Saturday, 23rd November 2024

ಮನಸು ಪರಿವರ್ತನೆ ಭಗವದ್ಗೀತೆಯ ಧ್ಯೇಯ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ 95

ವಿಶ್ವವಾಣಿ ಕ್ಲಬ್‌ಹೌಸ್‌ನ ಅರಿವಿನ ಉಪನ್ಯಾಸದಲ್ಲಿ ಸ್ವಾಮಿ ಆದಿತ್ಯಾನಂದ ಹೇಳಿಕೆ

ಇದು ಸ್ವತಂತ್ರ ಕೃತಿಯಲ್ಲ, ಮಹಾಭಾರತದಲ್ಲಿ ಬರುವಂತಹದು

ಬೆಂಗಳೂರು: ಭಗವದ್ಗೀತೆ ಒಂದು ವಿಶೇಷ ಗ್ರಂಥ. ಭಗವಂತನು ಜನರಿಗೆ ನೀಡಿದ ಗೀತೆ ಭಗವದ್ಗೀತೆ. ಇದು ಸ್ವತಂತ್ರ ಕೃತಿಯಲ್ಲ. ಭಗವದ್ಗೀತೆ ಮನುಷ್ಯನ ಮನಸ್ಸನ್ನು ಪರಿವರ್ತಿಸುವ ಗ್ರಂಥ. ಭಗವದ್ಗೀತೆ ಏನು ಎಂಬುದನ್ನು ತಿಳಿದುಕೊಳ್ಳುವ ಗುಣ ನಮ್ಮಲ್ಲಿರಬೇಕು ಎಂದು ಸ್ವಾಮಿ ಆದಿತ್ಯಾನಂದ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಿಂದ ಆಯೋಜಿಸಲಾಗಿದ್ದ ‘ನಿತ್ಯ ಜೀವನದಲ್ಲಿ ಭಗವದ್ಗೀತೆ’ ಅರಿವಿನ ಉಪನ್ಯಾಸದಲ್ಲಿ ಮಾತನಾಡಿ, ಇಡೀ ಪ್ರಪಂಚದಲ್ಲಿ ಬೈಬಲ್ ಎಲ್ಲಾ ಭಾಷೆಗಳಿಗೂ ಅನುವಾಗಿದ್ದರೆ ನಂತರ ಬರುವುದು ಭಗ ವದ್ಗೀತೆ. ಇದರ ವೈಶಿಷ್ಟತೆಯೆಂದರೆ ಮಕ್ಕಳಿಗೂ, ಯುವಕರಿಗೂ, ವಯಸ್ಸಾದವರಿಗೂ ಉಪದೇಶಿಸ ಬಹುದು.

ಇದು ಸ್ವತಂತ್ರ ಕೃತಿಯಲ್ಲ. ಮಹಾಭಾರತದಲ್ಲಿ ಬರುವಂತಹದು, ೧೮ ಪರ್ವಗಳು, ಕೊನೆಯ ಸ್ವರ್ಗಾ ರೋಹಣ, ಭೀಷ್ಮ ಪರ್ವದ ೨೫ನೇ ಅಧ್ಯಾಯವು ಭಗವದ್ಗೀತೆಯ ಮೊದಲ ಅಧ್ಯಾಯ. ನಂತರ ೧೮ ಸೇರಿಸಿ ದಾಗ ೪೨ ಅಧ್ಯಾಯ. ಈ ೧೮ ಅಧ್ಯಾಯದಿಂದ ೪೨ ಅಧ್ಯಾಯಗಳನ್ನು ಬೇರೆ ತೆಗೆದರೆ ಭಗವದ್ಗೀತೆ. ಮಹಾ ಭಾರತವನ್ನು ಪಂಚಮವೇದ ಎನ್ನುವುದು ಇದೇ ಕಾರಣಕ್ಕೆ. ಇದು ಕರ್ಮ, ಜ್ಞಾನ, ಭಕ್ತಿಯನ್ನು ಪ್ರತಿಪಾದಿಸು ತ್ತದೆ ಎಂದರು.

