Saturday, 26th October 2024

ಸಿಬ್ಬಂದಿ ಎತ್ತಂಗಡಿಗೆ ವಿಶೇಷ ತಂಡ ರಚನೆಗೆ ಶಿಕ್ಷಣ ಸಚಿವರಿಗೆ ಸೂಚನೆ: ವೈ.ಎ.ನಾರಾಯಣ ಸ್ವಾಮಿ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ

ಪಾವಗಡ: ಆಗ್ನೇಯ ಶಿಕ್ಷಕರ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣ ಸ್ವಾಮಿರವರು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಸಭೆ ನಡೆಸಿ ಮಾತನಾಡಿದರು.

ತದ ನಂತರ ಶಿಕ್ಷಕರ ಸಮಸ್ಯೆಗಳ ಬಗ್ಗೆ ನೇರವಾಗಿ ಶಿಕ್ಷಕರಿಂದ ಮಾಹಿತಿ ಪಡೆದು, ಪಾವಗಡ ತಾಲೂಕಿಗೆ ತಿಂಗಳಿಗೊಮ್ಮೆ ಭೇಟಿ ನೀಡುತ್ತಿದ್ದೇನೆ. ನನ್ನ ಅನುದಾನದಲ್ಲಿ ಬಹಳಷ್ಟು ಶಾಲೆಗಳಿಗೆ ನೀಡುವ ಮೂಲಕ ಸಮಸ್ಯೆಗಳು ಇರುವ ಶಾಲೆಗಳಿಗೆ ಸ್ಪಂದಿಸು ತ್ತಿದ್ದೇನೆ ಎಂದರು.

ಸಭೆಯಲ್ಲಿ ಈ ಭಾಗದ ಶಿಕ್ಷಕರು ತಮ್ಮ ಸಮಸ್ಯೆಗಳಾದ ವೇತನ ಸಮಸ್ಯೆ ಹಾಗೂ ಇಲ್ಲಿನ ಶಿಕ್ಷಕರ ಸಮಸ್ಯೆಗಳನ್ನು ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಚೇರಿಗೆ ತೆಗೆದುಕೊಂಡು ಹೋದರೆ ಲಂಚ ಇಲ್ಲದೆ ಯಾವುದೇ ಕೇಲಸ ಇಲ್ಲಿ ನಡೆಯುವುದಿಲ್ಲ ಎಂದು ದೂರು ನೀಡಿ ದರು. ಶಿಕ್ಷಣ ಇಲಾಖೆಯ ಕೆಲವೊಂದು ಕೆಲಸಗಳು ತಡವಾಗಲು ಕಾರಣ ಕೋವಿಡ್ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದೆ ಎಂದರು.

ಈ ಭಾಗದಲ್ಲಿ. ಬೇಸಿಗೆ ಬಿಸಿಲು ತಾಪಮಾನ ಹೆಚ್ಚಾಗಿರುವ ಕಾರಣ ಎಸ್.ಎಸ್.ಎಲ್.ಸಿ.ಪಿಯುಸಿ ತರಗತಿಗಳು ಬೆಳಿಗ್ಗೆ 8-30 ರಿಂದ 12-30 ಮಾಡಲು ಸರ್ಕಾರದ ವ್ಯಾಪ್ತಿಯಲ್ಲಿ ಪ್ರಸ್ತಾಪ ತನ್ನಿ. ಸರ್ಕಾರ ಎಸ್.ಎಸ್.ಎಲ್.ಸಿ.ಮಕ್ಕಳ ಹಾಜರಾತಿ ಪರೀಕ್ಷೆಗೆ ಕಡ್ಡಾಯ ವಲ್ಲ ಎಂದಿರುವ ಕಾರಣ ಶಾಲೆಗಳಿಗೆ ಮಕ್ಕಳ ಹಾಜರಾತಿ ಕ್ಷೀಣಿಸಿದೆ ಎಂದರು.

ಸ್ವತಃ ಸೋಲಾರ್ ಘಟಕಗಳು ಈ ಭಾಗದ ತಾಲ್ಲೂಕನ್ನು ದತ್ತು ತೆಗೆದುಕೊಳ್ಳ ಬೇಕಾಗಿತ್ತು. ಇದು ನಿಮ್ಮ ಹಣ ಯಾವುದೇ ಕಾರಣಕ್ಕೂ ಟೋಪಿ ಹಾಕಲು ಬಿಡುವುದಿಲ್ಲ. ತಕ್ಷಣವೇ ಈ ಭಾಗದ ಉಸ್ತುವಾರಿ ಸಚಿವರಿಗೆ ಪತ್ರ ಬರೆಯುತ್ತಿದ್ದೇನೆ ಎಂದರು.

ಕೋವಿಡ್ ಪ್ರಕರಣ ಗಳಿಂದ ವಿದ್ಯಾರ್ಥಿಗಳ ಪೋಷಕರು ಮೃತಪಟ್ಟಿದ್ದರೆ, ಅಂತಹ ಮಕ್ಕಳಿಗೆ ಶಾಲೆಯ ಶುಲ್ಕ ರದ್ದುಗೊಳಿಸು ವುದು ಉತ್ತಮವಾದದ್ದು ಇದರ ಬಗ್ಗೆ ಸಚಿವರ ಬಳಿ ಮಾತನಾಡುತ್ತೇನೆ ಎಂದರು.

ಈ ವೇಳೆ ಮಂಡಲ ಅಧ್ಯಕ್ಷ ರವಿಶಂಕರ್ ನಾಯ್ಕ್, ಜಿಲ್ಲಾ ಉಪಾಧ್ಯಕ್ಷ ರವಿ, ಮುಖಂಡ ಡಾ.ವೆಂಕಟರಾಮಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿಗಳು ಅಶೋಕ್, ಎ.ಎನ್.ಲೋಕೇಶ್ ರಾವ್, ವೇಣುಗೋಪಾಲ ರೆಡ್ಡಿ, ಕೃಷ್ಣ ಮೂರ್ತಿ, ಮಂಡಲ ಕಾರ್ಯದರ್ಶಿ ಶೇಖರ್ ಬಾಬು, ನಗರ ಅಧ್ಯಕ್ಷರು ಮಂಜು ಹಾಗೂ ವಿವಿಧ ಮೋರ್ಚಾ ಪದಾಧಿಕಾರಿಗಳು ಹಾಗೂ ಶಿಕ್ಷಕರುಗಳಾದ ಆಶೋಕ್.ಕೃಷ್ಣಪ್ಪ. ವೆಂಕಟೇಶ. ತಿಮ್ಮಬೋವಿ, ಇತರೆ ಶಿಕ್ಷಕರು ಉಪಸ್ಥಿತ ರಿದ್ದರು.