Thursday, 19th September 2024

ಯುವ ‘ಶಕ್ತಿ’ಹೀನ

ಸದೃಢ ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರ ಅಥವಾ ರಾಜ್ಯ ಎಂದಿಗೂ ಸದೃಢವಾಗಿರುತ್ತದೆ ಎಂಬ ಮಾತಿದೆ. ಆದರೆ ಇದೀಗ
ಕರ್ನಾಟಕದ ಯುವ ಸಮುದಾಯ ರಕ್ತಹೀನ ಸಮಸ್ಯೆಯಿಂದ ಬಳಲುತ್ತಿರುವ ಆಘಾತಕಾರಿ ಬೆಳವಣಿಗೆ ಕಂಡುಬಂದಿದೆ.

ಕರ್ನಾಟಕ ಸೇರಿದಂತೆ 17 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಮೊದಲ ಹಂತದ ಸಮೀಕ್ಷೆ ನಡೆಸಿ, ವರದಿ ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಕರ್ನಾಟಕದ ಯುವ ಸಮುದಾಯದಲ್ಲಿ ಇತ್ತೀಚೆಗೆ ರಕ್ತಹೀನತೆ ಸಮಸ್ಯೆ ಅಧಿಕವಾಗುತ್ತಲೇ ಇದೆ. ಅದರಲ್ಲೂ ಶೇ.49.4ರಷ್ಟು ಯುವತಿಯರು ರಾಜ್ಯದಲ್ಲಿ ರಕ್ತಹೀನತೆ ಸಮಸ್ಯೆ ಯಿಂದ ಬಳಲುತ್ತಿದ್ದಾರೆ.

ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಈ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಈ ಬಗ್ಗೆ ರಾಜ್ಯ ಸರಕಾರಕ್ಕೆ
ತಿಳಿವಳಿಕೆ ನೀಡಲಾಗಿದೆ. 2015-16ರ ಅವಽಯಲ್ಲಿ ಬಿಡುಗಡೆಯಾಗಿದ್ದ ಅಂಕಿ ಅಂಶದಲ್ಲಿಯೂ ರಾಜ್ಯದ ಯುವತಿಯರ ಪೈಕಿ ಶೇ.45.3ರಷ್ಟು ಯುವತಿಯರು ರಕ್ತಹೀನತೆಯಿಂದ ಬಳಲುತ್ತಿರುವುದಾಗಿ ತಿಳಿಸಲಾಗಿತ್ತು. ಆದರೂ ಸಹ ಇದುವರೆಗೂ
ಸುಧಾರಣೆಗೊಂಡಿಲ್ಲ. ಬದಲಾಗಿ ರಕ್ತಹೀನತೆಯಿಂದ ಬಳಲುತ್ತಿರುವ ಯುವತಿಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಮೊದಲ ಹಂತದಲ್ಲಿ 17 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ಸಮೀಕ್ಷಾ ವರದಿ ಬಿಡುಗಡೆಗೊಳಿಸಿದೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ತಡೆ ಹಿಡಿಯಲಾಗಿದ್ದ ಉಳಿದ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಎರಡನೇ ಹಂತದ ಸಮೀಕ್ಷೆ 2021ರ ಮೇ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಇದೊಂದು ಆಘಾತಕಾರಿ ಬೆಳವಣಿಗೆಯಾಗಿದ್ದು, ಈ ರೀತಿಯ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರಕಾರ ಹೆಚ್ಚಿನ ಆಸಕ್ತಿ, ಆದ್ಯತೆ ನೀಡಬೇಕಿರುವುದು ಅಗತ್ಯ.