Sunday, 8th September 2024

ರಾಷ್ಟ್ರಬದ್ಧತೆ ಅವಶ್ಯ

ದೇಶವಿಂದು ಹಲವು ರೀತಿಯ ಸಂಕಷ್ಟ ಎದುರಿಸುತ್ತಿದೆ. ಕರೋನಾ ಸಮಸ್ಯೆಯಿಂದಾಗಿ ಕಂಗೆಟ್ಟಿರುವ ದಿನಗಳಲ್ಲಿ ಆರ್ಥಿಕ ಸಮಸ್ಯೆ, ಶೈಕ್ಷಣಿಕ ಸಮಸ್ಯೆಗಳು ಕಗ್ಗಂಟಾಗಿಸಿವೆ.

ಇದೇ ವೇಳೆ ಕೃಷಿ ಕಾಯಿದೆ ವಿವಾದದ ರೂಪು ಪಡೆದಿರುವುದು ಸಮಸ್ಯೆಗಳ ಸಾಲಿಗೆ ಮತ್ತೊಂದು ಸೇರ್ಪಡೆ. ಇಂಥ ಜಟಿಲ ಸ್ಥಿತಿ ಯಲ್ಲಿ ಪ್ರಧಾನಿ ಮೋದಿ ನೀಡಿರುವ ಕರೆ ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ದೇಶದ ಮೂಲ ಸೌಕರ್ಯ ಗಳ ಅಭಿವೃದ್ಧಿಯನ್ನು ರಾಜಕೀಯದಿಂದ ದೂರವಿರಿಸುವುದು ಅಗತ್ಯ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕನ್ನು ಚಲಾಯಿಸುವ ವೇಳೆ ರಾಷ್ಟ್ರ ಬದ್ಧತೆ ಮೆರೆಯಬೇಕೆ ಹೊರತು ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡುವುದು ಸರಿಯಲ್ಲ. ಭಾರತವನ್ನು ಬೃಹತ್ ಆರ್ಥಿಕ ಶಕ್ತಿಯನ್ನಾಗಿ ಮಾಡುವ ಪ್ರಯತ್ನ ಆರಂಭಿಸ ಲಾಗಿದೆ. ಇದಕ್ಕಾಗಿ ಹೆದ್ದಾರಿಗಳು, ರೈಲ್ವೆ, ವಾಯುಮಾರ್ಗಗಳು, ಜಲಮಾರ್ಗ ಹಾಗೂ ಹೈವೇಸ್ ಎಂಬ ಐದು ಚಕ್ರಗಳ ಅಭಿ ವೃದ್ಧಿಗೆ ಆದ್ಯತೆ ನೀಡಲಾಗಿದೆ. ಈ ವೇಳೆ ರಾಜಕೀಯ ಸರಿಯಲ್ಲ ಎಂಬುದಾಗಿ ಪ್ರಧಾನಿ ಮೋದಿ ವಿವರಿಸಿದ್ದಾರೆ.

ಸಶಕ್ತ ಭಾರತಕ್ಕೆ ಪ್ರಯತ್ನಗಳು ಸಾಗಿರುವ ವೇಳೆಯಲ್ಲಿ ಪ್ರತಿಪಕ್ಷಗಳ ವಿರೋಧ ಅಭಿವೃದ್ಧಿಗೆ ಅಡ್ಡಿಯಾಗಬಾರದು ಎಂಬುದು ಪ್ರಧಾನಿಯವರ ಆಶಯ. ಪ್ರಸ್ತುತ ದಿನಗಳಲ್ಲಿ ಆಡಳಿತ ಪಕ್ಷದ ಮೇಲೂ ಜವಾಬ್ದಾರಿ ಹೆಚ್ಚಾಗಿದೆ. ಅಂತರ್ಜಲವನ್ನು ಹೆಚ್ಚು ಬಳಕೆ ಮಾಡಿಕೊಳ್ಳುತ್ತಿರುವ 15 ದೇಶಗಳ ಪೈಕಿ ಭಾರತ ಪ್ರಥಮ ಸ್ಥಾನದಲ್ಲಿದೆ.

ಶೇ.70ರಷ್ಟನ್ನು ಕೃಷಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಅಂತರ್ಜಲವನ್ನು ರಕ್ಷಿಸಬೇಕಾದ ಬಹುಮುಖ್ಯ ಜವಾ ಬ್ದಾರಿಯೂ ದೇಶದ ಮೇಲಿದೆ. ಒಂದೆಡೆ ಸಶಕ್ತವಾಗಿ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಈ ರೀತಿ ಸಾಲು ಸಾಲು ಸಂಕಷ್ಟಗಳನ್ನು ಅನುಭವಿಸುತ್ತಿದೆ. ಈ ವೇಳೆ ರಾಜಕೀಯಕ್ಕಿಂತಲೂ ಪ್ರತಿಪಕ್ಷಗಳ ಸಹಕಾರ ಮುಖ್ಯವಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!