ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಾನ್-ಸ್ಟ್ರೈಕರ್ಸ್ ಎಂಡ್‌ನಲ್ಲಿ ಜಿತೇಶ್ ರನೌಟ್‌ ಮೇಲ್ಮನವಿಯಿಂದ ಪಾರಾಗಲು ಕಾರಣವೇನು?

jitesh sharma run out: ಬೌಲರ್‌ ಒಬ್ಬ ಚೆಂಡನ್ನು ಬ್ಯಾಟ್ಸ್‌ ಮನ್‌ ನತ್ತ ಎಸೆಯುವ ಮೊದಲೇ ನಾನ್‌ ಸ್ಟ್ರೈಕ್‌ ನಲ್ಲಿರುವ ಬ್ಯಾಟ್ಸ್‌ ಮನ್‌ ಕ್ರೀಸ್‌ ಬಿಟ್ಟಿದ್ದರೆ ಆಗ ಬೌಲರ್‌ ಆತನನ್ನು ರನೌಟ್‌ ಮಾಡುವ ಅವಕಾಶವನ್ನು ಕ್ರಿಕೆಟ್‌ ಕಾನೂನಿನ 41.46 ನಿಯಮ ನೀಡುತ್ತದೆ. ಈ ಹಿಂದೆ ಇದನ್ನು ಮಂಕಡ್ ಔಟ್‌ ಎಂದು ಹೇಳಲಾಗುತ್ತಿತ್ತು. ಆದರೆ 2022ರಲ್ಲಿ ಐಸಿಸಿ ಕೆಲವು ಕ್ರಿಕೆಟ್‌ ನಿಯಮಗಳ ಬದಲಾವಣೆ ವೇಳೆ ಇದನ್ನು ರನೌಟ್‌ ಎಂದು ಪರಿಗಣಿಸಿತ್ತು.

ಜಿತೇಶ್ ಶರ್ಮ ರನೌಟ್‌ ಮೇಲ್ಮನವಿಯಿಂದ ಪಾರಾಗಲು ಕಾರಣವೇನು?

Profile Abhilash BC May 28, 2025 10:15 AM

ಲಕ್ನೋ: ಮಂಗಳವಾರ ನಡೆದಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(LSG vs RCB) ನಡುವಿನ ಐಪಿಎಲ್‌(IPL 2025) ಕೊನೆಯ ಲೀಗ್‌ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್‌ ಜಿತೇಶ್‌ ಶರ್ಮ(Jitesh Sharma) ಅವರನ್ನು ನಾನ್-ಸ್ಟ್ರೈಕರ್ಸ್ ಎಂಡ್‌ನಲ್ಲಿ ದಿಗ್ವೇಶ್ ರಾಥಿ(Digvesh Rathi) ರನೌಟ್‌ ಮಾಡಿದ್ದರು. ಆದರೆ ಮೂರನೆ ಅಂಪೈರ್‌ ನಾಟೌಟ್‌ ನೀಡಿದ ಕಾರಣ ಜಿತೇಶ್‌ ಬ್ಯಾಟಿಂಗ್‌ ಮುಂದುವರಿಸಿದರು. ರಾಥಿ ರನೌಟ್‌ ಮಾಡಿದ ವೇಳೆ ರಿಷಭ್‌ ಪಂತ್‌ ಕ್ರೀಡಾಸ್ಫೂರ್ತಿ ತೋರುವ ಮೂಲಕ ಔಟ್‌ ಮನವಿಯನ್ನು ಹಿಂಪಡೆದಿದ್ದರು. ಅಸಲಿಗೆ ಇಲ್ಲಿ ಜಿತೇಶ್‌ ಶರ್ಮ ಪಾರಾದದ್ದು ಪಂತ್‌ ಔಟ್‌ ಮನವಿ ಹಿಂಪಡೆದ ಕಾರಣವಲ್ಲ. ಬದಲಾಗಿ ಐಪಿಎಲ್‌ ನಿಯಮದ ಪ್ರಕಾರ.

ಬೌಲರ್‌ ಒಬ್ಬ ಚೆಂಡನ್ನು ಬ್ಯಾಟ್ಸ್‌ ಮನ್‌ ನತ್ತ ಎಸೆಯುವ ಮೊದಲೇ ನಾನ್‌ ಸ್ಟ್ರೈಕ್‌ ನಲ್ಲಿರುವ ಬ್ಯಾಟ್ಸ್‌ ಮನ್‌ ಕ್ರೀಸ್‌ ಬಿಟ್ಟಿದ್ದರೆ ಆಗ ಬೌಲರ್‌ ಆತನನ್ನು ರನೌಟ್‌ ಮಾಡುವ ಅವಕಾಶವನ್ನು ಕ್ರಿಕೆಟ್‌ ಕಾನೂನಿನ 41.46 ನಿಯಮ ನೀಡುತ್ತದೆ. ಈ ಹಿಂದೆ ಇದನ್ನು ಮಂಕಡ್ ಔಟ್‌ ಎಂದು ಹೇಳಲಾಗುತ್ತಿತ್ತು. ಆದರೆ 2022ರಲ್ಲಿ ಐಸಿಸಿ ಕೆಲವು ಕ್ರಿಕೆಟ್‌ ನಿಯಮಗಳ ಬದಲಾವಣೆ ವೇಳೆ ಇದನ್ನು ರನೌಟ್‌ ಎಂದು ಪರಿಗಣಿಸಿತ್ತು.

