Thursday, 19th September 2024

ನೀವು ಕ್ಯಾನ್ಸರ್ ಅನ್ನು ಹೇಗೆ ತಡೆಯಬಹುದು ?

ವಿಶ್ವ ಆರೋಗ್ಯ ದಿನ 2022

ಡಾ. ನಿತಿ ರೈಜಾದಾ, ನಿರ್ದೇಶಕರು-ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ-ಆಂಕೊಲಾಜಿ, ಫೋರ್ಟಿಸ್ ಆಸ್ಪತ್ರೆಗಳು ಬೆಂಗಳೂರು

ಪ್ರತಿ ವರ್ಷ ಏಪ್ರಿಲ್ 7ರಂದು, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರ ಅಂಗಸಂಸ್ಥೆಗಳು ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತವೆ. ಇದು ನಮ್ಮ ಭೂಮಿ ಹಾಗೂ ಅದರ ನಿವಾಸಿಗಳ ಆರೋಗ್ಯದ ಬಗ್ಗೆ ಗಮನ ಸೆಳೆಯುವ ಜಾಗತಿಕ ಆರೋಗ್ಯ ಜಾಗೃತಿ ದಿನವಾಗಿದೆ.

ಕ್ಯಾನ್ಸರ್ ತಡೆಗಟ್ಟುವಿಕೆಗೆ ಸಂಬಂಧಿಸಿದ ತಾಂತ್ರಿಕ ಪ್ರಗತಿಗಳು ನಿರಂತರವಾಗಿ ವಿಕಸಗೊಳ್ಳುತ್ತಿವೆ. ಇದಾಗ್ಯೂ ಒಬ್ಬರ ಜೀವನಶೈಲಿಯ ಆಯ್ಕೆಗಳು ಅವರ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ಹೀಗಾಗಿ ಜೀವನಶೈಲಿಯಲ್ಲಿನ ಒಂದು ಸಣ್ಣ ಬದಲಾವಣೆ ಒಬ್ಬರ ಒಟ್ಟಾರೆ ಆರೋಗ್ಯ ಹಾಗೂ ಕ್ಯಾನ್ಸರ್ ತಡೆಗಟ್ಟುವಿಕೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂಬ ಅಂಶವನ್ನು ಪ್ರತಿ ಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು.

ಕೆಲವು ಕ್ಯಾನ್ಸರ್ ತಡೆಗಟ್ಟುವ ಸಲಹೆಗಳು ಇಂತಿವೆ:

1. ವ್ಯಸನಗಳನ್ನು ತ್ಯಜಿಸಿ:
ಯಾವುದೇ ರೂಪದಲ್ಲಿ ತಂಬಾಕು ಸೇವನೆಯು ಶ್ವಾಸಕೋಶ, ಬಾಯಿ. ಗಂಟಲು, ಧ್ವನಿಪೆಟ್ಟಿಗೆ, ಮೇದೋಜ್ಜೀರಕ ಗ್ರಂಥಿ, ಮೂತ್ರಕೋಶ, ಗರ್ಭಕೋಶ ಹಾಗೂ ಮೂತ್ರಪಿಂಡದ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್ ಗಳೊಂದಿಗೆ ಘರ್ಷಣೆಯ ಹಾದಿಯಲ್ಲಿದೆ. ತಂಬಾಕು ಜಗಿಯುವಿಕೆಯು ಸಾಮಾನ್ಯವಾಗಿ ಬಾಯಿ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಗಳಿಗೆ ಸಂಬಂಧಿಸಿದೆ. ಸೆಕೆಂಡ್ ಹ್ಯಾಂಡ್ ಹೊಗೆಗೆ ಒಡ್ಡಿಕೊಳ್ಳುವುದರಿಂದ ನಿಮ್ಮ ಶ್ವಾಸಕೋಶದ ಅಪಾಯ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುತ್ತದೆ.

