ನವದೆಹಲಿ: ದೆಹಲಿ ಆಮ್ ಆದ್ಮಿ ಪಕ್ಷದ ಕಾರ್ಪೊರೇಟರ್ ಪವನ್ ಸೆಹ್ರಾವತ್ ಅವರು ಶುಕ್ರವಾರ ಬಿಜೆಪಿ ಸೇರಿದ್ದಾರೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ)ನ ಸ್ಥಾಯಿ ಸಮಿತಿಯ ಆರು ಸದಸ್ಯ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಈ ಮಧ್ಯೆ ಪವನ್ ಸೆಹ್ರಾವತ್ ಪಕ್ಷ ತೊರೆ ದಿರುವುದು ಎಎಪಿಗೆ ಮುಜುಗರ ಸೃಷ್ಟಿ ಮಾಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯಲ್ಲಿ ಭ್ರಷ್ಟಾಚಾರ ದಿಂದಾಗಿ ಉಸಿರುಗಟ್ಟುವಿಕೆಯ ವಾತಾವರಣ ಸೃಷ್ಟಿಯಾಗಿದೆ ಎಂದು ಪವನ್ ಆರೋಪಿಸಿ ದ್ದಾರೆ. ‘ಎಂಸಿಡಿಯಲ್ಲಿ ಗದ್ದಲ ಸೃಷ್ಟಿಸಲು ಎಎಪಿ ಕೌನ್ಸಿಲರ್‌ಗಳಿಗೆ ಸೂಚನೆ […]