರಾದ ಯಶ್ ಧುಲ್, ಬಿ.ಸಾಯಿ ಸುದರ್ಶನ್, ಕೊನಾ ಭರತ್, ಉಪೇಂದ್ರ ಯಾದವ್ ಮತ್ತು ಸೌರಭ್ ಕುಮಾರ್ ಸ್ಥಾನ ಪಡೆಯುವುದು ಬಹುತೇಕ ಖಚಿತ.

ಕನ್ನಡಿಗ ವಿದ್ವತ್ ಕಾವೇರಪ್ಪ, ಕುಲದೀಪ್ ಸೇನ್, ಹರ್ಷಿತ್ ರಾಣಾ ಮತ್ತು ಉಮ್ರಾನ್ ಮಲಿಕ್ ಅವರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ.

ಕಳೆದ ರಣಜಿ ಋತುವಿನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್, ಕನ್ನಡಿಗ ಮಯಂಕ್ ಅಗರವಾಲ್ ಅವರಿಗೆ ಟೆಸ್ಟ್ ತಂಡದ ಬುಲಾವ್ ಬರುವ ನಿರೀಕ್ಷೆ ಇದೆ.