ಅಲ್ಕೋಹಾಲ್ ದೇಹವನ್ನು ಅಸೆಟಾಲ್ಡಿಹೈಡ್ ಎಂವ ರಾಸಾಯನಿಕವಾಗಿ ವಿಭಜಿಸುತ್ತದೆ. ಇದು ಡಿಎನ್ ಎ ಅನ್ನು ನಾಶಪಡಿಸುತ್ತದೆ ಹಾಗೂ ಹಾನಿ ಕಾರಕ ಪರಿಣಾಮವನ್ನುಂಟು ಮಾಡುತ್ತದೆ. ತಂಬಾಕು ಸೇವನೆಯನ್ನು ಮಾಡದೇ ಇರುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸುವ ನಿರ್ಧಾರವು ಕ್ಯಾನ್ಸರ್ ತಡೆಗಟ್ಟುವಿಕೆಯ ನಿರ್ಣಾಯಕ ಅಂಶವಾಗಿದೆ.

2. ಪೌಷ್ಠಿಕವಾದ ಆಹಾರವನ್ನು ಸೇವಿಸಿ: ಕಿರಾಣಿ ಅಂಗಡಿಯಲ್ಲಿ ಹಾಗೂ ಊಟದ ಸಮಯದಲ್ಲಿ ಸ್ಮಾರ್ಟ್ ಆಯ್ಕೆಗಳನ್ನು ಮಾಡುವುದು ಅಪಾಯ ವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
• ವಿವಿಧ ಹಣ್ಣುಗಳು, ತರಕಾರಿಗಳು ಹಾಗೂ ಇತರೆ ಸಸ್ಯ-ಆಧರಿತ ಆಹಾರಗಳನ್ನು ಸೇವಿಸಿ. ಉದಾಹರಣೆಗೆ ಧಾನ್ಯಗಳು ಹಾಗೂ ಬೀನ್ಸ್ ನಿಮ್ಮ ಡಯೆಟ್ ನ ಮುಖ್ಯ ಅಡಿಪಾಯವಾಗಿರಬೇಕು.
• ಆರೋಗ್ಯಕರ BMIಗಳನ್ನು ಕಾಪಾಡಿಕೊಳ್ಳಿ.
• ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ. ಆಲ್ಕೋಹಾಲ್ ಪ್ರಮಾಣ ಹಾಗೂ ಅವಧಿಯು ಸ್ತನ, ಕೊಲನ್, ಶ್ವಾಸಕೋಶ, ಮೂತ್ರಪಿಂಡ, ಹಾಗೂ ಲಿವರ್ ಕ್ಯಾನ್ಸರ್ ಸೇರಿದಂತೆ ಹಲವಾರು ರೀತಿಯ ಕ್ಯಾನ್ಸರ್ ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
• ಸಂಸ್ಕರಿಸಿದ ಮಾಂಸ ಸೇವನೆಯನ್ನು ಮಿತಿಗೊಳಿಸಿ. ಕ್ಯಾಮ್ಸರ್ ಕುರಿತು WHO ವರದಿಯ ಪ್ರಕಾರ, ಹೆಚ್ಚಿನ ಪ್ರಮಾಣದಲಲ್ಲಿ ಸಂಸ್ಕರಿಸಿದ ಗೋಮಾಂಸವನ್ನು ತನ್ನುವುದು ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತದೆ.
ಹೆಚ್ಚುವರಿ ವರ್ಜಿನ್ ಆಲಿವ್ ಎಣ್ಣೆ ಹಾಗೂ ಮಿಕ್ಸ್ ಡ್ ನಟ್ಸ್ ಗಳೊಂದಿಗೆ ಪೂರಕವಾದ ಮೆಡಿಟೇರಿಯನ್ ಆಹಾರವು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
3. ಆರೋಗ್ಯಕರ BMI ಅನ್ನು ಕಾಪಾಡಿಕೊಳ್ಳು ಹಾಗೂ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ:
ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವ ಮೂಲಕ ಸ್ತನ, ಪ್ರಾಸ್ಟೆಟ್, ಶ್ವಾಸಕೋಶ, ಕೊಲನ್ ಹಾಗೂ ಕಿಡ್ನಿ ಕ್ಯಾನ್ಸರ್ ಗಳನ್ನು ಕಡಿಮೆ ಮಾಡಬಹುದು.
ದೈಹಿಕ ಚಟುವಟಿಕೆ ನಿಮ್ಮ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುವುದರ ಜತೆಗೆ ನಿಮ್ಮ ಸ್ತನ ಹಾಗೂ ಕರುಳಿನ ಕ್ಯಾನ್ಸರ್ ಆಪಾಯವನ್ನು ಕಡಿಮೆ ಮಾಡುತ್ತದೆ.
ದೈಹಿಕ ಚಟುವಟಿಕೆ ಯಾವುದೇ ಹಂತದಲ್ಲಿ ಒಬ್ಬರ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಪ್ರಮುಖ ಆರೋಗ್ಯ ಪ್ರಯೋಜನಗಳಿಗಾಗಿ ನಿಮ್ಮ ದೈನಂದಿನ ದಿನಚರಿಯಲ್ಲಿ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆಗೆ ಮೀಸಲಿರಿಸಿ

