ಚಂಬ್ಲೀ (ಅಮೆರಿಕ): ಅಟ್ಲಾಂಟಾದ ಈಶಾನ್ಯ ಭಾಗದ ಉಪನಗರದಲ್ಲಿರುವ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಲಘು ವಿಮಾನ ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟಿದ್ದಾರೆ. ಸಿಂಗಲ್ ಎಂಜಿನ್ ಸೆಸ್ಸಾನಾ 210 ವಿಮಾನವು ಡೆಕಾಲ್ಬ್-ಪೀಚ್ ಟ್ರೀ ವಿಮಾನ ನಿಲ್ದಾಣದಲ್ಲಿ ಅಪಘಾತ ಕ್ಕೀಡಾಗಿ, ಬೆಂಕಿ ಹೊತ್ತಿಕೊಂಡಿತು. ವಿಮಾನದಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಕೌಂಟಿ ಒಡೆತನದ ವಿಮಾನ ನಿಲ್ದಾಣದ ರನ್‌ವೇನಲ್ಲಿ ಈ ವಿಮಾನ ಅಪಘಾತಕ್ಕೀಡಾಯಿತು. ತಕ್ಷಣ 15 ಮಂದಿ ಅಗ್ನಿಶಾಮಕ ಸಿಬ್ಬಂದಿ ರನ್ ವೇ ಕಡೆಗೆ ಓಡಿ, ತ್ವರಿತಗತಿಯಲ್ಲಿ ಬೆಂಕಿ ನಂದಿಸಿದರು. ಅಪಘಾತದಲ್ಲಿ ಮೃತಪಟ್ಟವರ ಹೆಸರನ್ನು ಅಧಿಕಾರಿಗಳು ತಕ್ಷಣಕ್ಕೆ ಬಹಿರಂಗಪಡಿಸಲಿಲ್ಲ.
ಸ್ಟಾಕ್‌ಹೋಮ್: ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ ಬೆಂಜಮಿನ್ ಲಿಸ್ಟ್ ಮತ್ತು ಯುಎಸ್ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಡೇವಿಡ್ ಡಬ್ಲ್ಯೂಸಿ ಮ್ಯಾಕ್‌ಮಿಲನ್ ಅವರಿಗೆ ನೀಡಲಾಗಿದೆ. ರಸಾಯನಶಾಸ್ತ್ರದಲ್ಲಿ ಅಸಿಮ್ಮೆಟ್ರಿಕ್ ಆರ್ಗನೊಕಟಾಲಿಸಿಸ್ ಅಭಿವೃದ್ಧಿಗಾಗಿ...
ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ಉಪಾ ಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತಿತರ ಕ್ವಾಡ್ ನಾಯಕರಿಗೆ ವಿಶಿಷ್ಠ ಉಡುಗೊರೆ ನೀಡಿದ್ದಾರೆ. ಹ್ಯಾರಿಸ್ ಅವರ ತಾತಾ...
ಸ್ಕೋಪ್ಕೆ: ಕೋವಿಡ್ ರೋಗಿಗಳನ್ನಿಡುವ ತಾತ್ಕಾಲಿಕ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅನಾ ಹುತದಲ್ಲಿ 10 ಮಂದಿ ಸೋಂಕಿತರು ಮೃತಪಟ್ಟು, ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿ ದ್ದಾರೆ. ಅಮೆರಿಕಾದ ಉತ್ತರ...
ವಾಷಿಂಗ್ಟನ್: ಪುಲ್ಜಿಟರ್ ಪ್ರಶಸ್ತಿ ವಿಜೇತ ಭಾರತಿಯ ಫೋಟೋ ಜರ್ನಲಿಸ್ಟ್ ಡ್ಯಾನಿಸ್ ಸಿದ್ಧಿಕಿ ಹತ್ಯೆಗೆ ಅಮೆರಿಕಾ ಶುಕ್ರವಾರ ತೀವ್ರ ಸಂತಾಪ ವ್ಯಕ್ತ ಪಡಿಸಿದೆ. ತಾಲಿಬಾನ್ ಮತ್ತು ಆಫ್ಘನ್ ಪಡೆಗಳ...
ಸ್ಯಾನ್‌ಫ್ರಾನ್ಸಿಸ್ಕೊ : ಕ್ಯಾಲಿಫೋರ್ನಿಯಾ- ನೆವಾಡ ಗಡಿಯಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿ ಸಿದೆ. ಸ್ಯಾನ್‌ಫ್ರಾನ್ಸಿಸ್ಕೊದ ಪೂರ್ವಕ್ಕೆ 250 ಮೈಲು ದೂರದಲ್ಲಿ ಲೇಕ್ ಥಾಹೊಯ್ ದಕ್ಷಿಣದಲ್ಲಿ ಭೂಕಂಪ ಸಂಭವಿಸಿದೆ....
ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದ ಸಂಟಾ ರೋಸಾದಲ್ಲಿ ಸೋಮವಾರ ಬೆಳಗ್ಗೆ ನಡೆದ ಗುಂಡಿನ ದಾಳಿನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಮಧ್ಯರಾತ್ರಿ ಸಮಯದಲ್ಲಿ ಸಂಟಾ ರೋಸಾ ಪೊಲೀಸ್...
ವಾಷಿಂಗ್ಟನ್: ಅಮೆರಿಕಾ ಪರಿಸರ ಸಂರಕ್ಷಣಾ ಏಜನ್ಸಿಯ ನೀರು ವಿಭಾಗದ ಮುಖ್ಯಸ್ಥರಾಗಿ ಭಾರತೀಯ ಮೂಲದ ಜಲ ತಜ್ಞೆ ರಾಧಿಕಾ ಫಾಕ್ಸ್ ನಿಯೋಜನೆಗೊಂಡಿದ್ದಾರೆ. ಫಾಕ್ಸ್ ಆಯ್ಕೆಗೆ ಸೆನೆಟ್‍ನಲ್ಲಿ ನಡೆದ ಮತದಾನದಲ್ಲಿ...
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕದ ನಾಗರಿಕ ಹಕ್ಕುಗಳ ವಕೀಲೆ ವನಿತಾ ಗುಪ್ತ ಅವರು ಅಮೆರಿಕದ ಸಹ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿದ್ದಾರೆ. ಸೆನೆಟ್‌ನಲ್ಲಿ ನಡೆದ ಮತದಾನದಲ್ಲಿ ರಿಪಬ್ಲಿಕನ್...
ವಾಷಿಂಗ್ಟನ್: ಕೋವಿಡ್ 19 ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳುವುದನ್ನು ಮುಂದೂಡಬೇಕೆಂದು ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ ನೀಡಿರುವುದಾಗಿ ವರದಿಯಾಗಿದೆ. ಅಮೆರಿಕದ...