ಜಿತೇಶ್‌ ಪಾರಾದದ್ದು ಹೇಗೆ?

ದಿಗ್ವೇಶ್ ರಾಥಿ 17 ನೇ ಓವರ್‌ನ ಐದನೇ ಎಸೆತವನ್ನು ಎಸೆಯಲು ಹೊರಟಿದ್ದಾಗ ಆರ್‌ಸಿಬಿ ಗೆಲುವಿಗೆ 20 ಎಸೆತಗಳಲ್ಲಿ 29 ರನ್‌ ಬೇಕಿತ್ತು. ಮಯಾಂಕ್‌ ಅಗರ್ವಾಲ್‌ ಕ್ರೀಸ್‌ನಲ್ಲಿದ್ದರು. ಜಿತೇಶ್‌ ನಾನ್-ಸ್ಟ್ರೈಕರ್ಸ್ ಎಂಡ್‌ನಲ್ಲಿದ್ದರು. ಬೌಲಿಂಗ್‌ ನಡೆಸಲು ಮುಂದಾದ ರಾಥಿ, ಜಿತೇಶ್‌ ಕ್ರೀಸ್‌ ಬಿಟ್ಟದ್ದನ್ನು ಕಂಡು ವಿಕೆಟ್‌ ಬೇಲ್ಸ್‌ ಹಾರಿಸಿ ರನೌಟ್‌ಗೆ ಮನವಿ ಮಾಡಿದರು. ಫೀಲ್ಡ್‌ ಅಂಪೈರ್‌ ತೀರ್ಪು ನೀಡಲು ಮೂರನೆ ಅಂಪೈರ್‌ ಮೊರೆ ಹೋದರು. ಟಿವಿ ಅಂಪೈರ್‌ ವಿವಿಧ ಕೋನಗಳಿಂದ ವೀಕ್ಷಿಸಿದ ನಂತರ, ದಿಗ್ವೇಶ್ ರನ್ ಔಟ್ ಮಾಡಲು ಪ್ರಯತ್ನಿಸುವ ಮೊದಲು ತನ್ನ ಎಸೆತವನ್ನು ಪೂರ್ಣಗೊಳಿಸಿದ್ದಾರೆಂದು ಪರಿಗಣಿಸಲಾಗಿದ್ದರಿಂದ ಜಿತೇಶ್ ಅವರನ್ನು ನಾಟ್ ಔಟ್ ಎಂದು ಘೋಷಿಸಲಾಯಿತು.

ಐಪಿಎಲ್‌ ನಿಯಮ ಹೇಗಿದೆ?

ಐಪಿಎಲ್ ಆಟದ ನಿಯಮ 38.3.1 ರ ಪ್ರಕಾರ, ಬೌಲರ್‌ ಕೈಯಿಂದ ಚೆಂಡು ಹೊರಬೀಳುವ ತನಕ ನಾನ್‌ ಸ್ಟ್ರೈಕರ್‌ ತನ್ನ ಕ್ರೀಸ್‌ ಅನ್ನು ಬಿಡಬಾರದೆಂದು ಕ್ರಿಕೆಟ್‌ ನಿಯಮದಲ್ಲಿದೆ. ಕ್ರೀಸ್‌ ಬಿಟ್ಟರೆ ಬ್ಯಾಟರನ್ನು ರನೌಟ್‌ ಮಾಡುವ ಅವಕಾಶ ಬೌಲರ್‌ಗೆ ಇದೆ. ಆದರೆ ದಿಗ್ವೇಶ್ ರಾಥಿ ತನ್ನ ಮುಂದಿನ ಪಾದವನ್ನು ಕ್ರೀಸ್​ ಮೇಲಿಟ್ಟು ಬೌಲಿಂಗ್ ಆ್ಯಕ್ಷನ್ ತೋರಿಸಿ, ಆ ಬಳಿಕ ಹಿಂತಿರುಗಿ ರನೌಟ್ ಮಾಡಿದ್ದರು. ಹೀಗಾಗಿಯೇ ಮೂರನೇ ಅಂಪೈರ್ ಅದನ್ನು ನಾಟೌಟ್ ಎಂದು ಪರಿಗಣಿಸಿದರು.