4. ಸನ್ ಸ್ಕ್ರೀನ್ ಬಳಿಸಿ: ಚರ್ಮದ ಕ್ಯಾನ್ಸರ್ ತಡೆಗಟ್ಟಬಹುದಾದ ರೂಪಗಳಲ್ಲಿ ಒಂದಾಗಿದೆ
• ಹಗಲಿನ ವೇಳೆಯಲ್ಲಿ ಆದಷ್ಟು ಸೂರ್ಯನ ಕಿರಣಗಳಿಗೆ ಮೈಯೊಡ್ಡಿಕೊಳ್ಳುವುದನ್ನು ತಪ್ಪಿಸಿ
• ಎಕ್ಸ್ ಪೋಸ್ಡ್ ಸ್ಕಿನ್ ಅನ್ನು ಕವರ್ ಮಾಡಿಕೊಳ್ಳಿ
• ಪ್ರತಿ 2 ಗಂಟೆಗಳಿಗೊಮ್ಮೆ ಕನಿಷ್ಠ 30 SPF ಇರುವ ಸನ್ ಸ್ಕ್ರೀನ್ ಅನ್ನು ಹಚ್ಚಿಕೊಳ್ಳಿ.
• ಸನ್ ಲ್ಯಾಂಪ್ ಹಾಗೂ ಟ್ಯಾನಿಂಗ್ ಬೆಡ್ ಗಳನ್ನು ತಪ್ಪಿಸಿ

