Tuesday, 23rd April 2024

ಉಪ್ಪಾಸೆಪ್ಪ ದೇವರ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ

ಕೊಲ್ಹಾರ:  ಪಟ್ಟಣದ ಆರಾಧ್ಯ ದೈವ ಉಪ್ಪಾಸೆಪ್ಪ ದೇವರ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಕ್ರಮ ಅತ್ಯಂತ ವಿಜೃಂಭಣೆಯಿಂದ ಸೋಮವಾರ ಜರುಗುಗಿತು.

ಮುಂಜಾನೆ 6 ಗಂಟೆಗೆ ಉಪ್ಪಾಸೆಪ್ಪ ದೇವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಹೋಮ, ಹವನ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವು ದರೊಂದಿಗೆ ಮಮದಾಪೂರ ಗ್ರಾಮದ ಭಕ್ತರು ನೀಡಿದ ಉಪ್ಪಾಸೆಪ್ಪ ದೇವರ ಬೆಳ್ಳಿ ಮೂರ್ತಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪನೆ ಮಾಡಲಾಯಿತು.

ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರರು ರುದ್ರಾಭಿಷೇಕ, ಹೋಮ, ಹವನ ಉಪ್ಪಾಸೆಪ್ಪ ದೇವರ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ದರು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಹಿರಿಯರಾದ ಸಿದ್ದಪ್ಪ ಬಾಲಗೊಂಡ, ಬನಪ್ಪ ಬಾಲಗೊಂಡ, ಮಹೇಶ್ ಗಿಡ್ಡಪ್ಪಗೋಳ,‌ ಯಲ್ಲಪ್ಪ ಪೂಜಾರಿ, ಕೆ.ಎಸ್ ಬಾಲಗೊಂಡ, ನಂದಪ್ಪ ಬಾಲಗೊಂಡ ಸಹಿತ ದೇವಸ್ಥಾನ ಕಮಿಟಿ ಪದಾಧಿಕಾರಿಗಳು, ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!