Thursday, 19th September 2024

ಆರೋಗ್ಯ, ಶಿಕ್ಷಣ ಸಾರ್ವತ್ರಿಕವಾಗಲಿ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ -48

ಕ್ಲಬ್‌ಹೌಸ್ ಸಂವಾದ ಕಾರ್ಯಕ್ರಮದಲ್ಲಿ 5 ರು. ಡಾಕ್ಟರ್ ಖ್ಯಾತಿಯ ಶಂಕರೇಗೌಡ ಆಶಯ

ಬೆಂಗಳೂರು: ಆರೋಗ್ಯ ಮತ್ತು ಶಿಕ್ಷಣವನ್ನು ಸರಕಾರದ ಕಡೆಯಿಂದಲೇ ನೀಡುವ ವ್ಯವಸ್ಥೆ ರೂಪುಗೊಳ್ಳಬೇಕು. ಇದು ಸರಕಾರಗಳ ಪಾಲಿಸಿ ವಿಷಯ. ಇಂತಹ ವ್ಯವಸ್ಥೆಯನ್ನು ಸರಕಾರಗಳು ಕಲ್ಪಿಸಿದಾಗ ಬಡವರಿಗೆ ಇವೆರಡು ಸೌಲಭ್ಯಗಳು ಸುಲಭದಲ್ಲಿ ದೊರೆಯುತ್ತವೆ. ಆಗ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದು 5 ರು. ಡಾಕ್ಟರ್ ಖ್ಯಾತಿಯ ಮಂಡ್ಯದ ಡಾ.ಶಂಕರೇಗೌಡ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅವರು, ತಮ್ಮ ಅನುಭವ ಮತ್ತು ಆಶಯಗಳನ್ನು ವ್ಯಕ್ತಪಡಿಸಿದರು. ನಾನು 5 ರು.ಗೆ ಚಿಕಿತ್ಸೆ ನೀಡಲು ಆರಂಭಿಸಿದಾಗ ನನ್ನಂತೆಯೇ ಸೇವೆ ಮಾಡುವವರು ಬಹಳ ಜನ ಇದ್ದರು. ಆದರೆ ಇಂದಿನ ದಿನಗಳಲ್ಲಿ ವೈದ್ಯಕೀಯ ಸೇವೆ ಎಂಬುದು ಬಹಳ ದುಬಾರಿ ಯಾಗಿದೆ. ಬಡವರು ವೈದ್ಯಕೀಯ ಸೇವೆ ಪಡೆಯುವುದು ಬಹಳ ಕಷ್ಟವಾಗಿದೆ. ಆದ್ದರಿಂದ ನಾನು ಇಂದಿಗೂ 5 ರು. ಶುಲ್ಕದಲ್ಲಿಯೇ ಸೇವೆ ಮುಂದು ವರಿಸಿದ್ದೇನೆ ಎಂದರು.

ಈಗ ವೈದ್ಯಕೀಯ ಪದವಿ ಪಡೆಯುವಾಗಲೇ ಲಕ್ಷಾಂತರ ರು. ಖರ್ಚು ಮಾಡುತ್ತಾರೆ. ವೈದ್ಯರಾದ ನಂತರ ಅದನ್ನು ವಾಪಸ್ ಪಡೆಯುವ ಬಗ್ಗೆ ಯೋಚನೆ ಮಾಡುತ್ತಾರೆ. ಹೀಗಾಗಿ, ಅವರಿಗೆ ಜನಸೇವೆ ಮಾಡಬೇಕು ಎಂಬ ಆಶಯ ಬರುವುದೇ ಇಲ್ಲ. ಇಂತಹ ವ್ಯವಸ್ಥೆಯ ವೈದ್ಯಕೀಯ ಶಿಕ್ಷಣ ನೀಡುವ ಪದ್ಧತಿಯನ್ನು ಬದಲಾಯಿಸಿ, ಜನರಿಗೆ ಚಿಕಿತ್ಸೆ ಉಚಿತವಾಗಿ ಸಿಗುವಂತೆ ಮಾಡುವಲ್ಲಿ ಸರಕಾರಗಳು ಶ್ರಮಿಸಬೇಕಿದೆ. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು. ನನ್ನ ವೈದ್ಯಕೀಯ ವೃತ್ತಿಗೆ 40 ವರ್ಷ ಆದ ಮೇಲೆ ಬೇರೆಯವರು ಬಂದು ನನ್ನನ್ನು ಓವರ್ ಟೇಕ್ ಮಾಡುತ್ತಾರೆ ಎಂದು ಕೊಂಡಿದ್ದೆ.

