Tuesday, 25th June 2024

ಎಸ್.ಸಿ ವಿಭಾಗದ ಪದಾಧಿಕಾರಿಗಳ ನೇಮಕ

ಇಂಡಿ: ಬ್ಲಾಕ್ ಕಾಂಗ್ರೆಸ್ ಕಮೀಟಿ ಇಂಡಿ ಎಸ್ಸಿ ವಿಭಾಗದ ವತಿಯಿಂದ ಪಟ್ಟಣದ ವಿಜಯಪೂರ ರಸ್ತೆಯಲ್ಲಿರುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಎಸ್.ಸಿ ವಿಭಾಗದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಈ ಸಂಧರ್ಬದಲ್ಲಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್ ಮಾತನಾಡಿ ಕಾಂಗ್ರೆಸ್ ಪಕ್ಷ ತನ್ನದೆಯಾದ ತತ್ವ ಸಿದ್ದಾಂತ ಹೊಂದಿದ್ದು ದೇಶದ ಸ್ವಾತಂತ್ರö್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಪಕ್ಷ . ಕಾಂಗ್ರೇಸ್ ಹಿಂದುಳಿದ ದಲಿತ ಅಲ್ಪಸಂಖ್ಯಾತರ ಸರ್ವಸಮುದಾಯವನ್ನು ಸಾಮಾಜಿಕ ನ್ಯಾಯದೇಡೆಗೆಸಾಗಿಸುವ ಮೂಲಕ ಮಾತೃ ಹೃದಯದ ಪಕ್ಷವಾಗಿದೆ. ಕರ್ನಾಟಕ ಸಿದ್ದರಾಮಯ್ಯನವರ ಸರಕಾರ ಒಳ್ಳೇಯ ಆಡಳಿತ ನೀಡಿ ಚುನಾವಣಾ ಪೂರ್ವ ೫ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಹೇಳಿದ ಭರವಸೆ ಬದ್ದತೆಯಿಂದ ಇಡೇರಿಸಿದೆ. ಈ ಕಾರ್ಯಕ್ರಮಗಳೆ ನಮ್ಮ ಗೆಲುವಿಗೆ ಶ್ರೀರಕ್ಷೆ ಪದಾಧಿಕಾರಿಗಳು ಪ್ರತಿ ಗ್ರಾಮ ಹೂಬಳ್ಳಿ ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ಮತ್ತಷ್ಟು ಶ್ರಮಿಸಬೇಕು ಎಂದರು.

ಖಾಜಪ್ಪ ಸಿಂಗೆ ಇವರಿಗೆ ಎಸ್ಸಿ ಕಾರ್ಯದರ್ಶಿಯಾಗಿ ನೇಮ ಆದೇಶ ನೀಡಿ ಗಡಿಗೇಪ್ಪ ಬರೂರ, ಅಶೀಲ ಎಂಟಮಾನ್, ರಾಜು ಬಾಣಿಕೋಲ, ದಾವಲಮಲಿಕ ದೇವರಮನಿ, ಕೃಷ್ಣಾ ಮಂದೋಲಿ ಎಸ್ಸಿ ಘಟಕದ ಪದಾಧಿಕಾರಿಗಳನ್ನಾಗಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್. ಎಸ್ಸಿ ಬ್ಲಾಕ ಕಮಿಟಿ ತಾಲೂಕಾ ಅಧ್ಯಕ್ಷ ಬಾಬು ಗುಡಮಿ ನೇಮ ಆದೇಶ ನೀಡಿದರು.

Leave a Reply

Your email address will not be published. Required fields are marked *

error: Content is protected !!