ಅಸಂಖ್ಯಾತ ಭಾಷ್ಯಗಳು: ಗಣೇಶ ಪುರಾಣದಲ್ಲಿ ಗಣೇಶ ಗೀತ ಎಂದು ಬರುತ್ತದೆ. ಅಲ್ಲಿ ಗಣೇಶ ಉಪದೇಶ ಮಾಡುತ್ತಾನೆ. ವರೇಣ್ಯ ಅನ್ನುವಂತಹವನಿಗೆ ಗಣೇಶ ಗೀತ ಉಪದೇಶ ಮಾಡುತ್ತಾನೆ. ೧೧ ಅಧ್ಯಾಯದಲ್ಲಿ ಭಗವದ್ಗೀತೆಯ ೧೮ ಅಧ್ಯಾಯಗಳು ಅದೇ ರೀತಿ ಸಾರಾಂಶ ಇದೆ. ಅಧ್ಯಾಯದಿಂದ ಅಧ್ಯಾಯ ಭಗವದ್ಗೀತೆ ಯನ್ನೇ ಕಾಣುತ್ತೇವೆ. ಭಗವದ್ಗೀತೆ ಮೇಲೆ ಹನು ಮಾನ್‌ನ ಭಾಷ್ಯ ಇದ್ದು, ಪೈಶಾಚ್ಯ ಭಾಷೆಯಲ್ಲಿದೆ. ಮಂಡ್ಯದಲ್ಲಿ ಪ್ರತಿನಿತ್ಯ ೧ ಗಂಟೆಯಂತೆ ಭಗವದ್ಗೀತೆಯ ೧ ಅಧ್ಯಾಯದ ಪ್ರವಚನ ಮಾಡಿದೆ. ೬-೭ ತಿಂಗಳಾ ದರೂ ಇದನ್ನು ಮುಗಿಸಲು ಸಾಧ್ಯವಾಗಿಲ್ಲ. ಇದಕ್ಕೆ ಅಸಂಖ್ಯಾತ ಭಾಷ್ಯಗಳು ಇವೆ. ಸಂಸ್ಕೃತ, ಕನ್ನಡದಲ್ಲಿ, ಇಂಗ್ಲಿಷ್ ನಲ್ಲಿ ವ್ಯಾಖ್ಯಾನ ಬರೆದಿದ್ದಾರೆ. ಯಾರು ಬೇಕಾದರೂ ಹೊಸದೃಷ್ಟಿಯಿಂದ ಕಾಣಬಹುದು. ಅರ್ಜುನ ಅಂದರೆ ಅರ್ಜುನ ಅಲ್ಲ, ಕೃಷ್ಣ ಅಂದರೆ ಕೃಷ್ಣ ಅಲ್ಲ. ಪ್ರಶ್ನೆ ಕೇಳುವವ ಅರ್ಜುನ, ಉತ್ತರಿಸುವವ ಕೃಷ್ಣ.

ಇಬ್ಬರೂ ನಮ್ಮಲ್ಲೇ ಇದ್ದಾರೆ. ನಾನು ಅನ್ನುವ ಚೈತನ್ಯ ಯಾರಿಗೂ ಕಾಣಿಸುವುದಿಲ್ಲ. ಕೆಟ್ಟದ್ದು ಒಳ್ಳೆಯದು ನಮ್ಮೊಳಗೆ ಇದೆ. ನಾವು ಅದನ್ನು ಅರಿತುಕೊಳ್ಳಬೇಕು.
ಕಷ್ಣ ಎನ್ನುವವ ಚೈತನ್ಯ. ಕಣ್ಣಿಗೆ ಕಾಣಿಸದ ಚೈತನ್ಯ ಕೃಷ್ಣ, ಕಣ್ಣಿಗೆ ಕಾಣಿಸುವವ ಅರ್ಜುನ. ನಾನು ಎನ್ನುವವನಿಗೆ ಕುಲ, ಗೋತ್ರ, ಜಾತಿ ಇರುವುದಿಲ್ಲ. ನಾನು ಎನ್ನುವವನಿಗೆ ಆಕಾರವಿರುವುದಿಲ್ಲ. ಮನೆಗೆ ಬರುವ ಅತಿಥಿ, ಮಕ್ಕಳು, ಗುರುಗಳನ್ನು ದೇವರು ಅನ್ನುತ್ತೇವೆ. ಕಣ್ಣು ಬಿಟ್ಟಾಗ ಎಲ್ಲಾ ಕಾಣುತ್ತದೆ. ಇದು ಸಗುಣ. ನಾನು ಎಂಬುದು ಚೈತನ್ಯ. ಈ ಚೈತನ್ಯವೇ ಕೃಷ್ಣ, ಅಲ್ಲಾ, ಏಸು, ರಾಮ. ಇವೆಲ್ಲವನ್ನು ನೋಡುವ ದೃಷ್ಟಿ ಇರಬೇಕು ಅಷ್ಟೇ ಎಂದರು.

ಮೊದಲ ಅಧ್ಯಾಯದಲ್ಲಿ ಎಲ್ಲಾವೂ ಉಂಟು: ಭಗವದ್ಗೀತೆಯ ಸಾರ ನಮ್ಮ ಮನಸ್ಸನ್ನು ಪರಿವರ್ತಿಸುವಂತಹದು. ಅರ್ಜುನನ ವಿಷಮ ಮನಸ್ಥಿತಿಯನ್ನು ತೋರಿಸು ತ್ತದೆ. ಸರಿಯಾದ ಭಾವನೆ ವಿಷಮ ಸರಿಯಲ್ಲದ ಪರಿಸ್ಥಿತಿಯಲ್ಲಿ. ದೇಶದಲ್ಲಿ ಏನೆಲ್ಲಾ ಅನಾಹುತಗಳಾಗಿವೆ. ಅದು ಭಗವದ್ಗೀತೆಯ ಮೊದಲ ಅಧ್ಯಾಯದಲ್ಲಿ ತಿಳಿದು ಬರುತ್ತದೆ. ವೀಕ್ ಮೈಂಡ್‌ಗೆ ಸ್ಟ್ರಾಂಗ್ ಮೋಟಿವ್ ಕೊಟ್ಟಾಗ ಬದಲಾಗುತ್ತದೆ. ಭಗವದ್ಗೀತೆ ಪ್ರತಿಯೊಬ್ಬನ ಮನಸ್ಸಿಗೂ ಪರಿವರ್ತನಾ ಗ್ರಂಥ. ಭಗವದ್ಗೀತೆ ಏನು ಎಂಬುದನ್ನು ನೋಡುವ ದೃಷ್ಟಿ ನಮ್ಮಲ್ಲಿ ಬರಬೇಕು.

ವಿರಾಟ ಪರ್ವದಲ್ಲಿ ಅರ್ಜುನ ಬೃಹನ್ನಳೆಯಾಗಿ ಯುದ್ಧ ಮಾಡಿದ್ದಾನೆ. ಇಡೀ ಗೀತೆಯಲ್ಲಿ ಸಂಶಯದಿಂದ ವಿನಾಶ ಎಂದು ಕೃಷ್ಣ ಹೇಳುತ್ತಾನೆ. ಇಡೀ ಮಹಾಭಾರತ ದಲ್ಲಿ ಧೃತರಾಷ್ಟ್ರ ಮತ್ತು ಹೃತರಾಷ್ಟ್ರ ನಡುವೆ ಯುದ್ಧ ಆಯಿತು. ಧೃತ ಅಂದರೆ ಹಿಡಿದುಕೊಂಡವರು ಹೃತ ಅಂದರೆ ಕಳೆದುಕೊಂಡಿರುವವರು. ಇಲ್ಲಿ ಕೌರವರ ಜತೆ ರಾಜ್ಯ ಇತ್ತು. ಪಾಂಡವರಲ್ಲಿ ಏನೂ ಇರಲಿಲ್ಲ. ಧರ್ಮರಾಜಾದಿ ಪಾಂಡವರೊಂದಿಗೆ ದುರ್ಯೋಧನಾದಿಗಳು ಯುದ್ಧ ಮಾಡುವುದು. ಧರ್ಮರಾಜ ಮತ್ತು ಧೃತ ರಾಷ್ಟ್ರ ನಮ್ಮೊಳಗೆ ಇದ್ದಾರೆ. ದೇವತೆಗಳು, ದಾನವರು ನಮ್ಮ ಹೃದಯದಲ್ಲೇ ಇದ್ದಾರೆ. ನಾವು ಯಾರನ್ನು ಪೋಷಿಸುತ್ತೇವೆಯೋ ಅವರು ಅಭಿವ್ಯಕ್ತಗೊಳ್ಳು ತ್ತಾರೆ. ಯಾವಾಗ ಇದನ್ನು ತಿಳಿದುಕೊಳ್ಳುತ್ತೇವೆಯೋ ಆಗ ಅರಿವಾಗುತ್ತದೆ. ವಿಷಾದದಲ್ಲಿ ರುವವರಿಗೆ ಇದು ನೀನಲ್ಲ, ನಿನ್ನ ವಾಸ್ತವ ಬೇರೆ ಇದೆ ಎಂದು ತಿಳಿ ಸುತ್ತೇನೆ ಎಂದವನು ಕೃಷ್ಣ ಎಂದು ಹೇಳಿದರು.

ಶುದ್ಧ ಚೈತನ್ಯ ಸತ್ಯ: ಸಾಂಖ್ಯ ಯೋಗ ಎಂದರೆ ಜ್ಞಾನ. ಇದರಲ್ಲಿ ಅರ್ಜುನನಿಗೆ ಉಪದೇಶ ಮಾಡುತ್ತಾನೆ. ಆರಂಭದಲ್ಲಿ ಅರ್ಜುನನಿಗೆ ಕೃಷ್ಣ ಬೈಯುತ್ತಾನೆ. ನಪುಂಸಕನಂತೆ ಆಡಬೇಡ. ಕ್ಷತ್ರಿಯನಿಗೆ ಹೋರಾಡಿ ಮರಣವನ್ನಪ್ಪುವುದು ಸ್ವರ್ಗ. ಭಿಕ್ಷಾಟನೆ ಮಾಡುತ್ತೇನೆ ಎಂದು ಹೊರಟೆಯಲ್ಲಾ. ನಾವೆಲ್ಲರೂ ಅಜ್ಞಾನದಲ್ಲೇ ಇದ್ದೇವೆ. ಯೋಚನೆ ಮಾಡುತ್ತಾ ಹೋದರೆ ವಾಸ್ತವದಲ್ಲಿ ನಾನು ಯಾರು ಎಂಬುದು ಅರಿವಾಗುತ್ತದೆ. ನೀನು ಮಹಾಪಂಡಿತ ಎಂದರೆ ಮೂರ್ಖ ಎಂದರ್ಥ.

ಯಾರಿಗಾಗಿ ದುಃಖಿಸಬಾರದೋ ಅವರಿಗಾಗಿ ದುಃಖಿಸುತ್ತಿದ್ದೀಯಾ ಎಂದು ಕೃಷ್ಣ ಹೇಳುತ್ತಾನೆ. ಜೀವನ ಎನ್ನುವುದು ಚಕ್ರ, ಕಾಲ ಎನ್ನುವುದೂ ಚಕ್ರ. ಮೇಲಿರು ವುದು ಕೆಳ ಬರಬೇಕು, ಕೆಳಗಿರುವುದು ಮೇಲೆ ಹೋಗಲೇಬೇಕು. ಮನಸ್ಸು ಎನ್ನುವಂತಹದಕ್ಕೆ ನಾವು ಯೋಚನೆ ಮಾಡಲು ಕೊಡಬೇಕು. ದೇವರು ನಮ್ಮೊಳಗೆ ಇರುವುದು. ಕೃಷ್ಣ ಹೇಳುವುದು ಆಕಾರ ಸತ್ಯವಲ್ಲ. ಶುದ್ಧ ಚೈತನ್ಯ ಸತ್ಯ. ಅದಕ್ಕೆ ಹುಟ್ಟು ಇಲ್ಲ, ಸಾವೂ ಇಲ್ಲ. ನಾನು ಅನ್ನುವ ಚೈತನ್ಯ ದೃಷ್ಟಿಯಿಂದ ನೊಡಬೇಕು. ಕರ್ಮಯೋಗದ ಮುಖಾಂತರ ಕರ್ಮ ಮಾಡು, ಕರ್ಮದ ಉದ್ದೇಶ ಮುಖ್ಯ ಎಂದು ಕೃಷ್ಣ ಹೇಳುತ್ತಾನೆ.