ಯುವಕರು ಬರುತ್ತಿದ್ದಂತೆ ಅನೇಕ ರಂಗ ಗಳಲ್ಲಿ ಹಿರಿಯರನ್ನು ಕೇಳುವವರೇ ಇಲ್ಲದಂತಾಗುತ್ತಾರೆ. ಈ ವಿಷಯ ನನಗೆ ಗೊತ್ತಿತ್ತು. ಹೀಗಾಗಿ, ನಂತರ ನಾನು ಊರಿನಲ್ಲಿ ಜಮೀ ನು ನೋಡಿಕೊಂಡು ಇರಬೇಕು ಎಂದು ತೀರ್ಮಾನ ಮಾಡಿದ್ದೆ. ಆದರೆ, ಈಗಲೂ ನನ್ನ ಬಳಿಗೆ ಮೊದಲು ಬರುತ್ತಿದ್ದಷ್ಟೇ ಜನರು ಬರುತ್ತಾರೆ. ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಿಗೆ ಜನರು ಬರುತ್ತಾರೆ. ಜನ ಬಹಳ ಪ್ರೀತಿ ತೋರಿ ಸುತ್ತಾರೆ. ನನ್ನ ಮೇಲೆ ನಂಬಿಕೆಯನ್ನಿಟ್ಟು ಔಷಧ ಪಡೆಯುತ್ತಾರೆ. ಅವರಿಗೆ ಗುಣವಾಗುತ್ತದೆ. ಇದರಿಂದ ನನಗೂ ಸಂತಸವಾಗುತ್ತದೆ ಎಂದರು.

5 ರು. ಫೀಸ್ ಹಿಂದಿನ ರೋಚಕ ಕತೆ

ತಾವು ೫ ರು. ಫೀಸ್ ಪಡೆದು ರೋಗಿಗಳನ್ನು ಆರೈಕೆ ಮಾಡುವ ಕುರಿತು ಹೇಳಿಕೊಂಡ ಶಂಕರೇಗೌಡರು, ಒಬ್ಬ ವ್ಯಕ್ತಿ ತನಗೆ ಆಗಿದ್ದ ಸಮಸ್ಯೆಯೊಂದಕ್ಕೆ ಚಿಕಿತ್ಸೆಗೆ
ಬರುತ್ತಿದ್ದ. ಆತ ಮಾತ್ರೆಗಳಿಗೆ ಸಾವಿರಾರು ರು. ಖರ್ಚು ಮಡಿದ್ದ. ಕೊನೆಗೆ ತನ್ನ ಮಾತ್ರೆ ಮತ್ತು ಔಷಧ ಹಾಗೂ ಆಸ್ಪತ್ರೆ ಖರ್ಚಿಗಾಗಿಯೇ ತನ್ನ ಜಮೀನು ಮಾರಿಕೊಂಡಿರುವ ಬಗ್ಗೆ ನನ್ನ ಬಳಿ ಹೇಳಿಕೊಂಡ. ಆಗಿನಿಂದ ನಾನು ಬಡವರಿಗೆ ವೈದ್ಯಕೀಯ ನೆರವು ನೀಡಬೇಕು ಎಂದು ತೀರ್ಮಾನಿಸಿದೆ. ನನ್ನ ಕ್ಲಿನಿಕ್‌ನಲ್ಲಿ ೫ ರು. ಗೆ ಚಿಕಿತ್ಸೆ ನೀಡುತ್ತಿದ್ದು, ಇಂದಿನವರೆಗೂ ಅದನ್ನೇ ಮುಂದುವರಿಸಿದ್ದೇನೆ. ಮುಂದೆಯೂ ನನಗೆ ಸಾಧ್ಯವಾದಷ್ಟು ದಿನ ಸೇವೆ ಮಾಡುತ್ತೇನೆ ಎಂದರು.

