Sunday, 8th September 2024

ರಾಜಧಾನಿ ಅವಾಂತರ, ಆಗದಿರಲಿ ನಿರಂತರ

ಬೆ ಂಗಳೂರೆಂಬುದು ಒಂದು ನಗರವಾದರೂ, ರಾಜ್ಯವನ್ನು ಪ್ರತಿನಿಧಿಸುವ ಸಂಕೇತವಾಗಿರುವ ರಾಜಧಾನಿ. ಈ ಕಾರಣದಿಂದಾಗಿ ಬೆಂಗಳೂರಿನ ಅಭಿವೃದ್ಧಿ ಮಹತ್ವವೆನಿಸುತ್ತದೆ. ಇಂದಿನ ಬಿಜೆಪಿ ಸರಕಾರ ಸಹ ಬಹಳಷ್ಟು ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.

ಆದರೆ ಪ್ರತಿ ವರ್ಷ ಮಳೆಯಿಂದಾಗಿ ಬೆಂಗಳೂರಿನ ಚಿತ್ರಣ ಬದಲಾಗಿಬಿಡುತ್ತದೆ. ಕೋಟಿ ಕೋಟಿ ಹಣ ವ್ಯಯಿಸಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದರೂ, ಮಳೆಗಾಲದಲ್ಲಿ ಬೆಂಗಳೂರಿನ ಸಮಸ್ಯೆ ಉಲ್ಬಣಿಸುತ್ತಿದೆ.

ಶಾಶ್ವತ ಪರಿಹಾರ ಒದಗಿಸಬೇಕಿರುವುದು ಸರಕಾರದ ಜವಾಬ್ದಾರಿ. ಬಿಬಿಎಂಪಿ ವತಿಯಿಂದ ‘ಮುಖ್ಯಮಂತ್ರಿಗಳ ನವ ನಗರೋತ್ಥಾನ’ ಯೋಜನೆಯಡಿ 8015.35 ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮತ್ತು ರಸ್ತೆ ಅಗಲೀ ಕರಣ ಕಾಮಗಾರಿಗೆ 704.96, ಕೋಟಿ ರು., ಗ್ರೇಡ್ ಸೆಪರೇಟರ್ ನಿರ್ಮಾಣಕ್ಕೆ 205.45ಕೋಟಿ, ರು., ಐಟಿಪಿಎಲ್‌ ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14ರಸ್ತೆಗಳ ಅಭಿವೃದ್ಧಿಗೆ 80ಕೋಟಿ ರು. ವೆಚ್ಚಕ್ಕೆ  ಅನುಮೋದನೆ ದೊರೆತು, ಅಭಿವೃದ್ಧಿ ಮುಂದುವರಿದಿದೆ.

ಜತೆಗೆ ಬೆಂಗಳೂರಿನ ಜನಸಂಖ್ಯೆ ಮತ್ತು ಮೂಲ ಸಮಸ್ಯೆಗಳ ನಿವಾರಣೆಗಾಗಿ ಪ್ರತ್ಯೇಕ ಕಾಯ್ದೆ ಜಾರಿಗೆ ಸಿದ್ಧತೆ ನಡೆಸಲಾಗಿದೆ. ಈ ಬಗ್ಗೆ ಬೆಂಗಳೂರಿನ ಜನಪ್ರತಿನಿಧಿಗಳೊಂದಿಗೆ ಸರಕಾರದಿಂದ ಸಮಾಲೋಚನೆಯೂ ನಡೆದಿದೆ. ಆದರೆ ಅಭಿವೃದ್ಧಿ ಎಂಬುದು ಕೇವಲ ಕಾಂಕ್ರೀಟೀಕರಣವಾಗದೆ ಮಳೆಗಾಲದಲ್ಲಿ ನೀರು ಸುಗಮ ವಾಗಿ ಹರಿಯಲು ಮತ್ತು ಇಂಗಲು ಸೂಕ್ತ ವ್ಯವಸ್ಥೆಗಳನ್ನು ಒದಗಿಸುವುದು ಮುಖ್ಯ. ಇವುಗಳು ಒತ್ತುವರಿ ಯಾಗದಂತೆ ತಡೆಯುವುದು ಸಹ ಮುಖ್ಯ.

ಇಲ್ಲವಾದರೆ ಎಷ್ಟೆಲ್ಲ ಅನುದಾನ ವ್ಯಯಿಸಿದರೂ, ಮಳೆಗಾಲದಲ್ಲಿ ರಾಜಧಾನಿಯ ಚಿತ್ರಣ ಬದಲಾಗುವುದು
ವಿಪರ್ಯಾಸದ ಸಂಗತಿ.

Leave a Reply

Your email address will not be published. Required fields are marked *

error: Content is protected !!