Sunday, 8th September 2024

ಕರೋನಾ ನಿರ್ವಹಣೆ

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದ ಸಾಧನೆ ತೃಪ್ತಿದಾಯಕವಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯೇ ತಿಳಿಸಿದೆ.

ಅತಿಹೆಚ್ಚು ಕೋವಿಡ್ ಸಾವಿನ ಪ್ರಕರಣಗಳು ದಾಖಲಾಗುತ್ತಿರುವ ನಾಲ್ಕು ರಾಜ್ಯಗಳಲ್ಲಿ ರಾಜ್ಯವೂ ಒಂದು. ಹಾಗೆಯೇ ಸೋಂಕಿನ  ಪ್ರಮಾಣ ಹೆಚ್ಚಳದಲ್ಲೂ ಮುಂಚೂಣಿಯಲ್ಲಿದೆ. ಕರೋನಾ ಪ್ರಕರಣಗಳು ಅಧಿಕವಾಗಿರುವ ರಾಜ್ಯದ ಜಿಲ್ಲೆೆಗಳ ಪಟ್ಟಿಯನ್ನು ಅದು ನೀಡಿದೆ. ಕೋವಿಡ್ ನಿರ್ವಹಣೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಮ್ಮ ಸರಕಾರ ದಿನನಿತ್ಯ ವಿವರ ನೀಡುತ್ತಲೇ ಇದೆ. ಆ ಪೈಕಿ ಗುಣಮುಖರಾಗುತ್ತಿರುವ ಸಂಖ್ಯೆೆ ಹೆಚ್ಚಿರುವುದು ಒಂದು. ಆದರೆ ರಾಜ್ಯ ಮತ್ತು ಕೇಂದ್ರ ನೀಡುತ್ತಿರುವ
ಮಾಹಿತಿ ತಾಳೆ ಆಗುತ್ತಿಲ್ಲ.

ಮೊದಮೊದಲು ಕರೋನಾವನ್ನು ಉತ್ತಮವಾಗಿ ನಿಯಂತ್ರಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಾವು ದಿನಕಳೆದಂತೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಕೇಂದ್ರ ಸರಕಾರದ ವರದಿಯಿಂದಲಂತೂ ವೇದ್ಯ. ಎಲ್ಲವೂ ನೆಟ್ಟಗಾಗಿದೆ ಎಂದು ರಾಜ್ಯ ಸರಕಾರ ಹೇಳಿದರೂ ಅದು ನಿಜವಲ್ಲ ಎಂಬುದು ಎಲ್ಲರಿಗೂ ಗೊತ್ತು. ಕರೋನಾ ಟೆಸ್‌ಟ್‌ ಸರಿಯಾಗಿ ಮಾಡದಿರುವುದು; ಚಿಕಿತ್ಸಾ  ಲಭ್ಯದ ಸಮಸ್ಯೆೆ; ಆಕ್ಸಿಜನ್, ವೆಂಟಿಲೇಟರ್  ಕೊರತೆ- ಇವುಗಳ ಬಗ್ಗೆೆ ಸಾಕಷ್ಟು ವರದಿಗಳು ಬಂದಿವೆ. ಈ ಕೇಂದ್ರ ಆರಂಭಕ್ಕೆೆ ಮೊದಲು ಹಾಗೂ ನಂತರ ಸಾಕಷ್ಟು ವಿವಾದಗಳು, ಹಗರಣಗಳ ಬಗೆಗೇ ಸುದ್ದಿಗಳು ಹೆಚ್ಚಾಗಿ ಹರಿದಾಡಿದವು.

ಇದೀಗ ಸೂಕ್ತ ಸ್ಪಂದನೆ ಇಲ್ಲ ಎಂಬ ಕಾರಣಕ್ಕೆೆ ಸ್ಥಗಿತಗೊಳಿಸಲಾಗುತ್ತಿದೆಯಂತೆ. ಇವೆಲ್ಲ ಸಂಗತಿಗಳು ರಾಜ್ಯದಲ್ಲಿ
ಕರೋನಾ ನಿರ್ವಹಣೆ ಸಮಾಧಾನಕರವಾಗಿಲ್ಲ ಎಂಬುದರ ಪ್ರತಿಬಿಂಬ. ಸರಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಪರೀಕ್ಷೆಯ ಪ್ರಮಾಣವನ್ನು ಹೆಚ್ಚು ಮಾಡಬೇಕು. ಆಸ್ಪತ್ರೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಸುಧಾರಿಸಬೇಕು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದರ ಅವಶ್ಕಕತೆ ಇದೆ.

ಹಾಗೆಯೇ, ಟೆಸ್ಟಿಿಂಗ್ ಕಿಟ್, ಆಕ್ಸಿಜನ್, ವೆಂಟಿಲೇಟರ್ ಮೊದಲಾದ ಅಗತ್ಯ ಪರಿಕರಗಳ ಸಮರ್ಪಕ ಪೂರೈಕೆಗೆ ಗಮನಹರಿಸಬೇಕು.
ಹಾಗೆಯೇ ವೈದ್ಯಕೀಯ ಸಿಬ್ಬಂದಿಗೆ ಸೌಲಭ್ಯ ಹಾಗೂ ಅವರಿಗೆ ಸೂಕ್ತ ರಕ್ಷಣೆಗೂ ಕ್ರಮ ಕೈಗೊಳ್ಳಬೇಕು. ಒಟ್ಟಿನಲ್ಲಿ, ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಲೋಪದೋಷಗಳನ್ನು ಸರಿಪಡಿಸಿಕೊಂಡು ಕರೋನಾ ನಿರ್ವಹಣೆಯಲ್ಲಿ ಮಾದರಿ ರಾಜ್ಯ ಎನಿಸಬೇಕು.

Leave a Reply

Your email address will not be published. Required fields are marked *

error: Content is protected !!