ಪದ್ಮಶ್ರೀ ಅಭಿಯಾನ
5 ರು. ನಲ್ಲಿ ಬಡವರಿಗೆ ಆರೋಗ್ಯ ಸೇವೆ ನೀಡುವ ಡಾ.ಶಂಕರೇಗೌಡ ಅವರಿಗೆ ಪದ್ಮಶ್ರೀ ನೀಡಬೇಕು ಎಂಬ ಕೂಗು ಕ್ಲಬ್‌ಹೌಸ್‌ನಲ್ಲಿಯೂ ಕೇಳಿಬಂತು. ಕಾರ್ಯ ಕ್ರಮದಲ್ಲಿ ಮಾತನಾಡಿದ ಅನೇಕರು ಈ ವಿಷಯ ಪ್ರಸ್ತಾಪ ಮಾಡಿದರು. ಈ ಬಗ್ಗೆ ಮಾತನಾಡಿದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು, ಈ ಬಗ್ಗೆ ನನ್ನ ಮೊಬೈಲ್‌ಗೆ ಸುಮಾರು ೧೦೦ಕ್ಕೂ ಹೆಚ್ಚು ಜನರು ಸಂದೇಶ ಕಳುಹಿಸಿದ್ದಾರೆ. ನಾವು ಪತ್ರಿಕೆ ಮೂಲಕ ಅವರಿಗೆ ಪದ್ಮಶ್ರೀ ನೀಡುವ ಕುರಿತು ಅಭಿಯಾನ ನಡೆಸಲು ತೀರ್ಮಾನಿಸಿದ್ದೇವೆ.

ಈಗ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುವ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ನೀಡಿದ್ದು, ಹೆಚ್ಚು ಜನರು ಈ ಪರವಾಗಿ ಶಿಫಾರಸು ಮಾಡಬಹುದು. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಯಾನ ಆರಂಭವಾಗಿದ್ದು, ಇದಕ್ಕೆ ವಿಶ್ವವಾಣಿಯೂ ಕೈಜೋಡಿಸಲಿದೆ ಎಂದು
ಘೊಷಣೆ ಮಾಡಿದರು.

ಶಂಕರೇಗೌಡರು ನೀಡಿದ ನುಡಿ ಗುಳಿಗೆ

? ವೈದ್ಯಕೀಯ ವ್ಯವಸ್ಥೆ ದುಬಾರಿಯಾಗಲು ಸರಕಾರದ ಪಾಲಿಸಿ ವೈಫಲ್ಯ ಕಾರಣ
? ಗ್ರಾಮಾಂತರ ಭಾಗದಲ್ಲಿ ಸೇವೆ ಮಾಡಲು ಡಾಕ್ಟರ್‌ಗಳು ಮುಂದಾಗಬೇಕು
? ಸೇವಾ ಮನೋಭಾವನೆ ಇದ್ದರೆ ಎಲ್ಲಿ ಬೇಕಾದರೂ ಸೇವೆ ಮಾಡಬಹುದು
? ನನ್ನೂರಿಂದಲೇ ಸೇವೆ ಆರಂಭಿಸಬೇಕೆಂಬ ಅಭಿಲಾಷೆ ನನ್ನದಾಗಿತು

Leave a Reply

Your email address will not be published. Required fields are marked *