ಬೆಂಗಳೂರು: ಬೈಕ್-ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ, ಮೂವರು ಸ್ಥಳದಲ್ಲೇ ದುರ್ಮರಣ (Road Accident) ಹೊಂದಿದ ಘಟನೆ ನಗರದ ಹೊರವಲಯದ ಚಿಕ್ಕಜಾಲ ಮೇಲ್ಸೇತುವೆ ಬಳಿಯ ಏರ್ಪೋರ್ಟ್ ರಸ್ತೆಯಲ್ಲಿ ನಡೆದಿದೆ. ಸ್ನೇಹಿತರೊಬ್ಬರ ಹುಟ್ಟು ಹಬ್ಬದ ಪಾರ್ಟಿ ಮುಗಿಸಿ ವಿದ್ಯಾರ್ಥಿಗಳು ವಾಪಸ್ ಆಗುತ್ತಿದ್ದಾಗ ಅಪಘಾತ ನಡೆದಿದೆ.
ಬೆಂಗಳೂರಿನ ಏರ್ಪೋರ್ಟ್ ರಸ್ತೆಯ ಚಿಕ್ಕಜಾಲ ಬಳಿಯಲ್ಲಿ ಶನಿವಾರ ತಡರಾತ್ರಿ ಅಪಘಾತ ನಡೆದಿದೆ. ಬಿಎಸ್ಸಿ ವಿದ್ಯಾರ್ಥಿಗಳಾದ ಸುಚಿತ್ (22), ಹರ್ಷವರ್ಧನ್ (21) ಹಾಗೂ ರೋಹಿತ್ (21) ಮೃತರು. ಇವರು ಜಿಕೆವಿಕೆಯಲ್ಲಿ ತೋಟಗಾರಿಕೆ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ. ಮೂವರು ಸ್ನೇಹಿತರು ಬೈಕ್ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ.
ಈ ಸುದ್ದಿಯನ್ನೂ ಓದಿ | Physical Abuse: ಗೊರಕೆ ಹೊಡೆಯುತ್ತಾಳೆ ಎಂದು ಮಗಳ ಖಾಸಗಿ ಅಂಗಕ್ಕೆ ಕಾದ ಕಬ್ಬಿಣವಿಟ್ಟ ಮಲತಾಯಿ…
ಗಣೇಶ ಮೂರ್ತಿ ವಿಸರ್ಜನೆಗೆ ಕೆರೆಗೆ ಇಳಿದಿದ್ದ ತಂದೆ-ಮಗ ಸೇರಿ ಮೂವರು ನೀರುಪಾಲು
ತುಮಕೂರು: ಗಣೇಶ ಮೂರ್ತಿ ವಿಸರ್ಜನೆಗೆಂದು ಕೆರೆಗೆ ಹೋಗಿದ್ದ ತಂದೆ-ಮಗ ಸೇರಿ ಮೂವರು ನೀರುಪಾಲಾಗಿರುವ ಘಟನೆ ತುಮಕೂರು ಜಿಲ್ಲೆಯ (Tumkur News) ತುರುವೇಕೆರೆ ತಾಲೂಕಿನ ಮಾರಸಂದ್ರ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ಭಾನುವಾರ ನಡೆದಿದೆ.
ರೇವಣ್ಣ(46), ಶರತ್ ಹಾಗೂ ದಯಾನಂದ ಮೃತರು. ದಂಡಿನ ಶಿವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚಿಕ್ಕಮಗಳೂರಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಓಡಾಡಿದ ಅನ್ಯ ಕೋಮಿನ ಯುವಕರು!
ಚಿಕ್ಕಮಗಳೂರು: ಕುಣಿಗಲ್ನಲ್ಲಿ ಪ್ಯಾಲೆಸ್ತೀನ್ ಧ್ವಜ (Palestine flag) ಹಾರಿಸಲು ಯುವಕರು ಯತ್ನಿಸಿದ ಘಟನೆ ನಡೆದ ಬೆನ್ನಲ್ಲೇ ಇದೀಗ ನಗರದಲ್ಲೂ ಪ್ಯಾಲಿಸ್ತೀನ್ ಧ್ವಜ ಹಿಡಿದು ಬೈಕ್ನಲ್ಲಿ ರೌಂಡ್ಸ್ ಹೊಡೆದಿರುವುದು ಕಂಡುಬಂದಿದೆ. ಈದ್ ಮಿಲಾದ್ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿ ಚಿಕ್ಕಮಗಳೂರಿನ ಪ್ರಮುಖ ರಸ್ತೆಗಳಲ್ಲಿ ಅನ್ಯ ಕೋಮಿನ ಯುವಕರು, ಪ್ಯಾಲಿಸ್ತೀನ್ ಧ್ವಜ ಹಿಡಿದು ಬೈಕ್ನಲ್ಲಿ ಓಡಾಡಿದ್ದಾರೆ. ಇದಕ್ಕೆ ಹಿಂದುಪರ ಸಂಘಟನೆಗಳು ಅಕ್ರೋಶ ಹೊರಹಾಕಿವೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ನೂರಾರು ಹಿಂದುಪರ ಕಾರ್ಯಕರ್ತರು ಚಿಕ್ಕಮಗಳೂರು ನಗರ ಠಾಣೆ ಎದುರು ಪ್ರತಿಭಟನೆ ನಡೆಸಿ, ಪ್ಯಾಲಿಸ್ತೀನ್ ಧ್ವಜ ಹಿಡಿದು ಬೈಕ್ನಲ್ಲಿ ರೌಂಡ್ಸ್ ಹೊಡೆದ ಯುವಕರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಕೂಡ ಕಂಡು ಬಂದಿದೆ.