ರಾಮನಾಮ ತೊಂದರೆ ಮಾಡಿದರೆ ಉದ್ಧಾರ: ನನ್ನ ಮನಸ್ಸು ಅನ್ನುವುದನ್ನು ಉದ್ಧಾರಗೊಳಿಸಲು ಪೂಜೆ ಮಾಡುತ್ತೇವೆ. ನಾನು ಕೆಲಸ ಮಾಡುವುದು ನನ್ನ
ಜೀವನಕ್ಕೆ ಅಲಂಕಾರ. ದೇವರು ಎಂದರೆ ಯಾರು ಎಂದು ಕೇಳುವವರಿಗೆ ಯಾರ ಜತೆಯಲ್ಲಿ ಪ್ರೀತಿ, ವಿಶ್ವಾಸದಿಂದ ಮಾತನಾಡುತ್ತೇವೋ ಅವರೇ ದೇವರು. ಕೃಷ್ಣ ನನ್ನೊಳಗೆ ಇದ್ದಾನೆ. ಇದುವೇ ಉಪನಿಷತ್ತಿನ ಸಾರ. ಶಿವ ಬೇರೆಯಲ್ಲ, ಹರಿ ಬೇರೆಯಲ್ಲ. ಇದನ್ನು ತಿಳಿಯದಿದ್ದರೆ ಉಪನಿಷತ್ತು ಅರ್ಥವಾಗುವುದಿಲ್ಲ.
ಕರ್ಮ ಅನ್ನುವಂತಹದ್ದು ಹೇಳುವುದು ಇದನ್ನೆ. ಸಾಧನೆಯಲ್ಲಿ ಉನ್ನತ ಮಟ್ಟಕ್ಕೇರುವುದು ಹೊರ ಜಗತ್ತಿನಲ್ಲಿದ್ದಾಗ ನಮಗೆ ರಾಮನಾಮ ತೊಂದರೆ ಮಾಡಿದರೆ
ಉದ್ಧಾರವಾಗುತ್ತೇವೆ. ರಾಮ ನಾಮಜಪ ಮಾಡುವಾಗ ಇತರ ವಿಚಾರಗಳ ಧ್ಯಾನ ಇರಬಾರದು.

ನಾವೇನು ಅಭ್ಯಾಸ ಮಾಡುತ್ತೇವೆಯೋ ಅದನ್ನು ಮನಸ್ಸು ಕಲಿಯುತ್ತದೆ. ಕರ್ಮ ಮಾಡುವುದು ಮನಸ್ಸಿನ ಶಾಂತಿಗಾಗಿ. ಬದಲಾಗಬೇಕು ಎನ್ನುವ ಬೀಜವನ್ನು ಬಿತ್ತಿದ್ದೇನೆ, ಅದು ಬೆಳೆದು ಹೆಮ್ಮರವಾಗುವುದು ನಿನ್ನ ಕಾರ್ಯ. ಬದಲಾವಣೆ ನಮ್ಮಲ್ಲಿ ನಮ್ಮಿಂದ ಆಗಬೇಕು. ನಮ್ಮ ಬದುಕನ್ನು ನಾವೇ ಜೀವಿಸಬೇಕು. ನಿತ್ಯ ಜೀವನದಲ್ಲಿ ಭಗವದ್ಗೀತೆ ಎಂದರೆ ಇದು. ನನ್ನ ಬದುಕಿಗೆ ಅಳವಡಿಸಿಕೊಂಡು ಹೋದಾಗ ಇದು ಸಾಧ್ಯ. ಎಲ್ಲಿರುತ್ತೇವೋ ಅಲ್ಲಿ ಸಂತೋಷವಾಗಿರುವುದು
ಕಲಿಯಬೇಕು. ನಮ್ಮ ಆನಂದಕ್ಕಾಗಿ ಕರ್ಮ ಮಾಡಬೇಕು. ನಮ್ಮ ಮಾತು ಇನ್ನೊಬ್ಬರಿಗೆ ನೋವುಂಟು ಮಾಡಬಾರದು. ನಮ್ಮ ಮಾತು ನಮ್ಮ ಉದ್ಧಾರಕ್ಕಾಗಿರ ಬೇಕು. ನಿಜವಾದ ಸುಖ ಎಂದರೆ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು. ಮನುಷ್ಯನ ಮೂರ್ಖತನ ಎಂದರೆ ಸುಖ, ಸಂತೋಷ ಎನ್ನುವುದು ಹೊರಗಿನಿಂದ ದೊರೆಯುತ್ತದೆ ಎಂದುಕೊಳ್ಳುವುದು.