5. ನೀವೆ ಲಸಿಕೆ ಹಾಕಿಸಿಕೊಳ್ಳಿ:
ಕೆಲವು ವೈರಸ್ ಗಳು ಕ್ಯಾನ್ಸರ್ ಗೆ ಸಂಬಂಧಿಸಿವೆ. ಆದರೆ ಇಮ್ಯೂನೈಸೇಷನ್ ಅದನ್ನು ತಡೆಯಲು ಸಹಾಯ ಮಾಡುತ್ತದೆ. ಇದರ ವಿರುದ್ಧ ಲಸಿಕೆ ಹಾಕುವ ಬಗ್ಗೆ ವೈದ್ಯರನ್ನು ಸಂಪರ್ಕಿಸಿ.
• ಹೆಪಟೈಟಿಸ್ ಬಿ ಯಕೃತ್ತಿನ ಮಾರಕತೆಯನ್ನು ಹೊಂದುವ ಸಾಧ್ಯತೆಯನ್ನು ಹೆಚ್ಚಿಸಬಹುದು.
• ಹ್ಯೂಮನ್ ಪ್ಯಾಪಿಲೋಮ ವೈರಸ್ (ಹೆಚ್ ಪಿ ವಿ) ಲೈಂಗಿಕವಾಗಿ ಹರಡುವ ವೈರಸ್ ಆಗಿದ್ದು ಇದು ಗರ್ಭಕಂಠದ ಕ್ಯಾನ್ಸರ್ ಮತ್ತು ಇತರ ಜನನಾಂಗದ ಮಾರಣಾಂತಿಕ ಹಾಗೂ ತಲೆ , ಕುತ್ತಿಗೆ ಸ್ಕ್ವಾಮಸ್ ಸೆಲ್ ಕ್ಯಾನ್ಸರ್ ಗಳಿಗೆ ಕಾರಣವಾಗಬಹುದು.
6. ಅಪಾಯಕಾರಿ ನಡವಳಿಕೆಗಳನ್ನು ತಪ್ಪಿಸಿ ಹಾಗೂ ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಿ:
• ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಮಿತಿಗೊಳಿಸಿ ಹಾಗೂ ಸುಕ್ಷತೆಯನ್ನು ಬಳಸಿ. ಹೆಚ್ ಐವಿ ಅಥವಾ ಏಡ್ಸ್ ಹೊಂದಿರುವ ಜನರು ಗುದದ್ವಾರ, ಯಕೃತ್ತು ಹಾಗೂ ಶ್ವಾಸಕೋಶದ ಕ್ಯಾನ್ಸರ್ ಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.ಹೆಚ್ ಪಿ ವಿ ಗರ್ಭಕಂಠ, ಗುದದ್ವಾರ, ಶಿಶ್ನ, ಗಂಟಲು, ಯೋನಿ ಕ್ಯಾನ್ಸರ್ ಗಳಿಗೆ ಹೆಚ್ಚು ಸಂಬಂಧ ಹೊಂದಿದೆ.
• ಇಂಟ್ರಾವೆನಸ್ ಡ್ರಗ್ ಬಳಕೆದಾರರೊಂದಿಗೆ ಸೂಜಿಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ ಯಾಕೆಂದರೆ ಇದು ಹೆಚ್ ಐ ವಿ ಮತ್ತು ಹೆಪಟೈಟಿಸ್ ಬಿ/ಸಿ ಅನ್ನು ಹರಡಬಹುದು ಹಾಗೇ ಇದು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಮಾದಕ ವ್ಯಸನ ಅಂಶಗಳಿಗೆ ಸಂಬಂಧಿಸಿದ್ದರೆ ತಕ್ಷಣದ ಸಹಾಯವನ್ನು ಪಡೆಯಿರಿ.
7. ನಿಯಮಿತ ವೈದ್ಯಕೀಯ ಆರೈಕೆಯನ್ನು ಪಡೆಯಿರಿ
ನಿಯಮಿತವಾಗಿ ಸ್ವಯಂ-ಪರೀಕ್ಷೆಗಳು ಮತ್ತು ಚರ್ಮ, ಕೊಲನ್, ಗರ್ಭಕಂಠ, ಸ್ತನ, ಇತ್ಯಾದಿಗಳ ಸ್ಕ್ರೀನಿಂಗ್ ಗಳು ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಲು ಹಾಗೂ ಹೆಚ್ಚು ಪರಿಣಾಮಕಾರಿಯಾದ ಚಿಕಿತ್ಸೆಯನ್ನು ನೀಡಲು ಸಹಾಯ ಮಾಡುತ್ತದೆ.
ಜೀವಗಳನ್ನು ಉಳಿಸಲು ಸ್ಕ್ರೀನಿಂಗ್ ಅನ್ನು ತೋರಿಸಲಾಗಿದ್ದರೂ ಇದು ಯಾವಾಗಲೂ ಒಂದು ಗಾತ್ರವು ಎಲ್ಲರಿಗೂ ಸರಿಹೊಂದುತ್ತದೆ ಎಂಬ ಸ್ಕ್ರಿನಿಂಗ್ ಗೆ ಮಾನದಂಡಗಳಿಲ್ಲ.