Sunday, 8th September 2024

ಅಂಚೆ ಇಲಾಖೆ ಸಾಧನೆ ಶ್ಲಾಘನೀಯವಾದದ್ದು

ದೇಶದ ಅಂಚೆ ವ್ಯವಸ್ಥೆಯಲ್ಲಿ ರಾಜ್ಯದ ಅಂಚೆ ಇಲಾಖೆ ಮಹತ್ವದನ್ನು ಸಾಧಿಸಿದೆ. ಇಂದಿನ ಸಾಮಾಜಿಕ ಮಾಧ್ಯಮಗಳ ಪೈಪೋಟಿಯ ನಡುವೆ ಅಂಚೆ ಇಲಾಖೆ ಉಳಿಯುವುದೇ ದುಸ್ತರ ಎನ್ನುವಂಥ ಸನ್ನಿವೇಶ ನಿರ್ಮಾಣವಾಗಿತ್ತು.

ಆದರೆ ತನ್ನ ಕಾರ್ಯ ವೈಖರಿಯಲ್ಲಿ ಬದಲಾವಣೆಯನ್ನು ಅಳವಡಿಸಿಕೊಂಡ ರಾಜ್ಯದ ಅಂಚೆ ಇಲಾಖೆ ಮಹತ್ವದನ್ನು ಸಾಧಿಸಿದ್ದು, ಇದು ಶ್ಲಾಘನೀಯ ಸಂಗತಿ. ಅಂಚೆ ಕಚೇರಿಗಳಲ್ಲಿ ಗ್ರಾಹಕ ಸೇವೆಗಳನ್ನು ಅಳವಡಿಸಿಕೊಂಡ ಅಂಚೆ ಇಲಾಖೆಯು ಕೇವಲ ಎರಡು ತಿಂಗಳ ಅವಧಿಯಲ್ಲಿ ವಹಿವಾಟು ಮತ್ತು ಆದಾಯ ಸಂಗ್ರಹಣೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನಪಡೆದು ಕೊಂಡಿದ್ದು ಹೆಗ್ಗಳಿಕೆಗೆ ಪಾತ್ರ ವಾಗಿದೆ.

ಇದರಿಂದಾಗಿ ಅವನತಿ ಅಂಚಿಗೆ ಸಾಗುತ್ತಿದ್ದ ಅಂಚೆ ಇಲಾಖೆಗೆ ಹೊಸ ಕಾಯಕಲ್ಪ ದೊರೆತಂತಾಗಿದೆ. ಗ್ರಾಹಕ ಸೇವೆಗಳಲ್ಲಿ ಮೊಬೈಲ್ ರೀಚಾರ್ಜ್, ನೀರು, ವಿದ್ಯುತ್, ಗ್ಯಾಸ್ ಬಿಲ್‌ಗಳ ಪಾವತಿ, ವಿಮೆಗಳ ನವೀಕರಣ ಸೇರಿದಂತೆ ಅನೇಕ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ. ರಾಜ್ಯದಲ್ಲಿ ಒಟ್ಟು 1701 ಅಂಚೆಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಪೈಕಿ 851 ಕಚೇರಿಗಳಲ್ಲಿ ಗ್ರಾಹಕ ಸೇವೆಗಳನ್ನು ಆರಂಭಿಸಲಾಗಿದೆ.

ಮಾರ್ಚ್ ವೇಳೆಗೆ ಉಳಿದ 850 ಕಚೇರಿಗಳಲ್ಲಿ ಗ್ರಾಹಕ ಸೇವೆಗಳನ್ನು ಆರಂಭಿಸಲು ಪ್ರಯತ್ನಗಳು ಆರಂಭಗೊಂಡಿವೆ. ಹೊಸ ದೊಂದು ಪ್ರಯತ್ನದ ಮೂಲಕ ಪುನಶ್ಚೇತನದ ಜತೆಗೆ ಆದಾಯಗಳಿಕೆಯಲ್ಲೂ ಯಶಸ್ಸನ್ನು ಸಾಧಿಸಿದ ಈ ಕಾರ್ಯ ಮಾದರಿ.

Leave a Reply

Your email address will not be published. Required fields are marked *

error: Content is protected !!