ಕೊಲ್ಹಾರ: ಪಟ್ಟಣದ ಆರಾಧ್ಯ ದೈವ ಉಪ್ಪಾಸೆಪ್ಪ ದೇವರ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹೋಮ, ಹವನ, ರುದ್ರಾಭಿ ಷೇಕ, ಪೂರ್ಣಕುಂಭ ಮೆರವಣಿಗೆ, ಆರತಿ ಸೇವೆ ಹಾಗೂ ಡಾ.ಹಣಮಂತ ಮಳಲಿ ಇವರಿಂದ “ಆಹಾರ ದಲ್ಲಿ ಔಷದ” ಉಪನ್ಯಾಸ ಕಾರ್ಯಕ್ರಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಉಪ್ಪಾಸೆಪ್ಪ ದೇವಸ್ಥಾನ ಕಮಿಟಿ ಪದಾಧಿಕಾ ರಿಗಳು ಹೇಳಿದರು.
ಪಟ್ಟಣದ ಉಪ್ಪಾಸೆಪ್ಪ ದೇವರ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ಹಮ್ಮಿ ಕೊಂಡು ಮಾತನಾಡಿದ ಅವರು ಫೆಬ್ರವರಿ 18 ಹಾಗೂ 19 ರಂದು ವಿಜೃಂಭಣೆ ಯಿಂದ ಕಾರ್ಯಕ್ರಮಗಳು ಜರುಗಲಿವೆ.
ಫೆಬ್ರವರಿ 18 ರಂದು ಪಟ್ಟಣದ ದಿಗಂಬರೇಶ್ವರ ಮಠದಿಂದ ಪೂರ್ಣಕುಂಭ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಪ್ಪಾಸೆಪ್ಪ ದೇವರ ದೇವಸ್ಥಾನಕ್ಕೆ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಫೆ.19 ರಂದು ಮುಂಜಾನೆ 6 ಗಂಟೆಗೆ ಹೋಮ, ಹವನ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉಪ್ಪಾಸೆಪ್ಪ ದೇವರ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಗರದಿನ್ನಿ ಗ್ರಾಮದ ಸದಾಶಿವ ಶಿವಯೋಗಾ ಶ್ರಮದ ತಪೋನಿಷ್ಠ ಸದ್ಗುರು ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಸಹಿತ ಅನೇಕ ಮಠಾಧೀಶರು ಧಾರ್ಮಿಕ ಮುಖಂಡರು ಉಪಸ್ಥಿತರಿರುವರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಫ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ, ಬನಪ್ಪ ಬಾಲಗೊಂಡ, ಮಹೇಶ್ ಗಿಡ್ಡಪ್ಪಗೋಳ, ಯಲ್ಲಪ್ಪ ಪೂಜಾರಿ, ಕೆ.ಎಸ್ ಬಾಲಗೊಂಡ, ನಂದಪ್ಪ ಬಾಲಗೊಂಡ, ನಿತೀನ್ ಗಣಿ, ಶ್ರೀಶೈಲ ಕುಂಬಾರ, ಸಂಗಪ್ಫ ಗಿಡ್ಡಪ್ಪಗೋಳ ಸಹಿತ ಅನೇಕರು ಉಪಸ್ಥಿತರಿದ್ದರು.