ಲಂಡನ್: ಪ್ರಪಂಚದಲ್ಲಿಯೇ ಮೊದಲ ಬಾರಿ ಕರೋನಾ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದ ಬ್ರಿಟನ್ ದೇಶದ ವಿಲಿಯಂ ಷೇಕ್ಸ್ಪಿಯರ್(81) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಡಿಸೆಂಬರ್ 8, 2020ರಂದು, ಲಸಿಕೆ ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಶೇಕ್ಸ್ಪಿಯರ್ ಪಾತ್ರರಾಗಿದ್ದರು. ಯೂನಿವರ್ಸಿಟಿ ಆಸ್ಪತ್ರೆ ಕೋವೆಂಟ್ರಿ ಅಂಡ್ ವಾರ್ವಿಕ್ಶೈರ್ನಲ್ಲಿ ಜರ್ಮನಿಗೆ ಸೇರಿದ ಬಯೋಎನ್ಟೆಕ್, ಅಮೆರಿಕಾ ಔಷಧ ಸಂಸ್ಥೆ ಫಿಜರ್ ಜಂಟಿಯಾಗಿ ಅಭಿವೃದ್ದಿ ಪಡಿಸಿದ್ದ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದರು. ಇದೇ ಆಸ್ಪತ್ರೆಯಲ್ಲಿ ಮಾರ್ಗರೇಟ್ ಕೀನನ್(91) ಎಂಬವರು ಲಸಿಕೆ ಪಡೆದ ಮೊದಲ […]