ದಾಸ್ ಕ್ಯಾಪಿಟಲ್ ಟಿ.ದೇವಿದಾಸ್, ಬರಹಗಾರ, ಶಿಕ್ಷಕ ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಲೇಸು – ಹೀಗೆಂದವರೂ ಅವರೇ. ಮತ್ತು ಹಾಗೆ ನುಡಿದಂತೆ ನಡೆದವರು ಅವರೇ. ಅವರೇ ನಮ್ಮ ವಿಶ್ವೇಶ್ವರಯ್ಯ. ಒಬ್ಬ ಮನುಷ್ಯ ತನ್ನ ಒಟ್ಟೂ ಜೀವಿತಾವಧಿಯಲ್ಲಿ ಸಾಧಿಸಬಹುದಾದ ಸಾಧನೆಗೆ ಜ್ವಲಂತ ನಿದರ್ಶನವಾಗೇ ಕೊನೆಯವರೆಗೂ ಇರುವವರು ವಿಶ್ವೇಶ್ವರಯ್ಯನಂಥವರು ಮಾತ್ರ! ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು, ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು […]