Sunday, 8th September 2024

ಜನನಾಯಕನಿಗೆ ಸಲ್ಲಿಸಿದ ಮಹತ್ವದ ಗೌರವ

ಈ ದೇಶ ಅನೇಕ ಮಹಾನೀಯ ದೇಶ ಸೇವಕರನ್ನು ಕಂಡಿದೆ. ಇಂಥವರಿಗೆ ಗೌರವ ಸೂಚಕವಾಗಿ ಹಲವು ಪ್ರತಿಮೆಗಳನ್ನು
ಸ್ಥಾಪಿಸಲಾಗಿದೆ.

ರಸ್ತೆಗಳಿಗೂ ಸಹ ಸಾಧಕರ ಹೆಸರನ್ನು ನಾಮಕರಣಗೊಳಿಸಲಾಗುತ್ತಿದೆ. ಈ ಬೆಳವಣಿಗೆಗಳು ಸಾಧಕರಿಗೆ, ದೇಶಸೇವಕರಿಗೆ ಜನರ
ಪರವಾಗಿ ಸರಕಾರಗಳು ಸಲ್ಲಿಸುವ ಗೌರವ. ಆದರೆ ಕೆಲವೊಮ್ಮೆ ಹೆಸರುಗಳನ್ನು ಸೂಚಿಸುವ ವೇಳೆ ವಿವಾದಗಳೂ ಏರ್ಪಡುವು ದುಂಟು. ಇದಕ್ಕೆ ಜಾತಿಯ ಕಾರಣ, ಪಕ್ಷಗಳ ಕಾರಣಗಳಾಗಿರುತ್ತವೆ.

ಆದರೆ ಪ್ರತಿಮೆಗಳಿಗೆ, ರಸ್ತೆಗಳಿಗೆ, ಪ್ರಮುಖ ತಾಣಗಳಿಗೆ ಹೆಸರನ್ನು ಸೂಚಿಸುವಾಗ ಆ ನಾಯಕರ ಸಾಧನೆ, ಸೇವೆ ಮುಖ್ಯವಾಗಬೇಕೇ ಹೊರತು ಪ್ರತಿಷ್ಠೆಗೆ ಆಸ್ಪದ ವಿರಬಾರದು. ಇದೀಗ ಇಂಥ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಲಿದೆ ಮೊಟೆರಾ ಸ್ಟೇಡಿಯಂ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಮೊಟೆರಾ ಸ್ಟೇಡಿಯಂ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಸರ್ದಾರ್ ಪಟೇಲ್ ಸ್ಟೇಡಿಯಂ ಎಂದು ಕರೆಯಲು ನಿರ್ಧರಿಸಲಾಗಿತ್ತು.

ಆದರೆ ಇದೀಗ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಗೊಳಿಸಲಾಗಿದೆ. ಸರ್ದಾರ್ ಪಟೇಲರ ಹೆಸರಿನ ಬದಲಾಗಿ ಮೋದಿಯವರ ಹೆಸರನ್ನು ನಾಮಕರಣಗೊಳಿರುವುದರಿಂದ ಮುಂದಿನ ದಿನಗಳಲ್ಲಿ ಅಪಸ್ವರಗಳೂ ಆರಂಭಗೊಳ್ಳ ಬಹುದು. ಆದರೆ ದೇಶಕಂಡ ಉತ್ತಮ ಜನನಾಯಕ ಎಂಬ ಖ್ಯಾತಿಗೆ ಕಾರಣವಾಗಿರುವ ಪ್ರಧಾನಿ ಮೋದಿಗೆ ಈ ದೇಶ ಸಲ್ಲಿಸುವ ಒಂದು ಗೌರವ. ಯಾವುದೇ ವ್ಯಕ್ತಿಯ ಸಾಧನೆಯನ್ನು ಅವರ ಅನುಪಸ್ಥಿತಿಯಲ್ಲಿ ಸ್ಮರಿಸುವುದಕ್ಕಿಂತಲೂ ಸಾಧನೆಯ ಸಂದರ್ಭ ದಲ್ಲಿಯೇ ಗೌರವ ಸಲ್ಲಿಸುವುದು ಮಹತ್ವದ ಕಾರ್ಯ.

ಈ ನಿಟ್ಟಿನಲ್ಲಿ ಇದೀಗ ಮೊಟೆರಾ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣಗೊಳಿಸಿರುವುದು
ಮೋದಿಯವರ ಜನಪ್ರಿಯತೆಗೆ ಸಲ್ಲಿಸಿದ ಮಹತ್ವದ ಗೌರವ.

Leave a Reply

Your email address will not be published. Required fields are marked *

error: Content is protected !!