Sunday, 8th September 2024

ಸಾಹಿತಿಗಳ ಸ್ಮಾರಕಗಳು ಆದ್ಯತೆಯಾಗಲಿ

ಕನ್ನಡ ನಾಡು ಉತ್ತಮ ಸಾಂಸ್ಕೃತಿಕ ವಾತವರಣವನ್ನು ಹೊಂದಿದೆ. ಜತೆಗೆ ಸಾಹಿತ್ಯದ ಸಾಧನೆಯಲ್ಲೂ ಶ್ರೇಷ್ಠತೆಯನ್ನು ಸಾಧಿಸಿದೆ.

ಜತೆಗೆ ಕಲಬುರಗಿ ಹಾಗೂ ಗೌರಿ ಲಂಕೇಶರಂಥ ಸಾಹಿತಿಗಳ ಹತ್ಯೆ ಮೂಲಕ ಕುಖ್ಯಾತಿಗೂ ಕಾರಣವಾಗಿದೆ. ಆದರೆ ನೈಜವಾದ ಸಾಹಿತ್ಯಿಕ ದೃಷ್ಟಿಯಿಂದ ಕರ್ನಾಟಕ ರಾಜ್ಯದ ಪಾತ್ರವನ್ನು ಗುರುತಿಸುವುದಾದರೆ, ಶ್ರೇಷ್ಠ ಸಾಹಿತಿಗಳ ತವರೂರು ಕರ್ನಾಟಕ. ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದದ್ದು ಮತ್ತೊಂದು ಹೆಗ್ಗಳಿಕೆ. ಆದರೆ ನಮ್ಮ ರಾಜ್ಯದಲ್ಲಿ ಸಾಹಿತ್ಯ ಕ್ಷೇತ್ರದ ಕಾರ್ಯಗಳು ನಿರೀಕ್ಷಿಸಿದ ಪ್ರಮಾಣದಲ್ಲಿ ಸಾಗುತಿಲ್ಲವೆಂಬುದು ವಿಪರ್ಯಾಸ.

ಸಾಹಿತ್ಯ ಕ್ಷೇತ್ರಕ್ಕೆ ಆದ್ಯತೆ ನೀಡುವುದೆಂದರೆ ಸಮ್ಮೇಳನ ಗಳನ್ನು, ಸಮಾರಂಭಗಳನ್ನು ನಡೆಸುವುದು ಅನ್ನುವಂಥ ಸ್ಥಿತಿಯತ್ತ ಸಾಗುತ್ತಿದೆ ಸಾಹಿತ್ಯ ಕ್ಷೇತ್ರದ ಪ್ರಗತಿ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಸಾಹಿತಿಗಳು ಗಳಿಸಿದ ಸಾಧನೆ ಯನ್ನು ಕೊಂಡಾಡುವ ನಾವುಗಳು ಅವರಿಗೆ ಸಲ್ಲಬೇಕಾದ ಗೌರವವನ್ನು ಸಮರ್ಪಕವಾಗಿ ಸಲ್ಲಿಸಿದ್ದೇವೆಯೇ ಎಂಬುದರ ಬಗ್ಗೆ ಅವಲೋಕನದ ಅಗತ್ಯವಿದೆ.

ರಾಷ್ಟ್ರಕವಿಯಾಗಿ ಗೌರವಿಸಲ್ಪಟ್ಟ ಜಿ.ಎಸ್.ಶಿವರುದ್ರಪ್ಪ ಹಾಗೂ ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಯವರು ಅಗಲಿದ್ದರೂ, ಅವರ ಸಾಹಿತ್ಯ ಸಾಧನೆ ರಾಜ್ಯಕ್ಕೆ ಗೌರವವನ್ನು ತಂದುಕೊಟ್ಟಿದೆ. ಈ ಕಾರಣದಿಂದಾಗಿ ಸರಕಾರ ಇವರ ಸ್ಮಾರಕ ನಿರ್ಮಿಸಬೇಕೆಂಬ ಬಗ್ಗೆ ಬೇಡಿಕೆ ವ್ಯಕ್ತವಾಗುತ್ತಿದ್ದರೂ, ಈ ಕಾರ್ಯ ಇಂದಿಗೂ ಪೂರ್ಣಗೊಂಡಿಲ್ಲ. ಸರಕಾರ ಅಭಿವೃದ್ಧಿಗೆ
ಅನುದಾನಗಳನ್ನು ಘೋಷಿಸುವುದರ ಜತೆಗೆ ರಾಜ್ಯದ ಶ್ರೇಷ್ಠ ಸಾಹಿತಿಗಳ ಹಾಗೂ ಸಾಧಕರ ಸ್ಮಾರಕಗಳನ್ನು ನಿರ್ಮಿಸಬೇಕಿರು ವುದು ಇಂದಿನ ಅಗತ್ಯ.

ಈ ಮೂಲಕ ಮುಂದಿನ ಪೀಳಿಗೆ ಇವರ ಪರಿಚಯ, ಸಾಹಿತ್ಯ ಸೇವೆಯನ್ನು ಪರಿಚಯಿಸುವಲ್ಲಿ ಈ ಕಾರ್ಯ ನೆರವಾಗಲಿದೆ. ಜತೆಗೆ ಇಂಥ ಸ್ಮಾರಕಗಳು ಪ್ರವಾಸಿ ತಾಣಗಳಾಗಿ ರಾಷ್ಟ್ರ – ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ರಾಜ್ಯದ ಘನತೆಯನ್ನು ಹೆಚ್ಚಿಸುವಲ್ಲಿ ಪೂರಕವಾಗಲಿವೆ.

Leave a Reply

Your email address will not be published. Required fields are marked *

error: Content is protected !!