Sunday, 8th September 2024

ಶಾಲೆ ಆರಂಭ ; ಬೆದರಿಕೆಗಿಂತ ಜಾಗೃತಿಯಿರಲಿ

ರಾಜ್ಯದಲ್ಲಿ ರೂಪಾಂತರಿ ಕರೋನಾ ಅಲೆಯ ನಡುವೆಯೂ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಆರಂಭಗೊಂಡ ಎರಡೇ ದಿನಕ್ಕೆ ರಾಜ್ಯದ ವಿವಿಧ ಭಾಗದಲ್ಲಿ 30ಕ್ಕೂ ಹೆಚ್ಚು ಶಿಕ್ಷಕರಿಗೆ ಕರೋನಾ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಇದೀಗ ಈ ಆತಂಕದಿಂದ ಶಾಲೆಗೆ ಮಕ್ಕಳನ್ನು ಕಳುಹಿಸಲು ಅನೇಕರು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ಕರೋನಾ ಇದೆ ಎನ್ನುವ ಮಾತ್ರಕ್ಕೆ ಶಾಲಾ ಕಾಲೇಜುಗಳನ್ನು ಆರಂಭಿಸದೇ ಇರುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಈ ಕಾಣದ ವೈರಸ್ ನಮ್ಮ ನಡುವೆ ಸುದೀರ್ಘ ಕಾಲದವರೆಗೂ ಇರಲಿದೆ. ಹೀಗಿರುವಾಗ, ಕರೋನಾ ಸೋಂಕು ಹೋಗುವ ತನಕ ವಿದ್ಯಾರ್ಥಿಗಳನ್ನು ಮನೆಯ ಲ್ಲಿಯೇ ಕೂರಿಸಿಕೊಂಡು ಇರಲು ಸಾಧ್ಯವಿಲ್ಲ.

ಆನ್‌ಲೈನ್ ಶಿಕ್ಷಣ ಎನ್ನುವುದು ನಗರ ಭಾಗದಲ್ಲಿ ಸರಿಯಾಗಿ ನಡೆಯಬಹುದು. ಆದರೆ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡಾಗ ಇದು ಕಾರ್ಯಸಾಧುವಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಆದ್ದರಿಂದ ಇದೀಗ ರಾಜ್ಯ ಸರಕಾರ ಶಾಲೆಗಳನ್ನು ಆರಂಭಿಸಲು ತಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ. ಆದರೆ ಈ ನಿರ್ಧಾರದ ಬಳಿಕ ಶಾಲೆ ಆಗಮಿಸುವ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ.

ಕರೋನಾದಿಂದ ಆಗುವ ಸಮಸ್ಯೆಯ ಬಗ್ಗೆ ಪೋಷಕರು ಹಾಗೂ ಮಕ್ಕಳಲ್ಲಿ ಮೂಡಿರುವ ಆತಂಕವನ್ನು ತೊಡೆದು ಹಾಕಿ, ಜನರಲ್ಲಿ ಕರೋನಾದಿಂದ ರಕ್ಷಣೆ ಮಾಡಿಕೊಳ್ಳಲು ಇರುವ ದಾರಿಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಶಾಲೆಗಳನ್ನು ಆರಂಭಿಸಿ ರುವ ಸರಕಾರ, ಇದೀಗ ಮಕ್ಕಳಿಗೆ ಕರೋನಾ ಜಾಗೃತಿಯೊಂದಿಗೆ ಅದರಿಂದ ತಪ್ಪಿಸಿಕೊಳ್ಳಲು ಇರುವ ಕ್ರಮದ ಬಗ್ಗೆ ಚಿಂತಿಸ ಬೇಕಿದೆ.

ಸಾಮಾಜಿಕ ಅಂತರದಲ್ಲಿ ವಿದ್ಯಾರ್ಥಿಗಳನ್ನು ಕೂರಿಸುವುದು, ಸರಕಾರದ ವತಿಯಿಂದಲೇ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ವಿತರಿಸುವ ಕೆಲಸವನ್ನು ಮಾಡಬೇಕಿದೆ. ಪೋಷಕರು ಸಹ, ಕರೋನಾ ಬಗ್ಗೆ ಆತಂಕದಿಂದ ಇರುವ ಬದಲು ಮಕ್ಕಳು ಕರೋನಾ ಸಿಲುಕದಂತೆ ಮಾಡಲು ಅಗತ್ಯವಿರುವ ಕ್ರಮದ ಚಿಂತಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!