Sunday, 8th September 2024

ಮತ್ತೊೊಂದು ರಕ್ಷಣಾ ನೆಗೆತ

ಭಾರತವು ರಕ್ಷಣಾ ಕ್ಷೇತ್ರದಲ್ಲಿ ಮತ್ತೊೊಂದು ಮೈಲುಗಲ್ಲು ಸ್ಥಾಪಿಸಲು ಮುಂದಾಗಿದೆ. ಇದಕ್ಕೆೆ ಹೆಗಲು ನೀಡಿರುವುದು ನಮ್ಮ ಹೆಮ್ಮೆಯ  ಡಿಆರ್‌ಡಿಒ ಸಂಸ್ಥೆ. ಇದು ನಿರ್ಮಿಸಿರುವ ಹೈಪರ್‌ಸಾನಿಕ್ ಟೆಕ್ನಾಲಜಿ ಡೆಮಾನ್ ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ) ಅನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.

ಇದೊಂದು ಶಬ್ದವೇಧಿ ಕ್ಷಿಪಣಿ. ಅಂದರೆ ಶಬ್ದಕ್ಕಿಿಂತ ಆರುಪಟ್ಟು ವೇಗದಲ್ಲಿ ಚಲಿಸುವ ಹೈಪರ್‌ಸಾನಿಕ್ ಕ್ಷಿಪಣಿಗಳಿವು. ಈಗ
ಪ್ರಯೋಗಿಸಲಾಗಿರುವ ಈ ಸಾಧನವು ಕ್ಷಿಪಣಿಯಲ್ಲ. ಬದಲಾಗಿ ಕ್ಷಿಪಣಿಯನ್ನು ಅತಿವೇಗವಾಗಿ ಚಿಮ್ಮಿಸಬಲ್ಲ ಉಡಾವಣಾ ವ್ಯವಸ್ಥೆೆ. ಈ ತಂತ್ರಜ್ಞಾನವನ್ನು \ ಕೇವಲ ಅಮೆರಿಕ, ರಷ್ಯ, ಚೀನಾ ಮತ್ತು ಇಸ್ರೇಲ್ ಈ ನಾಲ್ಕು ದೇಶಗಳು ಮಾತ್ರ ಸದ್ಯ ಹೊಂದಿವೆ. ಇದೀಗ ಇಂಥ ಹೆಗ್ಗಳಿಕೆ ಪಡೆದಿರುವ ಐದನೇ ರಾಷ್ಟ್ರ ಭಾರತವಾಗಲಿದೆ. ಜಪಾನ್ ಮತ್ತು ಇರಾನ್ ಇದನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿವೆ.

ಇದರ ಉಪಯೋಗ ಮತ್ತು ಲಾಭಗಳಾದರೂ ಏನು ಎಂಬುದನ್ನು ಗಮನಿಸಿದರೆ ಇದು ಎಂಥ ಉನ್ನತ ಮತ್ತು ಅತ್ಯುತ್ತಮ ತಂತ್ರಜ್ಞಾನ ಎಂಬುದು ಗೊತ್ತಾಗುತ್ತದೆ. ಮುಖ್ಯವಾಗಿ ಈ ತಂತ್ರಜ್ಞಾನದ ನೆರವಿನಿಂದ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಹಾರಿಬಿಡಬಹುದು. ಆದರೆ ಅತಿ ಮಹತ್ವದ ಲಾಭ ಎಂದರೆ ಕ್ಷಿಪಣಿ ವ್ಯವಸ್ಥೆೆ ಸುಧಾರಣೆ. ಕ್ಷಿಪಣಿಗಳಲ್ಲಿ ಸಬ್‌ಸಾನಿಕ್ , ಸೂಪರ್‌ ಸಾನಿಕ್ ಮತ್ತು ಹೈಪರ್‌ಸಾನಿಕ್ ಎಂಬ ಮೂರು ವರ್ಗಗಳಿರುತ್ತವೆ. ಮೊದಲ ಎರಡು ವರ್ಗಗಳ ಕ್ಷಿಪಣಿ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಆದರೆ ಈಗಿನ ಆಧುನಿಕ ರಕ್ಷಣಾ ಯುಗದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ.

