Sunday, 8th September 2024

ವೇಗದ ಅಭಿವೃದ್ಧಿ ಜತೆಗೆ ಕಸ ಸಂಸ್ಕರಣೆಗೆ ಆದ್ಯತೆ

ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಮಹಾನಗರಗಳಲ್ಲಿ ಪ್ರಮುಖವಾದದ್ದು ಬೆಂಗಳೂರು. ಜಾಗತಿಕವಾಗಿ ಜಿಡಿಪಿ ಕೆಳಮಟ್ಟದಲ್ಲಿದ್ದರೂ ಪ್ರಗತಿಪಥದಲ್ಲಿ ಹಿಂದೆಬೀಳದೆ ಬಹಳಷ್ಟು ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿ.

ಜಗತ್ತಿನಲ್ಲೇ ನಾಲ್ಕನೆ ‘ತಂತ್ರಜ್ಞಾನ ಕ್ಲಸ್ಟರ್’ ಆಗಿರುವುದರ ಜತೆಗೆ ಇಡೀ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಆದಾಯ ನೀಡುವ
ಮೂರನೇ ನಗರವಾಗಿದೆ. ಆದರೆ ಇಂಥ ರಾಜಧಾನಿಯನ್ನು ಕಸ ವಿಲೇವಾರಿ ಬಾಽಸುತ್ತಿದೆ ಎಂಬುದೇ ವಿಪರ್ಯಾಸದ ಸಂಗತಿ.
ಬೆಂಗಳೂರು ನಗರದಲ್ಲಿ ದಿನೇ ದಿನೇ ಹಸಿಕಸ ವಿಂಗಣೆಯ ಪ್ರಮಾಣ ಹೆಚ್ಚಾಗುತ್ತಿದೆ. ಜನರು ಕಸವನ್ನು ವಿಂಗಡಿಸಿ ನೀಡದಿದ್ದರೆ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ತಿಳಿಸುತ್ತಿದೆ. ಜತೆಗೆ ವಿಂಗಡಣೆಯಾದ ಕಸವನ್ನು ಸಂಸ್ಕರಿಸಲಾಗದೆ ಭೂಭರ್ತಿ ಸ್ಥಳಗಳಲ್ಲಿ ವಿಲೇವಾರಿ ಮಾಡುವ ಅನಿವಾರ್ಯತೆಗೆ ಸಿಲುಕಿದೆ ಬಿಬಿಎಂಪಿ.

ದಂಡ ಪ್ರಯೋಗದಿಂದಾಗಿ ಪ್ರಸ್ತುತ ಹಸಿ ಕಸ ವಿಂಗಡಣೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದನ್ನು ಸಂಸ್ಕರಿಸುವುದು ಬಿಬಿಎಂಪಿ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಕೆಲವೆಡೆ ಮುಚ್ಚಲಾಗಿರುವ ಹಸಿ ಕಸ ಸಂಸ್ಕರಣಾ ಘಟಕಗಳನ್ನು ಆರಂಭಸಬೇಕಿರುವ ಅವಶ್ಯಕತೆ ಹೆಚ್ಚಾಗಿದೆ. ಆದರೆ ಒಂದೆಡೆ ಈ ಸಂಸ್ಕರಣಾ ಘಟಕದ ಕುರಿತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ವ್ಯಾಜ್ಯ ಇರುವುದರಿಂದ, ಇದರ ಆರಂಭ ಕಗ್ಗಂಟಾಗಿ ಪರಿಣಾಮಿಸಿದೆ.

ಮತ್ತೆ ಕೆಲವೆಡೆಗಳಲ್ಲಿ ಸಂಸ್ಕರಣಾ ಘಟಕಗಳ ಆರಂಭಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಘಟಕಗಳ ಆರಂಭ ಸ್ಥಗಿತಗೊಂಡಿವೆ. ಇಂಥ ಬೆಳವಣಿಗೆಯಿಂದಾಗಿ ಬೆಂಗಳೂರು ಪ್ರಸ್ತುತ ಹಸಿ ಕಸ ವಿಂಗಡಣೆಯ ಸಮಸ್ಯೆಗೆ ಸಿಲುಕಿ ದಂತಾಗಿದೆ. ಇಡೀ ಏಷ್ಯಾ ಖಂಡದಲ್ಲಿ ವೇಗವಾಗಿ ಬೆಳೆಯುತ್ತಿದ್ದರೂ, ಕಸ ಸಂಸ್ಕರಣೆಯ ಸಂಕಷ್ಟ ಅನುಭವಿಸುತ್ತಿರುವುದು
ದುರಂತದ ಸಂಗತಿ.

Leave a Reply

Your email address will not be published. Required fields are marked *

error: Content is protected !!