Sunday, 8th September 2024

ಸಾಹಿತ್ಯ ವಲಯಕ್ಕೆ ಸಂದ ಗೌರವ

ರಸ್ತೆಯೊಂದಕ್ಕೆ ನಾಮಕರಣಗೊಳಿಸುವ ವಿಚಾರ ಬಹಳಷ್ಟು ದಿನಗಳ ಕಾಲ ಚರ್ಚೆಗೊಂಡು ಇತ್ತೀಚೆಗಷ್ಟೇ ಬಗೆಹರಿದಿರುವು ದನ್ನು ಕಾಣುತ್ತಿದ್ದೇವೆ. ಕನ್ನಡ ನಾಡಿನಲ್ಲಿ ಇದೀಗ ಪುತ್ಥಳಿಗಳ ನಿರ್ಮಾಣ, ರಸ್ತೆಗಳ ನಾಮಕರಣ ಎಂದರೆ ಅದೊಂದು ರಾಜಕೀಯ ವಸ್ತುವಾಗಿ ಪರಿಣಮಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂಥ ವೇಳೆಯಲ್ಲಿ ಕಲಾವಿದರು – ಸಾಹಿತಿಗಳು  ಅಪ್ರಸ್ತುತ ರಾಗುತ್ತಿರುವರೆ ಎಂಬ ಅನುಮಾನ ಕಾಡುವಂಥ ಪರಿಸ್ಥಿತಿ ಸಹ ನಿರ್ಮಾಣಗೊಂಡಿದೆ.

ಹೆಚ್ಚಿನ ಜ್ಞಾನಪೀಠಗಳು ಬಂದಿವೆ ಎಂಬ ಕಾರಣದಿಂದಾಗಿ ಸಾಹಿತಿಗಳನ್ನು ಒಂದಷ್ಟು ಸ್ಮರಿಸುತ್ತೇವೆ. ಉಳಿದ ಸಂದರ್ಭಗಳಲ್ಲಿ ನಮ್ಮ ರಾಜ್ಯದಲ್ಲಿ ಸಾಹಿತಿಗಳಿಗೆ ನೀಡಲಾಗುತ್ತಿರುವ ಮನ್ನಣೆ ತೀರಾ ಕಡಿಮೆಯೇ ಎಂಬ ಭಾವನೆ ಸಾಹಿತ್ಯ ವಲಯದ ಭಾವನೆ. ಇಂಥ ವೇಳೆಯಲ್ಲಿಯೇ ಇದೀಗ ಸಾಹಿತಿಯೊಬ್ಬರಿಗೆ ಪುತ್ಥಳಿ ನಿರ್ಮಿಸಿರುವುದು ಉತ್ತಮ ಕಾರ್ಯ.

ಬೆಂಗಳೂರಿನ ಯಡಿಯೂರು ವಾರ್ಡ್ ವ್ಯಾಪ್ತಿಯ ಬಸವನಗುಡಿ ಬಡಾವಣೆಯಲ್ಲಿ ಕವಿಯೊಬ್ಬರ ಪ್ರತಿಮೆ  ಅನಾವರಣಗೊಳಿಸಿ ರುವುದು ಸಾಹಿತ್ಯ ವಲಯದ ಪಾಲಿಗೆ ಸಂಭ್ರಮದ ಸಂಗತಿ. ಮೈಸೂರು ಮಲ್ಲಿಗೆ ಖ್ಯಾತಿಯ ದಾಂಪತ್ಯ ಕವಿ ಕೆ.ಎಸ್.ನರಸಿಂಹ ಸ್ವಾಮಿ ಅವರ ಕಂಚಿನ ಪ್ರತಿಮೆಯನ್ನು ಬಸವನಗುಡಿ ಬಡಾವಣೆಯ ಎಂ.ಎನ್.ಕೆ ಉದ್ಯಾನದ ಮುಂಭಾಗದಲ್ಲಿ ಅನಾವರಣ ಗೊಳಿಸಲಾಗಿದೆ.

ಮಹಾಕವಿಗೆ ಗೌರವ ಸಮರ್ಪಿಸುವ ದೃಷ್ಟಿಯಿಂದ ಮಹಾನಗರ ಪಾಲಿಗೆ 3 ಲಕ್ಷ ವೆಚ್ಚದಲ್ಲಿ ಈ ಪುತ್ಥಳಿಯನ್ನು ನಿರ್ಮಿಸಿದೆ. ಇದೀಗ ಒಬ್ಬರು ಕವಿಯ ಪುತ್ಥಳಿ ನಿರ್ಮಿಸಬಹುದಾದರೂ, ಇದನ್ನು ಒಂದು ಚಾಲನೆಯನ್ನಾಗಿ ಭಾವಿಸಬಹುದು. ಇದೇ ಮಾದರಿಯಲ್ಲಿ ಮತ್ತಷ್ಟು ಸಾಹಿತಿಗಳ ಸಾಧನೆಯನ್ನು ಸ್ಮರಿಸುವಲ್ಲಿ, ಇನ್ನೂ ಅನೇಕ ಸಾಹಿತಿಗಳ ಪುತ್ಥಳಿಗಳನ್ನು ನಿರ್ಮಿಸ ಬಹುದು.

ರಾಜಧಾನಿ ಮಾತ್ರವಲ್ಲದೆ ಆಯಾ ಜಿಲ್ಲೆಗಳಲ್ಲಿನ ಮಹತ್ವದ ಸಾಹಿತಿಗಳ ಪುತ್ಥಳಿಗಳ ನಿರ್ಮಾಣಕ್ಕೆ ಸ್ಥಳೀಯ ಆಡಳಿತಗಳು ಆಸಕ್ತಿ ವಹಿಸಬೇಕಿರುವ ಅವಶ್ಯ ಕತೆಯೂ ಕಂಡುಬರುತ್ತಿದೆ. ಈ ಪುತ್ಥಳಿಯ ನಿರ್ಮಾಣ ಒಟ್ಟಾರೆ ನಾಡಿನ ಸಾಹಿತ್ಯ ವಲಯಕ್ಕೆ ಸಂದ ಗೌರವ ಎನ್ನಬಹುದು.

Leave a Reply

Your email address will not be published. Required fields are marked *

error: Content is protected !!