ಕ್ಷಿಪಣಿಗಳನ್ನು ಹಾರಿಸುವುದು ದೊಡ್ಡದಲ್ಲ. ಅವು ನಿಖರವಾಗಿ ಗುರಿ ತಲುಪುವುದು ಮುಖ್ಯ. ಕ್ಷಿಪಣಿಯಂತೆ ಕ್ಷಿಪಣಿ ನಿರೋಧಕ ವ್ಯವಸ್ಥೆೆಯೂ ಇರುತ್ತದೆ. ಅಂದರೆ ಕ್ಷಿಪಣಿಗಳನ್ನು ಗುರುತಿಸಿ ಅವುಗಳನ್ನು ನಾಶಪಡಿಸುವ ತಂತ್ರಜ್ಞಾನ ಇದು. ಹೈಪರ್‌ಸಾನಿಕ್ ಕ್ಷಿಪಣಿಗಳ ಮಹತ್ವ ಇಲ್ಲಿ ಗೊತ್ತಾಗುತ್ತದೆ. ಮೊದಲೇ ತಿಳಿಸಿದಂತೆ, ಶಬ್ದಕ್ಕಿಿಂತ ವೇಗವಾಗಿ ಅಂದರೆ ಗಂಟೆಗೆ 5,000 ಕಿ.ಮೀ. ಗೂ ಅಧಿಕ ವೇಗದಲ್ಲಿ ಇವು ಚಲಿಸುತ್ತವೆ. ಈ ಕಾರಣದಿಂದ ಇವು ಶತ್ರು ದೇಶಗಳ ರೇಡಾರ್ ಕಣ್ಣಿಗೆ ಬೀಳದೆ ಮುನ್ನುಗ್ಗಿ ಗುರಿಯನ್ನು ತಲುಪುತ್ತವೆ. ಚೀನಾ ದೇಶದ ಕ್ಯಾತೆ ಹೆಚ್ಚಾಗಿರುವ ಸಂದರ್ಭದಲ್ಲಿ ಇದೀಗ ಭಾರತ ಈ ವಿಷಯದಲ್ಲೂ ಅದನ್ನು
ಸರಿಗಟ್ಟಿದಂತಾ ಗಿರುವುದರಿಂದ ಅದಕ್ಕೂ ಒಂದು ಎಚ್ಚರಿಕೆಯ ಗಂಟೆ ಆಗಲಿದೆ.

ಕಳೆದ ವರ್ಷ ಭಾರತವು ಆಗಸದಲ್ಲೇ ಉಪಗ್ರಹವೊಂದನ್ನು ನಾಶಪಡಿಸಿ, ಆ ತಂತ್ರಜ್ಞಾನ ಸಾಧಿಸಿದ ಕೆಲವೇ ದೇಶಗಳ ಪಟ್ಟಿಗೆ ಸೇರಿತ್ತು. ಇದೆಲ್ಲದರ ತಾತ್ಪರ್ಯ ಏನೆಂದರೆ. ಇನ್ನುಮುಂದೆ ಯುದ್ಧಗಳು ಹಿಂದಿನಂತೆ ಹೊಡಿ ಬಡಿ ಸ್ವರೂಪದ್ದಾಗಿರುವುದಿಲ್ಲ. ಭವಿಷ್ಯದಲ್ಲಿ ತಾರಾ ಸಮರ ಅಂದರೆ ಆಗಸದಲ್ಲೇ ಯುದ್ಧ ನಡೆಯುವುದು. ಈ ಕಲೆ ಮತ್ತು ತಂತ್ರಜ್ಞಾನದಲ್ಲಿ ಪಾರಮ್ಯ ಸಾಧಿಸಿ ದವರಿಗೆ ಮಾತ್ರ ಉಳಿಗಾಲ. ಇಂಥ ಸಂದರ್ಭದಲ್ಲಿ ಭಾರತವು ಈ ರೀತಿಯ ಹೊಸ ಹೊಸ ತಂತ್ರಜ್ಞಾನಗಳನ್ನು ಕರಗತ ಮಾಡಿ ಕೊಳ್ಳುತ್ತಿರುವುದರಿಂದ ದೇಶದ ರಕ್ಷಣಾ ವ್ಯವಸ್ಥೆ ಅಷ್ಟರ ಮಟ್ಟಿಗೆ ಬಲಗೊಳ್ಳಲಿದೆ ಮತ್ತು ಸುರಕ್ಷತೆ ಸುಧಾರಿಸಲಿದೆ. ಅಲ್ಲದೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯೂ ಸಾಧ್ಯವಾಗಲಿದೆ.

Leave a Reply

Your email address will not be published. Required fields are marked *

error: Content is protected !!