ಎರಡನೇ ಅಧ್ಯಾಯದಲ್ಲಿ ಉಪನಿಷತ್ತಿನ ಸಾರ 
ಸಾಂಖ್ಯಯೋಗದಲ್ಲಿ ಉಪದೇಶಕೊಟ್ಟು ಸ್ಥಿತಪ್ರಜ್ಞನ ಲಕ್ಷಣಗಳನ್ನು ವಿವರಿಸುತ್ತಾನೆ. ಮನಸ್ಸಿನಲ್ಲಿರುವ ಇಚ್ಛೆಗಳನ್ನು ದೂರ ಮಾಡುತ್ತಾನೋ ಅವನೇ ಸ್ಥಿತಪ್ರಜ್ಞ. ಬೇಕು ಅನ್ನುವುದು ಅಶಾಂತಿ, ಸಾಕು ಅನ್ನುವುದು ಶಾಂತಿ ಇದು ಸಾಂಖ್ಯಯೋಗ. ಪ್ರತಿಯೊಬ್ಬ ವ್ಯಕ್ತಿಯೊಳಗೆ ಮಹಾತ್ಮ ಇದ್ದಾನೆ. ಕೊಡದೇ ಇರುವುದಕ್ಕೆ ಹೆಚ್ಚು ಮಹತ್ವಕೊಡುತ್ತಾ ಇರುತ್ತಾರೆ. ದಾಸರು ಪದ್ಯ ಬರೆದಿದ್ದು ಆತ್ಮತೃಪ್ತಿಗೋಸ್ಕರ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವರು ಹೇಳಿಸಿಕೊಂಡು ಮಾಡುತ್ತಾರೆ. ಇನ್ನು ಕೆಲವರು ಹೇಳಿಸಿಕೊಳ್ಳದೇ ಮಾಡಿಕೊಳ್ಳುತ್ತಾರೆ. ನಾಟ್ಯ ಎನ್ನುವುದು ಕಲಿಸಲಿಕ್ಕೆ ಒಂದು ಮಾದರಿ, ಹಾಡು ಅನ್ನುವಂತಹದ್ದೂ ಕಲಿಕೆಯ ಮಾದರಿ. ಕಲಿಸುವು ದರಿಂದ ಆತ್ಮತೃಪ್ತಿ ಬರಬೇಕು. ನಾನು ಎನ್ನುವ ಚೈತನ್ಯವೇ ಭಗವಂತ. ಸರ್ವವೂ ನನ್ನಮಯ. ಭಗವದ್ಗೀತೆ ಹೇಳುತ್ತದೆ ನಾನು ನನ್ನಂತೆ ಆಗಬೇಕು. ನನ್ನ ವಾಸ್ತವ ರೂಪ ತಿಳಿದುಕೊಳ್ಳಬೇಕು. ಆಗ ನಾನು- ನೀನು ಅನ್ನುವ ಭೇದ ಹೊರಟುಹೋಗುತ್ತದೆ. ಇಡೀ ಉಪನಿಷತ್ತಿನ ಸಾರ ಎರಡನೇ ಅಧ್ಯಾಯದಲ್ಲಿ ಬರುತ್ತದೆ. ಜೀವನದ ಸಾರ ತಿಳಿಸುತ್ತದೆ.

***

ನಾನು ಮಾಡುವ ಭಕ್ತಿ ನನಗಿಷ್ಟವಾಗುತ್ತದಾ ಎಂಬುದು ನನ್ನ ಭಕ್ತಿ. ನಮ್ಮಲ್ಲಿ ಹಲವರದು ಅನುಕರಣಾ ಸ್ವಭಾವ. ಅನುಚನಾ ಎನ್ನುವಂತಹದ್ದಿಲ್ಲ. ನಾನು
ಮಾಡುವಂತಹದ್ದು ನನಗೆ ತೃಪ್ತಿ ನೀಡಬೇಕು. ನನ್ನ ಮನಸಿಗೆ ನಾಟುವಂತಹದು ಮಹಿಮೆ. ನನ್ನ ಮನಸಿಗೆ ಇಷ್ಟವಾದರೆ ನಾನು ನಮಸ್ಕರಿಸುತ್ತೇನೆ. ಬಲವಂತ ದಿಂದ ಅನುಕರಣೆ ಮಾಡುವುದರಿಂದ ತೃಪ್ತಿ ದೊರೆಯುವುದಿಲ್ಲ.
– ಸ್ವಾಮಿ ಆದಿತ್ಯಾನಂದ